ಬಿಡದಿ ಪುರಸಭೆ ಜೆಡಿಎಸ್ ತಕ್ಕೆಗೆ

ರಾಮನಗರ: ಡಿ.30: ಜಿದ್ದಾ ಜಿದ್ದಿನ ಕಣವಾಗಿದ್ದ ತಾಲೂಕಿನ ಬಿಡದಿ ಪುರಸಭೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಜೆಡಿಎಸ್ ಅಧಿಕಾರ ಹಿಡಿದಿದೆ.
ಒಟ್ಟು 23 ವಾರ್ಡುಗಳ ಪೈಕಿ ಜೆಡಿಸ್ 14 ವಾರ್ಡುಗಳಲ್ಲಿ, ಕಾಂಗ್ರೆಸ್ 9 ವಾರ್ಡುಗಳಲ್ಲಿ ವಿಜಯಸಾಧಿಸಿದೆ. ಅಧಿಕಾರ ಹಿಡಿಯಲು 14 ಮ್ಯಾಜಿಕ್ ಸಂಖ್ಯೆಯಾಗಿತ್ತು. ಜೆಡಿಎಸ್ ಗೆ ಇಷ್ಟು ಸಂಖ್ಯೆಯ ಸದಸ್ಯ ಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದು ಅಧಿಕಾರ ಹಿಡಿಯಲಿದೆ.
ಬಿಜೆಪಿ 12 ವಾರ್ಡುಗಳಲ್ಲಿ ಸ್ಪರ್ಧಿಸಿತ್ತು. ಎಲ್ಲಾ ವಾರ್ಡುಗಳಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿದೆ. 3 ಸ್ಥಾನಗಳಿಗೆ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ ಸಹ ಮತದಾರರ ಮನವೊಲಿಸುವಲ್ಲಿ ವಿಫಲವಾಗಿದೆ.