ಲೋಕಸಭಾ ಚುನಾವಣೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 27.63 ಲಕ್ಷ ಮತದಾರರು

* ರಾಮನಗರ ಜಿಲ್ಲೆಯಲ್ಲಿ 9.13 ಲಕ್ಷ ಮತದಾರರು

ರಾಮನಗರ: ಇದೇ ಏಪ್ರಿಲ್ 26ರಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 27,63,910 ಮಂದಿ 2829 ಮತಗಟ್ಟೆಗಳ ಮೂಲಕ ಮತಚಲಾಯಿಸಲಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.

ಈ ಸಂಬಂಧ ಡೀಸಿ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗ್ಠೋಯಲ್ಲಿ ಅವರು ಮಾತನಾಡಿದರು.

ಮಾಗಡಿ ವಿಧಾನಸಭಾ ಕ್ಷೇತ್ರ

ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 301 ಮತಗಟ್ಟೆಗಳು ಸ್ಥಾಪನೆಯಾಗಲಿದೆ. ಇಲ್ಲಿ 116142 ಪುರುಷ ಮತದಾರರು, 118477 ಮಹಿಳಾ ಮತದಾರರು, ಇತರೆ 19 ಒಟ್ಟು 2ಲಕ್ಷ 34 ಸಾವಿರ 638 ಮತದಾರರಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರ

ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 278 ಮತಗಟ್ಟೆಗಳು ಸ್ಥಾಪನೆಯಾಗಲಿವೆ. 1 ಲಕ್ಷ 7 ಸಾವಿರದ 581 ಪುರುಷ ಮತದಾರರು, 1 ಲಕ್ಷ 11 ಸಾ”ರದ 910 ಮಹಿಳಾ ಮತದಾರರು, ಇತರೆ 18 ಮಂದಿ ಒಟ್ಟು 2 ಲಕ್ಷ 19 ಸಾ”ರದ 509 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.

ಕನಕಪುರ ವಿಧಾನಸಭಾ ಕ್ಷೇತ್ರ

ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 297 ಮತಗಟ್ಟೆಗಳ ಮೂಲಕ 1,12,569 ಪುರುಷ ಮತದಾರರು, 1,16,738 ಮಹಿಳಾ ಮತದಾರರು ಇತರೆ 7 ಮತದಾರರು ಒಟ್ಟು 2 ಲಕ್ಷ 29 ಸಾವಿರ 314 ಮಂದಿ ಮತದಾರರು ಮತಚಲಾಯಿಸಲಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 271 ಮತಗಟ್ಟೆಗಳು ಸ್ಥಾಪನೆಯಾಗಲಿವೆ. 1,10,988 ಪುರುಷ ಮತದಾರರು, 1,18,987 ಮಹಿಳಾ ಮತದಾರರು, ಇತರೆ 8 ಒಟ್ಟು 2 ಲಕ್ಷ 29 ಸಾವಿರ 983 ಮಂದಿ ಮತದಾರರಿದ್ದು, ಲೋಕಸಭೆಗೆ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ.

ಕುಣಿಗಲ್ ವಿಧಾನಸಭಾ ಕ್ಷೇತ್ರ

ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 265 ಮತಗಟ್ಟೆಗಳು ಸ್ಥಾಪನೆಯಾಗಲಿವೆ. 1,00,646 ಪುರುಷ ಮತದಾರರು, 1,00,723 ಮಹಿಳಾ ಮತದಾರರು ಇತರೆ 2 ಒಟ್ಟು 2 ಲಕ್ಷ 1 ಸಾವಿರದ 371 ಮತದಾರರು ಮತಚಲಾಯಿಸಲಿದ್ದಾರೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ

ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರಿರುವ ದ್ವಿತೀಯ ವಿಧಾನಸಭಾ ಕ್ಷೇತ್ರವಾಗಿದೆ. ಇಲ್ಲಿ 438 ಮತಗಟ್ಟೆಗಳು ಸ್ಥಾಪನೆಯಾಗಲಿವೆ. 2,55,652 ಪುರುಷ ಮತದಾರರು, 2,42,388 ಮ”ಳಾ ಮತದಾರರು ಇತರೆ 79 ಮತದಾರರು ಒಟ್ಟು 4 ಲಕ್ಷ 98 ಸಾ”ರ 119 ಮತದಾರರು ಮತಚಲಾಯಿಸಬೇಕಾಗಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರು ಹೊಂದಿರು ಕ್ಷೇತ್ರವಾಗಿದೆ. ಇಲ್ಲಿ 598 ಮತಗಟ್ಟೆಗಳು ಸ್ಥಾಪನೆಯಾಗಲಿವೆ. 3,84,754 ಪುರುಷರು, 3,48,458 ಮ”ಳಾ ಮತದಾರರು, ಇತರೆ 101 ಒಟ್ಟು 7 ಲಕ್ಷ 33 ಸಾ”ರ 313 ಮತದಾರರು ಇದ್ದಾರೆ.

ಆನೇಕಲ್ ವಿಧಾನಸಭಾ ಕ್ಷೇತ್ರ

ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ 381 ಮತಗಟ್ಟೆಗಳು ಸ್ಥಾಪನೆಯಾಗಲಿದೆ. ಇಲ್ಲಿ 2,17,710 ಪುರುಷ ಮತದಾರರು, 1,99,866 ಮಹಿಳಾ ಮತದಾರರು, 87 ಇತರೆ ಮತದಾರರು ಒಟ್ಟು 4 ಲಕ್ಷ 17 ಸಾವಿರ 663 ಮತದಾರರು ಮತಚಲಾಯಿಸಲಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಒಟ್ಟು 2829 ಮತಗಟ್ಟೆಗಳ ಪೈಕಿ 1147 ಮತಗಟ್ಟೆಗಳು ರಾಮನಗರ ಜಿಲ್ಲೆಯಲ್ಲೇ ಸ್ಥಾಪನೆಯಾಗಲಿದೆ.

ಜಿಲ್ಲೆಯಲ್ಲಿದ್ದಾರೆ 85 ವರ್ಷ ವಯಸ್ಸು ಮೀರಿರುವ 7671 ಮಂದಿ

ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 85 ವರ್ಷ ಮತ್ತು ಮೇಲ್ಪಟ್ಟು ವಯಸ್ಸಾಗಿರುವ 7671 ಮಂದಿ ಮತದಾರರಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 24514 ಮಂದಿ ವೃದ್ದ ಮತದಾರರಿದ್ದಾರೆ. ಇವರು ಬಯಸಿದರೆ ಅವರ ವಾಸಸ್ಥಳದಲ್ಲೇ ಮತ ಚಲಾವಣೆಗೆ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ 20178 ಯುವ ಮತದಾರರು

ಈ ಬಾರಿ ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ರಾಮನಗರ ಜಿಲ್ಲೆಯಲ್ಲಿ 20178 ಮಂದಿ ಯುವ ಮತದಾರರು  ಇದೇ ಪ್ರಥಮ ಬಾರಿಗೆ ಮತ ಚಲಾಯಿಸಲಿದ್ದಾರೆ. ಇಡೀ ಕ್ಷೇತ್ರದಲ್ಲಿ 24924 ಯುವಕರು, 22430 ಯುವತಿಯರು ಇತರೆ 2 ಮತದಾರರು ಒಟ್ಟು 47356 ಯುವ ಮತದಾರರು ಮತಚಲಾಯಿಸಲಿದ್ದಾರೆ.

…………