ಕೋವಿಡ್‍ 19 ಸೋಂಕು: ಜುಲೈ 4 ಶನಿವಾರ 716 ಫಲಿತಾಂಶ ನೆಗಟಿವ್‍, 2 ಪಾಸಿಟಿವ್‍, 27 ಮಂದಿ ಗುಣಮುಖ

ರಾಮನಗರ,  ಜುಲೈ 4, 2020: ಜಿಲ್ಲೆಯಲ್ಲಿ ಶನಿವಾರ ಕೊರೊನಾ ಸೋಂಕಿನ 2 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಎರಡೂ ಪ್ರಕರಣಗಳು ರಾಮನಗರ ತಾಲೂಕಿಗೆ ಸಂಬಂಧಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 227ಕ್ಕೇರಿದೆ. ಶನಿವಾರ ಪ್ರಕಟವಾದ 716 ಫಲಿತಾಂಶಗಳು ನೆಗೆಟಿವ್‍ ಆಗಿದೆ.

ಸೋಂಕು ಗುಣಮುಖವಾಗಿ ಶನಿವಾರ 27 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚನ್ನಪಟ್ಟಣದ 3 ಮಂದಿ, ಕನಕಪುರದ 12 ಮಂದಿ, ಮಾಗಡಿಯ 9 ಮಂದಿ ಮತ್ತು ರಾಮನಗರದ 3 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ. ಇಲ್ಲಿಯವರೆಗೆ ಒಟ್ಟು 105 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸಧ್ಯ 117 ಸೋಂಕು ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿನಿಂದ ಐವರು ಸಾವನ್ನಪ್ಪಿದ್ದಾರೆ.

227 ಪ್ರಕರಣಗಳು ಎಲ್ಲೆಲ್ಲಿ?

ಇದುವರೆಗೆ ಜಿಲ್ಲೆಯಲ್ಲಿ 227 ಕೋವಿಡ್‍ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕನಕಪುರ 62, ಮಾಗಡಿ 83, ಚನ್ನಪಟ್ಟಣ 40 ಮತ್ತು ರಾಮನಗರದ 42 ಪ್ರಕರಣಗಳು ಸೇರಿವೆ.

ಜಿಲ್ಲಾ ಆರೋಗ್ಯ ಇಲಾಖೆ ವರದಿ:

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಬಿಡುಗಡೆ ಮಾಡಿರುವ ಶನಿವಾರ (ಜುಲೈ 4) ವರದಿಯಲ್ಲಿ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 9769 (ಹೊಸದಾಗಿ ಇಂದಿನ 285 ಸೇರಿ). ಒಟ್ಟು 3046 ಜನ 14 ದಿನಗಳ ನಿಗಾ ಅವಧಿ ಪೂರೈಸಿದ್ದಾರೆ. 275 ಜನರು ಇಂದು ಹೋಂ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು, ಇವರ ಒಟ್ಟಾರೆ ಸಂಖ್ಯೆ 2886ಗೆ ಏರಿಕೆಯಾಗಿದೆ.
ಜ್ವರ ತಪಾಸಣಾ ಕೇಂದ್ರದಲ್ಲಿ ಇಂದು 39 ಜನರು ತಪಾಸಣೆಗೆ ಒಳಗಾಗಿದ್ದಾರೆ, ಒಟ್ಟಾರೆಯಾಗಿ 2998 ಮಂದಿ ತಪಾಸಣೆಗೆ ಮಾಡಿಸಿ ಕೊಂಡಿದ್ದಾರೆ. ಒಟ್ಟು 12 ಜನರು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಇನ್ಸಟ್ಯೂಷನಲ್ ಕ್ವಾರಂಟೈನ್ ಗೆ ಇಂದು 5 ಜನ ಸೇರ್ಪಡೆಯಾಗಿದ್ದಾರೆ.

ಶನಿವಾರ ಹೊಸದಾಗಿ 285 ಮಾದರಿಗಳನ್ನು ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇದುವರೆಗೆ ಒಟ್ಟು 10087 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದಿನ 716 ಪರೀಕ್ಷಾ ವರದಿಯ ಫಲಿತಾಂಶ ನಕಾರಾತ್ಮಕವಾಗಿರುತ್ತದೆ. ಜಿಲ್ಲೆಯಲ್ಲಿ ಇಂದಿಗೆ ಒಟ್ಟು 8619 ನೆಗೆಟಿವ್‍ ಫಲಿತಾಂಶ ಬಂದಿವೆ. ಇಂದಿನ 285 ಬಾಕಿ ವರದಿ ಸೇರಿ ಒಟ್ಟು 1741 ಪ್ರಕರಣಗಳ ವರದಿಯನ್ನು ನಿರೀಕ್ಷಿಸಲಾಗಿದೆ.

ಫೋಟೋ: ರಾಮನಗರದ 26 ವಾರ್ಡಿನಲ್ಲಿ ನಗರಸಭೆಯಿಂದ ಸ್ಯಾನಿಟೈಸೇಷನ್‍