ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರ ಭಾಗಿ

ರಾಮನಗರ: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರ ಕಾರ್ಮಿಕರ ಮುಷ್ಕರ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾಕಾರರು ಅರೆಬೆತ್ತಲೆಯಾಗಿ ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರದ ಮುಷ್ಕರದ ವೇಳೆಯಲ್ಲಿ ರಾಮನಗರ ನಗರಸಭೆಯ ಸದಸ್ಯರು ‌ಪಾಲ್ಗೊಂಡಿದ್ದರು. ಪುರುಷ ಸದಸ್ಯರು ಕೆಲಕಾಲ ತಮ್ಮ ಷರ್ಟು ತೆಗೆದು ಪೌರ ಕಾರ್ಮಿಕರ ಮುಷ್ಕರಕ್ಕೆ ಬೆಂಬಲ ವ್ಯಕ್ತ ಪಡಿಸಿದರು.’

ನಗರಸಭೆಯ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ಮಾಜಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾ, ಬಾರತೀಯ ವಿದ್ಯಾಥಿ‍್ ಸಂಘದ ಜಿಲ್ಲಾ ಪೋಷಕ ಹರೀಷ್‍ ಬಾಲು ಮಾತನಾಡಿ, ಸರ್ಕಾರ ತಕ್ಷಣ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರತರಾಗಿರುವ ಪೌರ ಕಾರ್ಮಿಕರ ನೌಕರಿಯನ್ನು ಖಾಯಂಗೊಳಿಸಿ ಎಂದರು.

ಜಲ ಮಂಡಳಿ ನೌಕರರ ಬೆಂಬಲ

ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಪೌರ ಕಾರರ್ಮಿಕರಿಗೆ ಬೆಂಬಲಕ್ಕೆ ಜಲಮಂಡಳಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸಹ ಬೆಂಬಲ ವ್ಯಕ್ತಪಡಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ನಗರದ ರಸ್ತೆಗಳಲ್ಲಿ ಕಸದ ರಾಶಿ

ಒಂದೆಡೆ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರದಿಂದಾಗಿ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕಸ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ನಗರಸಭೆಯಲ್ಲಿ ಖಾಯಂ ಪೌರಕಾರ್ಮಿಕರು ಹೆಚ್ಚುವರಿ ಸಮಯ ವ್ಯಯಿಸಿ ಕಸ ವಿಲೇವಾರಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಸ್ಠಷ್ಠಿಯಾಗುತ್ತಿದೆ. ಕೆಲವು ಗಲ್ಲಿಗಳಲ್ಲಿ ಕಸದ ರಾಶಿ ಕೊಳೆತು ನಾರುತ್ತಿದ್ದು, ಸಾಂಕ್ರಮಿಕ ರೋಗಗಳ ಹರಡುವ ಭೀತಿಯನ್ನು ನಾಗರೀಕರು ವ್ಯಕ್ತಪಡಿಸಿದ್ದಾರೆ. ಸರ್ಕಾರ ತಕ್ಷಣ ಪೌರಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.

ಮುಷ್ಕರದಲ್ಲಿ ನಗರಸಭೆಯ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಯಿನ್ ಖುರೇಷಿ, ಸದಸ್ಯರುಗಳಾದ ದೌಲತ್ ಷರೀಪ್, ನಿಜಾಂ ಷರೀಫ್, ಬಿ.ಕೆ.ಪವಿತ್ರ, ಪೈರೋಜ್ ಪಾಷ, ಸಿ.ಸೋಮಶೇಖರ್ (ಮಣಿ), ಅಸ್ಮತ್ ಉಲ್ಲಾಖಾನ್, ಗಿರಿಜಾ, ಆುಷಾ ಭಾನು, “ಜಯ ಕುಮಾರಿ, ರಶೀದ್ ಪ್ರಮುಖರಾದ ದೇವರಾಜ್, ಚಂದ್ರು, ಶಿವಕುಮಾರಸ್ವಾಮಿ ಮುಂತಾದವರು ಭಾಗವಹಿಸಿದ್ದರು.