ದಿನನಿತ್ಯ ಯೋಗಾಭ್ಯಾಸ ಮಾಡಿ – ಪಟೇಲ್ ಸಿ ರಾಜು ಕರೆ

ರಾಮನಗರ: ದೇಹ ಮತ್ತು ಮಾನಸಿಕ ಆರೋಗ್ಯಕ್ಕೆ ದಿನನಿತ್ಯ ಯೋಗಾಭ್ಯಾಸ ಮಾಡುವಂತೆ ಇಲ್ಲಿನ ಪಟೇಲ್ ಆಂಗ್ಲ ಶಾಲೆಯ ಕಾರ್ಯದರ್ಶಿ ಪಟೇಲ್ ಸಿ ರಾಜು ಕರೆ ನೀಡಿದರು.

ತಮ್ಮ ಶಾಲೆಯ ಆವರಣದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ  ಜಿಲ್ಲಾ ಆರೋಗ್ಯ ಭಾರತಿವತಿುಂದ ಹಮ್ಮಿಕೊಂಡಿದ್ದ ಯೋಗಾಭ್ಯಾಸ ಶಿಬಿರದಲ್ಲಿ ಮಕ್ಕಳಿಗೆ ಸೂರ್ಯ ನಮಸ್ಕಾರ, ದಂಡಾಸನ, ವಜ್ರಾಸನ ಮತ್ತು ಪ್ರಾಣಾಯಾಮಗಳನ್ನು ತಾವೇ ಸ್ವತಃ ವಿದ್ಯಾರ್ಥಿಗಳಿಗೆ ತರಬೇತಿ ಕೊಟ್ಟರು.

ಯೋಗ ಮಾನವನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ. ಇದನ್ನು ಅರಿತೇ ವಿಶ್ವಸಂಸ್ಥೆ ಕರೆ ನೀಡಿದ ನಂತರ ಜೂನ್ 21ರಂದು ವಿಶ್ವದೆಲ್ಲಡೆ ಬಹುತೇಕ ರಾಷ್ಟ್ರಗಳಲ್ಲಿ ವಿಶ್ವ ಯೋಗ ದಿನದಂದು ಯೋಗಾಭ್ಯಾಸದ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದರು.

ಆರೋಗ್ಯದ ಹಿತದೃಷ್ಟಿಯಿಂದ ಮಕ್ಕಳು ಮತ್ತು ಪೋಷಕರು ದಿನನಿತ್ಯ ಯೋಗಾಭಾಸ ಮಾಡುವಂತೆ ತಿಳಿಸಿದರು. ವಿಶ್ವಕ್ಕೆ ಯೋಗವನ್ನು ಭಾರತ ಪರಿಚರಿಸಿದೆ ಎಂದರು. ಕಾರ್ಯಕ್ರಮದಲ್ಲಿ ಸಂಘ ಪರಿವಾರದ  ಸತೀಶ್ ಯೋಗದ ಮಹತ್ವ ಮತ್ತು ಅದರಿಂದಾಗುವ ಪರಿಚಯಗಳನ್ನು ತಿಳಿಸಿದರು ಮತ್ತು ತಾಲೂಕು ಆರೋಗ್ಯ ಭಾರತಿ ಅಧ್ಯಕ್ಷರಾದ ಎಂ ಡಿ ಶಿವಕುಮಾರ್ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಜಿ ಆರ್ ವಿನೋದ್ ಸಹ ಶಿಕ್ಷಕರಾದ  ಸಂಗೀತ, ರಜನಿ, ಶಶಿಕಲಾ, ಷೋಮಿ ಬೋಸ್, ಟಿ ಚನ್ನೇಗೌಡ ಇತರರು ಭಾಗವಹಿಸಿದ್ದರು.