ನರೇಗಾ ಯೋಜನೆ ಸದ್ಬಳಕೆ: ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ನರ್ಸರಿ ನಿರ್ವಹಣೆ ಹೊಣೆ

* ಸಾಮಾಜಿಕ ಅರಣ್ಯ, ತೋಟಗಾರಿಕೆ ಇಲಾಖೆುಂದ ತರಬೇತಿ

ರಾಮನಗರ: ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ  ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ ನರ್ಸರಿ ನಿರ್ಮಿಸಿ, ಅದರ ಹೊಣೆಯನ್ನು ಸಂಘದ ಮಹಿಳೆಯರಿಗೆ ಜಿಲ್ಲಾ ಪಂಚಾಯ್ತಿ ನೀಡುತ್ತಿದೆ.

ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಿ ಮಾರಾಟ ಮಾಡುವುದರಿಂದ ದೊರೆಯುವ ಆದಾಯದಲ್ಲಿ ಮಹಿಳೆಯರು ನರ್ಸರಿ ಅಭಿವೃದ್ಧಿಪಡಿಸಿಕೊಂಡು ತಾವು ಸಹ ಆದಾಯ ಮಾಡಿಕೊಳ್ಳಲು ಅವಕಾಶ ನೀಡುವುದು ಈ ಯೋಜನೆಯ ಉದ್ದೇಶ.

ಜಿಲ್ಲೆಯಲ್ಲಿ ಈಗಾಗಲೆ 9 ನರ್ಸರಿ

ನರ್ಸರಿ ನಿರ್ವಹಣೆಗೆ ಆಸಕ್ತಿ ತೋರಿಸುತ್ತಿರುವ ಮಹಿಳೆಯರನ್ನು ಆಯ್ಕೆ ಮಾಡಿಕೊಂಡು ಅವರಿಗೆ  ನಿರ್ವಹಣೆ ಹೇಗೆ ಮಾಡಬೇಕು ಎಂಬ ವಿಚಾರದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆುಂದ ಉಚಿತ ತರಬೇತಿ ನೀಡಲಾಗಿದೆ. ಆಸಕ್ತ ಸ್ವ-ಸಹಾಯ ಗುಂಪುಗಳಿರುವ ಗ್ರಾಮಗಳ ಸಮೀಪವೇ ನರ್ಸರಿ ನಿರ್ಮಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ ಜಿಲ್ಲೆಯಲ್ಲಿ 9 ನರ್ಸರಿಗಳು ಸ್ವಸಹಾಯ ಗುಂಪುಗಳ ನಿರ್ವಹಣೆಯಲ್ಲಿದೆ. ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ, ಬೇವೂರು, ವಿರೂಪಾಕ್ಷಿಪುರ ಗ್ರಾಮ ಪಂಚಾಯ್ತಿಗಳು, ರಾಮನಗರ ತಾಲ್ಲೂಕಿನ ಗೋಪಹಳ್ಳಿ, ಹುಲಿಕೆರೆ ಗುನ್ನೂರು, ಅಕ್ಕೂರು, ಕನಕಪುರ ತಾಲ್ಲೂಕಿನ ದೊಡ್ಡಮುದವಾಡಿ, ಮಾಗಡಿ ತಾಲ್ಲೂಕಿನ ಮೋಟಗೊಂಡನಹಳ್ಳಿ, ಹುಲಿಕಲ್ ಗ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ಸ್ವ-ಸಹಾಯ ಸಂಘದ ಮಹಿಳೆಯರು ನರ್ಸರಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಸಿಗಳನ್ನು ಸರ್ಕಾರದ ಇಲಾಖೆಗಳೆ ಕೊಳ್ಳಲಿವೆ

ಸ್ವ-ಸಹಾಯ ಗುಂಪಿನ ಮಹಿಳೆಯರು ಬೆಳೆಸುವ ಸಸಿಗಳನ್ನು ಸರ್ಕಾರದ ಇಲಾಖೆಗಳಾದ ಸಾಮಾಜಿಕ ಅರಣ್ಯ ಹಾಗೂ ತೋಟಗಾರಿಕೆ, ರೇಷ್ಮೆ ಇಲಾಖೆಯವರು ಒಂದು ಸಸಿಗೆ ಇಂತಿಷ್ಟು ನಿರ್ದಿಷ್ಟ ಹಣವನ್ನು ನೀಡುವ ಬಗ್ಗೆ ಸ್ವ ಸಹಾಯ ಸಂಘದ ಮಹಿಳೆಯರು ಹಾಗೂ ಇಲಾಖೆಗಳ ನಡುವೆ  ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ಸಸಿಗೂ ಪ್ರತ್ಯೇಕ ಬೆಲೆಯನ್ನು ನಿಗದಿ ಮಾಡಲಾಗಿದೆ.

ಯಾವ್ಯವಾ ಸಸಿಗಳಿಗೆ ಆಧ್ಯತೆ?

ನರ್ಸರಿ ನಿರ್ಮಾಣಕ್ಕೆ ಜಿಲ್ಲಾ ಪಂಚಾಯ್ತಿ  ಕೆಲವೊಂದು ಮಾನದಂಡಗಳನ್ನು ನಿಗಧಿ ಪಡಿಸಿವೆ.

ಸಧ್ಯ ಸ್ವ-ಸಹಾಯ ಸಂಘದ ಮಹಿಳೆಯರು ನಿರ್ವಹಣೆ ಮಾಡುತ್ತಿರುವ ಒಂಬತ್ತು ನರ್ಸರಿಗಳಲ್ಲಿ ಆರಂಭಿಕವಾಗಿ ರೇಷ್ಮೆ, ನಿಂಬೆ, ಪಪ್ಪಾಯ, ನುಗ್ಗೆ, ಕರಿಬೇವು, ಮಾವು, ತೆಂಗು, ನೆಲ್ಲಿಕಾಯಿ, ಸೀಬೆ, ಸಪೋಟ, ಗುಲಾಬಿ ಸಸಿಗಳನ್ನು ಬೆಳೆಸಲಾಗುತ್ತಿದೆ.

ನರ್ಸರಿ ಕೇಂದ್ರ ಬೆಳೆಸಲು ಅನುದಾನ ಹೇಗೆ? 

ಸಸಿಗಳನ್ನು ಬೆಳೆಸಲು ಸೃಜನೆಯಾಗುವ ಮಾನವದಿನಗಳಿಗೆ ನರೇಗಾ ಯೋಜನೆಯಲ್ಲಿ ದಿನದ ಕೂಲಿ ಹಣವನ್ನು ಕೂಲಿಕಾರರ ಖಾತೆಗೆ ಜಮಾ ಮಾಡಲಾಗುವುದು. ಹಾಗೂ ಸಾಮಗ್ರಿ ವೆಚ್ಚವಾದ ಫಾಲಿಥೀನ್ ಚೀಲ, ಬೀಜ, ಸಾವಯವ ಗೊಬ್ಬರ, ನೀರು, ಮಣ್ಣಿಗೆ ತಗಲುವ ವೆಚ್ಚವನ್ನು ಸಾಮಗ್ರಿ ವೆಚ್ಚದಲ್ಲಿ ಭರಿಸಲಾಗುತ್ತದೆ.

-ದಿಗ್ವಿಜಯ್ ಬೋಡ್ಕೆ, ಸಿಇಒ, ಜಿಪಂ, ರಾಮನಗರ. ಜಿಲ್ಲೆಯಲ್ಲಿ ಪ್ರತಿ ಹೋಬಳಿಗೊಂದರಂತೆ ನರ್ಸರಿ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದು ನರ್ಸರಿ  ಶೆಡ್ ನಿರ್ಮಿಸುವ ಯೋಚನೆ ಇದೆ.

-ಟಿ.ಕೆ. ರಮೇಶ್,  ಉಪ ಕಾರ್ಯದರ್ಶಿ, ಜಿಪಂ, ರಾಮನಗರ. ನರೇಗಾ ಯೋಜನೆಯ ಅನುದಾನವನ್ನು ಬಳಸಿಕೊಂಡು ನರ್ಸರಿ ಶೆಡ್ ನಿರ್ಮಿಸಿ, ಸಂಘದ ಮಹಿಳೆಯರಿಂದ ನಿರ್ವಹಣೆ ಮಾಡಲು ನೀಡಲಾಗಿದೆ. ಸ್ವ-ಸಹಾಯ ಸಂಘದ ಮಹಿಳೆಯರಿಂದ ಜಿಲ್ಲೆಯಲ್ಲಿ ನರ್ಸರಿ ನಿರ್ವಹಣೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

-ಲೀಲಾವತಿ, -ಸಹಾಯ ಗುಂಪಿನ ಮಹಿಳೆ ನಮ್ಮ ಗ್ರಾಮದಲ್ಲಿ  ನರ್ಸರಿ ಕೇಂದ್ರ ನಿರ್ಮಿಸಿಕೊಂಡು, ನಿರ್ವಹಣೆಯನ್ನು ಮಾಡುತ್ತಿದ್ದೇವೆ. ಪ್ರಥಮ ಹಂತದಲ್ಲಿ ಹತ್ತು ಸಾವಿರ ರೇಷ್ಮೆ ಸಸಿಗಳನ್ನು ನಾಟಿ ಮಾಡಲಾಗಿದೆ. ಇದರಿಂದ ಬಂದಂತಹ ಲಾಭದಲ್ಲಿ ಹಣವನ್ನು ಗುಂಪಿನ ಸದಸ್ಯರಿಗೆ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಸ್ವ-ಸಹಾಯ ಗುಂಪಿನ ಮಹಿಳೆಯರ ಆರ್ಥಿಕ ಜೀವನ ಮಟ್ಟ ಸುಧಾರಿಸುತ್ತದೆ.