ಸಂಸ್ಕೃತ ಭಾಷಾ ಕಲಿಕೆಯಲ್ಲಿ 82 ವರ್ಷದ ವೃದ್ದೆಯ ಸಾಧನೆ!

ರಾಮನಗರ: ಕಲಿಕೆಗೆ ವಯಸ್ಸಿಲ್ಲ ಎಂಬುದಕ್ಕೆ 82 ವರ್ಷದ ವೃದ್ದರೊಬ್ಬರು ಸಂಸ್ಕೃತ ಕಲಿಕೆಯಲ್ಲಿ ಶೇ 82 ಅಂಕಗಳನ್ನುಗಳಿಸಿ ಸಾಕ್ಷಿಯಾಗಿದ್ದಾರೆ.

ಸಂಸ್ಕೃತ ಭಾರತಿ ಎಂಬ ಸಂಸ್ಥೆ ನಡೆಸಿದ ಲಹರಿ – 1 ಪರೀಕ್ಷೆಯಲ್ಲಿ 82 ವರ್ಷದ ರಾಜಲಕ್ಷ್ಮಿ.ಎನ್‌ ಈ ಸಾಧನೆ ಮಾಡಿದ್ದಾರೆ. ಸಂಸ್ಕೃತ ಸಂಭಾಷಣಾ ಶಿಬಿರದಲ್ಲಿ ಪಾಲ್ಗೊಂಡಿದ್ದವರಿಗೆ ಈ ಪರೀಕ್ಷೆ ನಡೆಸಲಾಗಿದ್ದು, ಸಂಸ್ಕೃತ ಭಾಷಾ ಕಲಿಕೆಯಲ್ಲಿ ಮತ್ತೊಂದು ಹಂತವನ್ನು ಏರಿದ್ದಾರೆ.

ಸಧ್ಯ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಇವರು ರಾಮನಗರ ಮೂಲದವರು. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ವಾಸ ಆರಂಭಿಸಿದ್ದಾರೆ. ಕನ್ನಡ ಭಾಷೆಯಲ್ಲಿಯೂ ಪರಿಣಿತರು. ಪದಬಂದ, ಪದ ಕೋಶ, ಕ್ವಿಜ್‌ನಲ್ಲೂ ಆಸಕ್ತಿ. ಸದಾ ಕ್ರೀಯಾಶೀಲರಾಗಿರುವ ಈ 82 ವಯೋಮಾನದ ಹರೆಯದ ಇವರು ಕಿರಿಯರಿಗೂ ಸ್ಪೂರ್ತಿ.