ಅರ್ಕಾವತಿ ನದಿ ಪಾತ್ರಕ್ಕೆ ಜಲಾಶಯಗಳಿಂದ ನೀರು, ಎಚ್ಚರದಿಂದಿರಲು ನಾಗರೀಕರಿಗೆ ಸೂಚನೆ

ಅರ್ಕಾವತಿ ನದಿ ಪಾತ್ರಕ್ಕೆ ಜಲಾಶಯಗಳಿಂದ ನೀರು, ಎಚ್ಚರದಿಂದಿರಲು ನಾಗರೀಕರಿಗೆ ಸೂಚನೆ

ರಾಮನಗರ: 5ನೇ ಸೆಪ್ಟಂಬರ್ 2022: ಮಂಚನಬೆಲೆ ಜಲಾಶಯ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳು ನೀರಿನಿಂದ ತುಂಬಿದ್ದು, ಸುಮಾರು 6 ಸಾವಿರ ಕ್ಯೂಸೆಕ್ಸ್ ನೀರನ್ನು ಅರ್ಕಾವತಿ ನದಿ ಪಾತ್ರದಲ್ಲಿ ಹರಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸೋಮವಾರ ಸಂಜೆಯಿಂದ ಹರಿವು ಆರಂಭವಾಗಿದೆ.

ನದಿ ಪಾತ್ರದಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ರಾಮನಗರ ತಾಲೂಕು ಅರ್ಕಾವತಿ ನದಿ ಪಾತ್ರದ ಗ್ರಾಮಗಳು ಮತ್ತು ನಗರ ಪ್ರದೇಶದ ಬಡಾವಣೆಗಳಿಗೆ ಅಧಿಕಾರಿಗಳು ಎಚ್ಚರದಿಂದ ಇರುವಂತೆ ಸೋಮವಾರ ಸಂಜೆ ಧ್ವನಿವರ್ಧಕದ ಮೂಲಕ ಸೂಚನೆ ಕೊಟ್ಟಿದ್ದರೆ.

ರಾಮನಗರ ನಗರಸಭೆ ವ್ಯಾಪ್ತಿಯ ಬಾಲಗೇರಿ, ಪೂಲ್ ಭಾಗ್, ರಾಘವೇಂದ್ರ ಕಾಲೋನಿ, ಅಗ್ರಹಾರ ಸೇರಿದಂತೆ ಅರ್ಕಾವತಿ ನದಿ ಪಾತ್ರದ ಅಕ್ಕಪಕ್ಕದ ಬಡಾವಣೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ನಗರಸಭೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪೊಲೀಸರು ಸ್ವತಃ ತೆರಳಿ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಮನೆ ತೆರವು ಮಾಡುವ ಅನಿವಾರ್ಯತೆ ಇರುವ ಕುಟುಂಬಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಾಸ್ತವ್ಯಕ್ಕೆ ನಗರಸಭೆ ವ್ಯವಸ್ಥೆ ಮಾಡಿದೆ. ತುರ್ತು ಸಂದರ್ಭಕ್ಕೆ ಜೆಸಿಬಿ ಸೇರಿದಂತೆ ಅಗತ್ಯ ಯಂತ್ರಗಳನ್ನು ನಗರಸಭೆ ಸಿದ್ದಮಾಡಿಕೊಂಡಿದೆ ಎಂದು ಆಯುಕ್ತ ನಂದಕುಮಾರ್ ತಿಳಿಸಿದ್ದಾರೆ.

……….