ದೇವೇಗೌಡರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಕೆ.ಎನ್.ರಾಜಣ್ಣ ವಿರುದ್ದ ಜೆಡಿಎಸ್ ಪ್ರತಿಭಟನೆ

ರಾಮನಗರ: ದೇವೇಗೌಡರ ಇಳಿ ವಯಸ್ಸಿನ ಬಗ್ಗೆ ಲೇವಡಿಯಾಡಿದ್ದ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ವಿರುದ್ದ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಐಜೂರು ವೃತ್ತದಲ್ಲಿ ಜಮಾಯಿಸಿ ಜೆಡಿಎಸ್ ಕಾರ್ಯಕರ್ತರು ಕೆ.ಎನ್.ರಾಜಣ್ಣ ವಿರುದ್ದ ಘೋಷಣೆಗಳನ್ನು ಕೂಗಿದರು. ಅವರ ಭಾವಚಿತ್ರವನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಹೆಚ್.ಡಿ.ದೇವೇಗೌಡರು ನಾಡಿನ ಪ್ರಧಾನಿಯಾಗಿದ್ದರು, ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ನಾಡಿಗೆ ಕೊಟ್ಟ ಕೊಡುಗೆ ಅಪಾರ ಎಂದರು. ದೇವೇಗೌಡರು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ರೈತರು, ಶ್ರಮಿಕರ ದನಿಯಾಗಿದ್ದಾರೆ. ಅಂತಹ  ರಿಯರ ಬಗ್ಗೆ ಯಾವುದೇ ಪಕ್ಷದವರು  ಇರಲಿ, ಗೌರವ ಇರಬೇಕು. ಕೆ.ಎನ್.ರಾಜಣ್ಣರ ಹೇಳಿಕೆ ಕ್ಷಮೆಗೂ ಅರ್ಹವಲ್ಲ ಎಂದರು.

ಹಿರಿಯ ಜೆಡಿಎಸ್ ಮುಖಂಡ ಸುಬ್ಬಾಶಾಸ್ತ್ರಿ ಮಾತನಾಡಿ ದೇವೇಗೌಡರಿಗೆ 90 ವರ್ಷ. ರಾಜ್ಯದ ರೈತರಿಗಾಗಿ ಕಾರ್ಯಕ್ರಮಗಳು, ಯೋಜನೆಗಳನ್ನು ಹಮ್ಮಿಕೊಂಡ ಪ್ರಥಮಿಗರು. ಅಂತಹ ಮುತ್ಸದಿ ಬಗ್ಗೆ ಯಾರಿಗಾದರೂ ಆಕ್ಷೇಪಾರ್ಹ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದರು. ಬಿಜೆಪಿ ವಕ್ತರಾರಾಗಿದ್ದ ನೂಪುರ್ ಶರ್ಮರ ಹೇಳಿಕೆಯನ್ನು ಉಲ್ಲೇಖಿಸಿದ ಅವರು ಸಾರ್ವಜನಿಕ ಜೀವನದಲ್ಲಿರುವವರು ಹೇಗೆ ಮಾತನಾಡಿ ಬೇಕು, ಏನು ಮಾತನಾಡಬೇಕು ಅನ್ನುವ ಅರಿ”ರಬೇಕು ಎಂದರು. ಜಾತಿ, ಮತ, ಕುಲ ರಹಿತ ನಡೆಯಬೇಕಾದ ದೇಶದಲ್ಲಿ ಹೀಗೆ ಆಶಾಂತಿಯನ್ನು ಉಂಟು ಮಾಡುತ್ತಿರುವ ಜನರ ವಿರುದ್ದ ಸರ್ಕಾರಗಳು ಕಾನೂನು ರೀತಿ ಕ್ರಮವಹಿಸಬೇಕು ಎಂದರು. ಕೆ.ಎನ್.ರಾಜಣ್ಣ ದೇವೇಗೌಡರು ಮತ್ತು ಅವರ ಕುಟುಂಬಕ್ಕೆ ಕ್ಷಮೆಯಾಚಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಪ್ರಮುಖರಾದ ರೈಡ್ ನಾಗರಾಜ್, ಮಾವಿನ ಸಸಿ ವೆಂಕಟೇಶ, ಗೂಳಿ ಕುಮಾರ್, ಗೇಬ್ರಿಯಲ್, ಮಂಜುನಾಥ್, ಅಪ್ಪಿ, ಸಿ.ಎಸ್.ಜಯಕುಮಾರ್, ಚಂದ್ರಯ್ಯ, ಎ.ರವಿ, ಶಂಭುಗೌಡ ಮುಂತಾದವರು ಭಾಗವಹಿಸಿದ್ದರು.

……………