ಅಕ್ರಮಗಳನ್ನು ಬಯಲಿಗೆಳೆಯುವ ಮಾಧ್ಯಮಗಳ ಮೇಲೆ ದಬ್ಬಾಳಿಕೆ ಸರಿಯಲ್ಲ – ಕೆ.ಶೇಷಾದ್ರಿ

ರಾಮನಗರ: ಅಕ್ರಮ, ಭ್ರಷ್ಟಚಾರ ಪ್ರಕರಣಗಳನ್ನು ದಾಖಲೆ ಸಹಿತ ಬಯಲಿಗೆಳಯಲು ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ಮಾಧ್ಯಮಗಳು ಮತ್ತು ಮಾಧ್ಯಮ ಪ್ರತಿನಿಧಿಗಳ ವಿರುದ್ದ ಅಧಿಕಾರದಲ್ಲಿರುವವರ ಧಮನಕಾರಿ ನೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಮನಗರ ಚನ್ನಪಟ್ಟಣ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಮತ್ತು ಮೊಮ್ಮಗನ ವಿರುದ್ದ ಕೇಳಿ ಬಂದಿರುವ ಭ್ರಷ್ಟಾಚಾರದ ಅರೋಪವನ್ನು ದಾಖಲೆಗಳ ಸಹಿತ ಸಾಭೀತು ಮಾಡಲೆತ್ನಿಸಿದ ಕನ್ನಡದ ಚಾನೆಲ್ ವಿರುದ್ದ ಹಾಲಿ ಸರ್ಕಾರ  ಅಧಿಕಾರ ಬಲಪ್ರಯೋಗ ಮಾಡಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಮಾಧ್ಯಮ ಸ್ವಾತಂತ್ರೃ ಹರಣವಾದರೆ ಭ್ರಷ್ಟಾಚಾರ ಬಯಲಿಗೆ ಬರುವುದಾದರು ಹೇಗೆ? ಎಂದರು. ಬಿ.ಎಸ್.ವೈ ಕುಟುಂಬ ಸದಸ್ಯರು ಬೇನಾಮಿ ಕಂಪನಿ ಸೃಷ್ಠಿಸಿ ಅದರ ಮೂಲಕ ಜಿ.ಎಸ್.ಟಿ ಪಾವತಿ ಮಾಡದೆ ಆರ್.ಟಿ.ಜಿ.ಎಸ್ ಮೂಲಕ ಕೋಟ್ಯಾಂತರ ರೂ ಟ್ರಾನ್ಸ್‌ರ್ ಮಾಡಿದ್ದಾರೆ.

ಇದೇ ವಿಚಾರದಲ್ಲಿ ತಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಿ.ಎಸ್.ವೈ ಅವರನ್ನು ಪ್ರಶ್ನಿಸಿದ್ದಾರೆ. ನ್ಯಾಯಂಗ ತನಿಖೆಗೂ ಆಗ್ರಹಿಸಿದ್ದಾರೆ. ಹಣ ವರ್ಗಾವಣೆ ವಿಚಾರ ಬ್ಯಾಂಕ್ ಖಾತೆಗಳೇ ಸಾಕ್ಷಿ ಹೇಳುತ್ತಿವೆ. ಭ್ರಷ್ಟಾಚಾರ ನಡೆದಿರುವುದು ಗೊತ್ತಿದ್ದರು, ಬಿಜೆಪಿ ಹೈ ಕಮಾಂಡ್ ಸುಮ್ಮನಿರುವುದು ಶೋಚನೀಯ ಎಂದರು.

ಮಾಧ್ಯಮ ಸ್ವಾತಂತ್ರೃವನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕದಲ್ಲ ಎಂದು ಕೆ.ಶೇಷಾದ್ರಿ ಹರಿಹಾಯ್ದರು. ವಾಕ್ ಸ್ವಾತಂತ್ರೃವನ್ನು ಬಾಬಾ ಸಾಹೇಬರು ಸಂವಿಧಾನದಲ್ಲಿ ಕಲ್ಪಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ಈ ಸ್ವಾತಂತ್ರೃ ಹರಣಕ್ಕೆ ಮುಂದಾಗಿದೆ, ಬಿಜೆಪಿ ಸರ್ಕಾರದ ಈ ದಬ್ಬಾಳಿಕೆ ನೀತಿ ಮುಂದುವರೆದರೆ ತಮ್ಮ ಪಕ್ಷ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮತ್ತು ಕೆಪಿಸಿಸಿ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನರಸಿಂಹ ಮೂರ್ತಿ, ತಾಪಂ ಅಧ್ಯಕ್ಷ ಭದ್ರಯ್ಯ, ಮುಖಂಡರಾದ ಪಾರ್ವತಮ್ಮ, ಜಯಮ್ಮ, ವಿ.ಎಚ್.ರಾಜು, ಎ.ಬಿ.ಚೇತನ್ ಕುಮಾರ್, ಸಿ.ಎನ್.ಆರ್.ವೆಂಕಟೇಶ್, ನರಸಿಂಹಯ್ಯ (ಕೆಪಿಸಿಸಿ ಸದಸ್ಯ), ಜಿ.ಮಹೇಂದ್ರ, ದೇವರಾಜ್ ಮುಂತಾದವರು ಹಾಜರಿದ್ದರು.

……..