ಶ್ರೀ ವಾಸವಿ ಪೀಠಾರೋಹಣ: ರಾಮನಗರದಲ್ಲಿ ಉಚಿತ ಆರೋಗ್ಯ ಶಿಬಿರ

ರಾಮನಗರ, ಜೂ.19: ಆರ್ಯ ವೈಶ್ಯರ ಕುಲುಗುರುಗಳಾಗಿ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರು ಜೂನ್ ೨೦ರ ಭಾನುವಾರ ಶ್ರೀ ವಾಸವಿ ಪೀಠಾರೋಹಣ ಮಾಡುತ್ತಿರುವ ಈ ಹಿನ್ನೆಲೆಯಲ್ಲಿ ಇಲ್ಲಿನ ವಾಸವಿ ವಿದ್ಯಾನಿಕೇತನ ಟ್ರಸ್ಟ್
ನಗರದ ಶ್ರೀ ಕನ್ಯಕಾಮಹಲ್‌ನಲ್ಲಿ  ಜಿಲ್ಲಾಡಳಿತ, ನಗರಸಭೆ, ಆರೋಗ್ಯ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಕಾರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಲಾಗಿತ್ತು. ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಶಿಬಿರದ ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಯ ವೈಶ್ಯ ಸಭಾದ ಕಾರ್ಯದರ್ಶಿ ಕೆ.ವಿ.ಉಮೇಶ್, ಆರ್ಯವೈಶ್ಯ ಸಮುದಾಯ ಸ್ಥಾಪಿಸಿರುವ ಶ್ರೀ ವಾಸವಿ ಪೀಠಕ್ಕೆ ದ್ವಿತೀಯ ಪೀಠಾರೋಹಣ ಮಹೋತ್ಸವದ ಹಿನ್ನೆಲೆಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು. ಶ್ರೀ ವಾಸವಿ ಪೀಠಾಧಿಪತಿಗಳಾಗಿ  ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಭಾನುವಾರ ಪೀಠಾರೋಹಣ ಮಾಡಲಿದ್ದಾರೆ. ಈ ಶುಭ ಸಂದರ್ಭಕ್ಕೆ ಈ ಶಿಬಿರ ನಡೆಯುತ್ತಿದೆ ಎಂದರು.

ಪೀಠಾರೋಹಣದ ಮಹೋತ್ಸವದ ಅಂಗವಾಗಿ ಜೂ.೨೦ರ ಭಾನುವಾರ ನಗರದಾದ್ಯಂತ ಇರುವ ನಿರ್ಗತಿಕರು, ಬಡವರಿಗೆ ಸಿದ್ದ ಪಡಿಸಿದ ಆಹಾರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ವೃದ್ದಾಶ್ರಮ ನಿವಾಸಿಗಳಿಗೆ ಹಣ್ಣು – ಹಂಪಲು ವಿತರಿಸಲಾಗುವುದು ಎಂದರು.
ಇದೆ ವೇದಿಕೆಯಲ್ಲಿ ರಕ್ತದಾನಿಗಳ ದಿನವನ್ನು ಆಚರಿಸಿದ ಬೆಳ್ಳಿ ರಕ್ತ ನಿಧಿಯ ತಂಡ ಕೆ.ವಿ.ಉಮೇಶ್, ಕೆ.ಎನ್.ಗಿರೀಶ್, ಪಿ.ವಿ.ವಿವೇಕಾನಂದ, ಸುಮನ್ ರಾಘವೇಂದ್ರ, ರಾಘವೇಂದ್ರ, ರವಿ, ರಮೇಶ್, ವಕೀಲ ವಿನೋದ್, ಗೂಳಿಗೌಡ  ಸೇರಿದಂತೆ 10 ಮಂದಿ ರಕ್ತದಾನಿಗಳನ್ನು ಸನ್ಮಾನಿಸಿ ಗೌರವಿಸಿದರು.

ಆರೋಗ್ಯ ಶಿಬಿರವನ್ನು ರಾಯರದೊಡ್ಡಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜು ರಾಥೋಡ್ ಮತ್ತು ತಂಡ ನಡೆಸಿಕೊಟ್ಟರು.  ಅಗತ್ಯವಿದ್ದವರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾ ಶಿಬಿರ ಸಹ ನಡೆಯಿತು.
ನಗರಸಭೆಯ ಆಯುಕ್ತ ನಂದಕುಮಾರ್, ಆರ್.ಸಿ.ಎಚ್. ಅಧಿಕಾರಿ ಡಾ.ಪದ್ಮ, 7ನೇ ವಾರ್ಡ್ ನಗರಸಭಾ ಸದಸ್ಯೆ ಮಹಾಲಕ್ಷ್ಮಿ, ತಹಸೀಲ್ದಾರ್ ನರಸಿಂಹಮೂರ್ತಿ,  ನಗರಸಭೆಯ ಮಾಜಿ ಸದಸ್ಯ ಜೆ.ಮುಕುಂದರಾಜ್,  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ನಳಿನಾ, ಫಯಾಜ್,  ಬಿಜೆಪಿ ಪ್ರಮುಖರಾದ ಮಂಜು, ಜೆಡಿಎಸ್ ಪ್ರಮುಖರಾದ ಗೂಳಿ ಕುಮಾರ್, ಕುಮಾರ್, ವಾಸವಿ ವಿದ್ಯಾನಿಕೇತನ ಟ್ರಸ್ಟ್‌ನ ಪ್ರಮುಖರಾದ ಕೆ.ಆರ್.ನಾಗೇಶ್, ಕೆ.ಆರ್.ಪ್ರದೀಪ್, ಎಂ.ಬಿ.ಜನಾರ್ದನ, ಪಿ.ವಿ.ಬದರಿನಾಥ, ಆರ್ಯ ವೈಶ್ಯ ಸಭಾ ಸದಸ್ಯರುಗಳಾದ ಕೆ.ಆರ್.ಮಹೇಶ್, ಕೆ.ಆರ್.ಸತೀಷ್, ವಿ.ಕೆ.ನಾಗರಾಜ್ ಮುಂತಾದವರು ಹಾಜರಿದ್ದರು.