ಬೇಸಿಗೆ: ಎಚ್ಚರ ನಾಗರೀಕರೇ! ರಾಮನಗರ, ಚನ್ನಪಟ್ಟಣದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ

* ನೀರು ಸರಬರಾಜು ಮಂಡಳಿಯಿಂದ ಸಹಾಯವಾಣಿ ಸ್ಥಾಪನೆ

* ನಗರಸಭೆ ಚುನಾವಣೆಗೆ ಮತ ಕೇಳೋಕೆ ಯಾರೇ ಬರಲಿ ಪ್ರಶ್ನೆ ಮಾಡ್ತಿವಿ -ಮತದಾರರು

ರಾಮನಗರ: 8ನೇ ಏಪ್ರಿಲ್‍ 2021: ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ ತೊರೆಕಾಡನಹಳ್ಳಿಯಿಂದ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಆದರೆ ಟಿ.ಕೆ.ಹಳ್ಳಿಯಲ್ಲಿ ನೀರಿನ ಒಳಹರಿವಿನ ಪ್ರಮಾಣ ಕಡಿಮೆಯಾಗಿರುವುದರಿಂದ ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉಪವಿಭಾಗದ (ಓಎಂ) ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆ ಹೊರೆಡಿಸಿದ್ದಾರೆ.

ಪ್ರಸ್ತುತ ಬೇಸಿಗೆಯಾಗಿರುವುದರಿಂದ ಕೊಳವೆ ಬಾವಿಗಳ ನೀರಿನ ಪ್ರಮಾಣವು ಇಳಿಕೆಯಾಗಿದೆ. ಈ ಹಿನ್ನಲೆಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ನಗರಗಳ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರ ರಾಮನಗರದಲ್ಲಿ 10 ದಿನಕ್ಕೊಮ್ಮೆ ನೀರು

ರಾಮನಗರ ಹೆಸರಿಗೆ ಮಾತ್ರ ಜಿಲ್ಲಾ ಕೇಂದ್ರ. ಜಿಲ್ಲಾ ಕೇಂದ್ರಕ್ಕೆ ಇರಬೇಕಾದ ಮೂಲ ಸೌಕರ್ಯಗಳಿಗೆ ಕೊರತೆ. 10 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ ಎಂಬ ದೂರುಗಳು ನಿರಂತರ ಕೇಳಿ ಬರುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಕಳೆದ 2-3 ವರ್ಷಗಳಿಂದ ಹೇಳುವುದು 400 ಕೋಟಿ ಪ್ರಾಜೆಕ್ಟ್ ಸಿದ್ದವಾಗುತ್ತಿದೆ ಅಂತ.

ಮತ ಕೇಳಲು ಬಂದಾಗ ಪ್ರಶ್ನಿಸ್ತಿವಿ!

ಏಪ್ರಿಲ್‍ 27ರಂದು ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಿಗೆ ಚುನಾವಣೆ ನಡೆಯಲಿದೆ. ಮತ ಕೇಳಲು ಬಂದಾಗ ಮೊದಲು ಕುಡಿಯಲು ನೀರು ಕೊಟ್ಟು ನಂತರ ಚುನಾವಣೆ ಮಾಡಿ ಅಂತ ಕೇಳುವುದಾಗಿ ಅನೇಕ ಮಹಿಳಾ ಮತದಾರರು ಪ್ರತಿಕ್ರಿಯಿಸಿದ್ದಾರೆ.

ಪಕ್ಷ ಬೇಧ ಮರೆತು ಕಸ ವಿಲೇವಾರಿ ಮಾಡೋಕೆ ಸ್ಥಳ ನಿಗಧಿ ಮಾಡೋಕೆ ಆಗ್ಲಿಲ್ಲ. ಇವರಿಗೆ ಅಧಿಕಾರ ಬೇಕಾ ಎಂದು ಕೆಲವರು ಖಾರವಾಗಿ ಪ್ರಶ್ನಿಸಿದ್ದಾರೆ.

ಸಹಾಯವಾಣಿ ಸ್ಥಾಪನೆ

ಚನ್ನಪಟ್ಟಣ ಹಾಗೂ ರಾಮನಗರ ನಗರಗಳಲ್ಲಿ ನೀರು ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು ರಾಮನಗರ ಸಹಾಯವಾಣಿ ಸಂಖ್ಯೆ 9448938413, ಚನ್ನಪಟ್ಟಣ ಸಹಾಯವಾಣಿ ಸಂಖ್ಯೆ 9480689615ಗಳ ಮೂಲಕ ಬೆಳಗ್ಗೆ 8:00 ರಿಂದ ಸಂಜೆ 6:00 ರವರೆಗೆ ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಚನ್ನಪಟ್ಟಣ ಕ.ನ.ನೀ.ಸ ಮತ್ತು ಒ.ಚ. ಮಂಡಳಿ ಉಪವಿಭಾಗ(ಓಎಂ) ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮಸ್ಯೆ ಇದ್ದಾಗ ನಾಗರೀಕರು ಫೋನು ಮಾಡಿದರೆ ಉತ್ತರ ಹೇಳ್ತಾರ? switched off, not reachable, out of service, your call is not answered please try after some time  ಎಂಬ ಸಂದೇಶಗಳು ಬರೋಲ್ಲ ಎಂಬ ಖಾತರಿ ಏನು ಎಂದು ನಾಗರೀಕರ ಪ್ರಶ್ನೆ!

…………..