ಸಾಮಾಜ ಸೇವೆ: ರೋಟರಿ ಸಿಲ್ಕ್ ಸಿಟಿ ಸಾಧನೆ

* ತಮ್ಮ ಅವಧಿಯಲ್ಲಿ ಸಾರ್ಥಕ ಸೇವೆ – ಎ.ಜೆ.ಸುರೇಶ್‍

ರಾಮನಗರ: ಸಮಾಜ ಸೇವೆಗೆ ಮುಡಿಪಾಗಿರುವ ರೋಟರಿ ಸಿಲ್ಕ್ ಸಿಟಿ ಸಂಸ್ಥೆ 2019-20ನೇ ಸಾಲಿನಲ್ಲಿ ಸಮಾಜಿಕ ಕಾರ್ಯಕ್ರರ್ಮಗಳನ್ನು ಹಮ್ಮಿಕೊಂಡು ತನ್ನ ಬದ್ದತೆಯನ್ನು ನಿರೂಪಿಸಿದೆ.

ಈ ಸಂಬಂಧ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಲ್ಕ್ ಸಿಟಿಯ ನಿರ್ಗಮಿತ ಅಧ್ಯಕ್ಷ ಎ.ಜೆ.ಸುರೇಶ್‍ ತಮ್ಮ ಅವಧಿಯಲ್ಲಿ ನಡೆದ ಸಮಾಜಿಕ ಕಾರ್ಯಗಳ ಪಟ್ಟಿ ಬಿಡುಗಡೆ ಮಾಡಿದರು. 2019-20 ಸಾಲಿಗೆ ತಾವು ಕನಿಷ್ಠ 120 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದ್ದಾಗಿ ಆದರೆ ಕೋವಿಡ್‍ 19 ಸೋಂಕು ಕಾರಣ ಲಾಕ್‍ಡೌನ್‍ ಇತ್ಯಾದಿಗಳಿಂದಾಗಿ 85 ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸಲು ಸಾಧ್ಯವಾಗಯಿತು ಎಂದು ತಿಳಿಸಿದರು.

ಮಹದೇಶ್ವರನ ಭಕ್ತರಿಗೆ ಅನ್ನ ಸಂತರ್ಪಣೆ

ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋರಟ ಭಕ್ತರಿಗೆ ಸತತ 3 ದಿನಗಳ ಕಾಲ ಹಗಲು-ರಾತ್ರಿ ಎನ್ನದೇ ಉಪಾಹಾರ, ಊಟ, ಔಷಧಿ ಮತ್ತು ತಂಗಲು ವ್ಯವಸ್ಥೆಯನ್ನು ಮಾಡಲಾಗಿತ್ತು. ಸುಮಾರು 35 ರಿಂದ 40 ಸಾವಿರ ಮಂದಿ ಈ ಉಪಯೋಗವನ್ನು ಪಡೆದುಕೊಂಡಿದ್ದಾರೆ ಎಂದರು.

200 ತೆಂಗಿನ ಸಸಿ ವಿತರಣೆ

ಕಲ್ಪವೃಕ್ಷ ಯೋಜನೆ ಅಡಿಯಲ್ಲಿ ಹರಿಸಂದ್ರ ಗಾಮದಲ್ಲಿ 200ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ವಿತರಿಸಲಾಯಿತು. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನ ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಸುಮಾರು 100 ಮಂದಿ ವಿಧವೆಯರಿಗೆ ಹಸುಗಳನ್ನು ವಿತರಿಸಲಾಗಿದೆ. ಕೆ.ಎಂ.ಎಫ್‍ ಸಹಕಾರದಲ್ಲಿ ಈ ಯೋಜನೆ ಸಾರ್ಥಕವಾಗಿದೆ ಎಂದರು.

2019-20ನೇ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ನಗರದ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿತ್ತು. ಸುಮಾರು 1350 ಕ್ರೀಡಾಪಟುಗಳು ಭಾಗವಹಿಸಿದ್ದರು ಎಂದರು. ಅದೇ ರೀತಿ ಕೈಲಾಂಚ ಹೋಬಳಿಯಲ್ಲಿ ಶಿಕ್ಷಣ ಇಲಾಖೆಯ ಜೊತೆಗೂಡಿ ಪ್ರತಿಭಾ ಕಾರಂಜಿಯನ್ನು ನಡೆಸಿದ್ದಾಗಿ, ಕೆಲವು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನಿಘಂಟು ವಿತರಿಸಿದ್ದಾಗಿ ತಿಳಿಸಿದರು.

ತಾಲೂಕಿನ 120 ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕೈಗಳನ್ನು ತೊಳೆದುಕೊಳ್ಳುವ ಸರಿಯಾದ ಮಾರ್ಗವನ್ನು ಕಲಿಸಿಕೊಡಲಾಗಿದೆ ಎಂದರು.

ಎಂದಿನಂತೆ ಡಾಕ್ಟರ್ ಡೇ, ಶಿಕ್ಷಕರ ದಿನಾಚರಣೆ, ಮತ್ತು ಇಂಜಿನಿಯರ್ಸ್‌ ಡೇ ಆಚರಿಸಿಲಾಗಿದೆ. ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರಗಳನ್ನು ಅಯೋಜಿಸಲಾಗಿತ್ತು. ಕೋವಿಡ್‍ 19 ಸೋಂಕಿನ ಸಂದರ್ಭದಲ್ಲೂ ಶ್ರೀ ವಾಸವಿ ಟ್ರಸ್ಟ್ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿ 150 ಯೂನಿಟ್‍ ರಕ್ತ ಸಂಗ್ರಹಿಸಿ ಜಿಲ್ಲಾಸ್ಪತ್ರೆಗೆ ನೀಡಲಾಗಿದೆ ಎಂದರು.

2019-20ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸುಮಾರು 4 ಸಾವಿರ ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಸರ್ಕಾರಿ ಇಂಜಿನಿಯರಿಂಗ್‍ ಕಾಲೇಜಿನ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಸಲುವಾಗಿ ರೈಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು. ಸ್ತನ ಕ್ಯಾನ್ಸರ್‍ ಪತ್ತೆಗೆ ಕನಿಷ್ಠ 8 ಸಾವಿರ ರೂ ವೆಚ್ಚವಾಗುತ್ತದೆ. ಇದನ್ನು ಭರಿಸುವ ಶಕ್ತಿ ಅನೇಕರಿಗೆ ಇರುವುದಿಲ್ಲ. ಇದನ್ನು ಮನಗೊಂಡು ತಮ್ಮ ಸಂಸ್ಥೆ ಉಚಿತ ಸ್ತನ ಕ್ಯಾನ್ಸರ್ ಪತ್ತೆ ಶಿಬರವನ್ನು ಹಮ್ಮಿಕೊಳ್ಳಾಗಿತ್ತಿ. ಇದು ಬಹುಶಃ ಇದೇ ಪ್ರಥಮ ಎಂದರು.

ಇದಲ್ಲದೇ ಹಲವಾರು ಆರೋಗ್ಯ ಶಿಬಿರಗಳನ್ನು, ಹಲವಾರು ಕಡೆ ಸಸಿ ನೆಡುವ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದೆ, ಪಲ್ಸ್ ಪೋಲಿಯೋ ಕಾರ್ಯಕ್ರಮ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ, ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾದಕ ವಸ್ತುಗಳ ನಿರ್ಮೂಲನೆ ಮತ್ತು ಜಾಗೃತಿ ಮೂಡಿಸಲು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥ ಮುಖಾಂತರ ಅರಿವು ಮೂಡಿಸಲಾಯಿತು ಎಂದರು.

ಸಭೆಯಲ್ಲಿ ಪ್ರಸಕ್ತ ಸಾಲಿನ ಅಧ್ಯಕ್ಷ ಎನ್‍.ರವಿಕುಮಾರ್‍, ಕಾರ್ಯದರ್ಶಿ ರಘುಕುಮಾರ್‍, ನಿರ್ಗಮಿತ ಕಾರ್ಯದರ್ಶಿ ಶಿವರಾಜ್‍, ಪ್ರಮುಖರಾದ ಕೆ.ವಿ.ಉಮೇಶ್‍, ನವೀನ್‍, ಬಿ.ಗೋಪಾಲ್‍, ಆರ್‍.ಎಲ್‍.ಪ್ರಭಾಕರ್‍, ಸೋಮಶೇಖರ್‍ ಮುಂತಾದವರು ಹಾಜರಿದ್ದರು.

15 ಲಕ್ಷ ಸಸಿ ನೆಡುವ ಗುರಿ – ನೂತನ ಅಧ್ಯಕ್ಷ ಎನ್‍.ರವಿಕುಮಾರ್

N. Ravi Kumar

ಇದೇ ವೇಳೆ 2020-21ನೇ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್‍.ರವಿಕುಮಾರ್‍ ಮಾತನಾಡಿ, ಕೋಟಿನಾಟಿ ಎಂಬ ರೋಟರಿ ಯೋಜನೆಯಡಿ ತಾಲೂಕಿನಲ್ಲಿ ಈ ವರ್ಷ 15 ಲಕ್ಷ ಸಸಿ ನೆಡುವ ಗುರಿ ಇಟ್ಟುಕೊಂಡಿರುವುದಾಗಿ ತಿಳಿಸಿದರು. ಸ್ಥಳ ಗುರುತಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ರೈತರು ಸಹ ತಮ್ಮ ಭೂಮಿ ಗುರುತಿಸಿದರೆ ಅಲ್ಲಿಯೂ ಸಸಿ ನೆಡುವುದಾಗಿ ತಿಳಿಸಿದರು. ಹಣ್ಣಿನ ಗಿಡಗಳು, ತೆಂಗಿನ ಸಸಿಗಳಿಗೆ ಆದ್ಯತೆ ಎಂದರು.

ಪಲ್ಸ್ ಪೋಲಿಯೋ ಕಾರ್ಯಕ್ರಮ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ, ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾದಕ ವಸ್ತುಗಳ ನಿರ್ಮೂಲನೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.