ಗಾಂಧೀಜಿ ಮತ್ತು ಶಾಸ್ತ್ರೀಜಿ ಬಗ್ಗೆ ಮಕ್ಕಳಿಗೆ ಸ್ಪರ್ಧೆ

ರಾಮನಗರ: ಇಲ್ಲಿನ ಪವಿತ್ರ ವಿದ್ಯಾಲಯ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಸಂಯುಕ್ತವಾಗಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದಾರೆ.

MahatmaGandhiji
Lal Bahadur Shastriji

ಎಲ್ಲಾ ಸ್ಪರ್ಧೆಗಳನ್ನು ಮನೆಯಲ್ಲೇ ಮಾಡಿ ಫೋಟೋ, ವೀಡಿಯೋ ಮೂಲಕ ವಾಟ್ಸ್‌ಪ್ ಸಂಖ್ಯೆಗೆ ಕಳುಹಿಸಬೇಕಾಗಿದೆ.  ಮಕ್ಕಳಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಆದರ್ಶ, ತತ್ವ ಹಾಗೂ ರಾಷ್ಟ್ರೀಯತೆಯನ್ನು ಮೂಡಿಸುವ ಉದ್ದೇಶದಿಂದ ಈ  ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪವಿತ್ರ ಶಾಲೆಯ ಪ್ರಕಟಣೆ ತಿಳಿಸಿದೆ.

3 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಗಾಂಧೀಜಿ ಅಥವಾ ಶಾಸ್ತ್ರೀಜಿ ಅವರ ವೇಷಭೂಷಣ ಸ್ಪರ್ಧೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ವೇಷ ಭೂಷಣ ತೊಟ್ಟು ಅದರ ಫೋಟೋ, ವೀಡಿಯೋವನ್ನು ಅಪ್‌ಲೋಡ್ ಮಾಡಬೇಕು.

6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಗಾಂಧಿ ಅಥವಾ ಶಾಸ್ತ್ರಿ ಅವರ ಭಾವ ಚಿತ್ರ ಬಿಡಿಸುವ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಭಾವ ಚಿತ್ರ ಬರೆದು ಅದರ ಫೋಟೋ, ವೀಡಿಯೋ ತೆಗೆದು ಅಪ್‌ಲೋಡ್ ಮಾಡಬೇಕು.

13 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಸ್ಪಚ್ಚ ಭಾರತ ಅಭಿಯಾನ ಕುರಿತು ಜಾಗೃತಿ ಮೂಡಿಸುವ ಚಿತ್ರವನ್ನು ಬರೆದು ತಮ್ಮ ಮನೆಯ ಮುಂಭಾಗ ಅಂಟಿಸಿದ ಫೋಟೋ ಕಳುಹಿಸುವ ಸ್ಪರ್ಧೆ.

6 ರಿಂದ 9 ವರ್ಷದೊಳಗಿನ ಮಕ್ಕಳಿಗೆ ರಘುಪತಿ ರಾಘವ ರಾಜಾರಾಂ ಹಾಗೂ ಶಾಸ್ತ್ರಿ ಅವರ ಜೈ ಜವಾನ್ ಜೈ ಕಿಸಾನ್ ಗೀತೆಯನ್ನು ರಾಗವಾಗಿ ಹಾಡಿ ಕಳುಹಿಸುವ ಸ್ಪರ್ಧೆ.

ಅಶುಭಾಷಣ ಸ್ಪರ್ಧೆ: 13 ರಿಂದ 16 ವರ್ಷದೊಳಿಗಿನ ಮಕ್ಕಳಿಗೆ ಸ್ವದೇಶಿ ಚಳುವಳಿ ಯಿಂದ ಮೇಕ್ ಇನ್ ಇಂಡಿಯವರೆಗೆ ಎಂಬ ವಿಷಯದಲ್ಲಿ, ಅಥವಾ ಸ್ವಚ್ಚ ಭಾರತ್ ವಿಷಯದಲ್ಲಿ ಅಥವಾ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ದಿಟ್ಟತನದ ಬಗ್ಗೆ, ಈ ಮೂರು ವಿಷಯಗಳ ಪೈಕಿ ಯಾವುದಾದರು ಒಂದು ವಿಷಯದಲ್ಲಿ ಮೂರು ನಿಮಿಷ ಮೀರದಂತೆ ವೀಡಿಯೋ ಮಾಡಿ ಮಾತನಾಡಿ ಕಳುಹಿಸುವ ಸ್ಪರ್ಧೆ.

10 ರಿಂದ 18 ವಯಸ್ಸಿನ ಮಕ್ಕಳಿಗೆ ಸ್ವತಂತ್ರ ಹೋರಾಟದಲ್ಲಿ ಗಾಂಧೀಜಿ ಅಥವಾ ಲಾಲ್ ಬಹುದ್ದೂರ್ ಶಾಸ್ತ್ರಿ ನನ್ನ ನೆಚ್ಚಿನ ಪ್ರಧಾನಿ ಈ ವಿಷಯಗಳಲ್ಲಿ 1000 ಪದಗಳಿಗೆ ಮೀರದಂತೆ ಪ್ರಬಂಧ ಬರೆದು ಅದನ್ನು ಪಿಡಿಎಫ್‍ ಮಾಡಿ ಕಳುಹಿಸುವ ಸ್ಪರ್ಧೆ.

ಯಾರಿಗೆ ಕಳುಹಿಸಬೇಕು?

ಈ ಎಲ್ಲಾ ಸ್ಪರ್ಧೆಗಳಲ್ಲಿ  ಭಾಗವಹಿಸುವ ಪ್ರತಿಯೊಬ್ಬರು ತಮ್ಮ ರಚನೆಗಳನ್ನು ವಾಟ್ಸಪ್ ಸಂಖ್ಯೆ 8792701007ಗೆ ಅಕ್ಟೋಬರ್ 2ರ ಸಂಜೆ 5 ಗಂಟೆಯೊಳಗೆ ಕಳುಹಿಸಬೇಕು. ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಪವಿತ್ರ ವಿದ್ಯಾಲಯದ ಕಾರ್ಯದರ್ಶಿ ಪ್ರದೀಪ್ (ಮೊಬೈಲ್: 9844466216) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

…………………