ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆ. 16ಕ್ಕೇರಿದ ಸೋಂಕಿತರ ಸಂಖ್ಯೆ

ರಾಮನಗರ, ಜೂನ್ ೧೩: ಶನಿವಾರ ಪ್ರಕಟವಾದ ಕೋವಿಡ್ ೧೯ ಫಲಿತಾಂಶದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ವರದಿಯಾಗಿದ್ದು. ಜಿಲ್ಲೆಯಲ್ಲಿ ಸೋಂಕೊತರ ಸಂಖ್ಯೆ 16ಕ್ಕೆ ಏರಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ 23 ವರ್ಷದ ಯುವಕ (ಪಿ- 6578) ಇತ್ತೀಚೆಗಷ್ಟೇ ತಮಿಳುನಾಡಿನಿಂದ ಹಿಂದಿರುಗಿದ್ದ. ಹಾಟ್ ಸ್ಪಾಟ್ ರಾಜ್ಯದಿಂದ ಆಗಮಿಸಿದ್ದರಿಂದ ಈ ಯುವಕನನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಗಂಟಲು ದ್ರವದ ಪರೀಕ್ಷಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಪಾಸಿಟಿವ್ ಆಗಿರುವುದರಿಂದ ಆತನನ್ನು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿ ಎಂದು ಅಧಿಕಾರಿಗಳು ನಾಗರೀಕರಿಗೆ ಸಲಹೆ ನೀಡಿದ್ದಾರೆ.