ವಾಸವಿ ಮಾತೆಗೆ ವಾರಹಿ‌ ಅಲಂಕಾರ

* ಸಪ್ತ ಮಾತೃಕೆಯರ ಹೆಸರುಗಳು

ರಾಮನಗರ: ನವರಾತ್ರಿ ಹಬ್ಬದ 9ನೇ ದಿನ ಮಂಗಳವಾರ ಇಲ್ಲಿನ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರಿಗೆ ವಾರಹಿ ಅಲಂಕಾರ ಏರ್ಪಡಿಸಲಾಗಿತ್ತು.

ವಾರಹಿ ಸಪ್ತಮಾತೃಕೆಯರ ಪೈಕಿ ಒಂದು ಶಕ್ತಿ ದೇವತೆ. ಸಪ್ತಮಾತೃಕೆಯರು ಮಾತೃ ದೇವಿಯರ ಒಂದು ಗುಂಪು. ಸಪ್ತಮಾತೃಕೆಯರು ಆದಿ ಪರಾಶಕ್ತಿಯ ಭಿನ್ನ ರೂಪಗಳಾಗಿದ್ದಾರೆ. ಸಪ್ತಮಾತೃಕೆಯರು ವಿಭಿನ್ನ ದೇವರುಗಳ ಮೂರ್ತಿವತ್ತಾಗಿರುವ ಶಕ್ತಿಗಳು. 

ಬ್ರಹ್ಮಾಣಿ, ವೈಷ್ಣವಿ, ಮಹೇಶ್ವರಿ, ಇಂದ್ರಾಣಿ, ಕೌಮಾರಿ, ವರಾಹಿ ಚಾಮುಂಡ ಇವರು ಸಪ್ತಮಾತೃಕೆಯರು.

ಶಾಕ್ತ ಪಂಥದಲ್ಲಿ ಶಕ್ತಿ ದೇವತೆಗಳನ್ನು ಸೌಮ್ಯ, ಉಗ್ರ, ಪ್ರಚಂಡ, ಘೋರ, ತೀವ್ರ ಎಂದು ಗುರುತಿಸುತ್ತಾರೆ.