ರಾಮನಗರ ಜಿಲ್ಲೆಯಲ್ಲಿ 19ಕ್ಕೇರಿದ ಕೋವಿಡ್‍ 19 ಸೋಂಕಿತರ ಸಂಖ್ಯೆ

ರಾಮನಗರ, ಜೂನ್‍ 14: ಜಿಲ್ಲೆಯಲ್ಲಿ ಮತ್ತೆ ಮೂವರು ಸೋಂಕಿತರು ಪತ್ತೆಯಾಗಿದ್ದು ಕೋವಿಡ್‍ 19 ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ.

ರಾಮನಗರದ ರಾಯರದೊಡ್ಡಿಯಲ್ಲಿ ವಾಸವಿದ್ದ 54 ವಷ‍್ದ ಮಹಿಳೆ ಅನ್ಯ ಕಾಯಿಲೆ ಕಾರಣ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ.

ತಾಲೂಕಿನ ಕೈಲಾಂಚ ಹೋಬಳಿ ಲಕ್ಕೋಜನಹಳ್ಳಿ ಗ್ರಾಮದ ನಿವಾಸಿ ವೃದ್ದೆಯೊಬ್ಬರು ವಯೋ ಸಹಜ ಕಾಯಿಲೆಯಿಂದ ಬೆಂಗಳೂರಿನ ರಾಜೀವ್‍ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ. ಇವರಲ್ಲೂ ಸಹ ಸೋಂಕು ದೃಢಪಿಟ್ಟಿದೆ. ಈ ಇಬ್ಬರು ಸೋಂಕಿತ ಮಹಿಳೆಯರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಚನ್ನಪಟ್ಟಣದ ದೇವರಹೊಸಹಳ್ಳೀ ಗ್ರಾಮದ 30 ವಷ‍್ದ ಪುರುಷರೊಬ್ಬರು ಬೆಂಗಳೂರಿನಿಂದ ಹಿಂದಿರುಗಿದ್ದರು. ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದರಿ ವ್ಯಕ್ತಿಯಲ್ಲೂ ಸೋಂಕು ಪತ್ತೆಯಾಗಿದೆ. ಇವರನ್ನು ಚಿಕಿತ್ಸೆಗಾಗಿ ರಾಮನಗರದ ಕೋವಿಡ್‍ 19 ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮಾಸ್ಕ್ ಧರಿಸಿ, ಅಂತರ ಕಾಪಾಡಿ

ಕೋವಿಡ್‍ 19 ಸೋಂಕು ರಾಮನಗರ ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಹರಡುವುದನ್ನು ತಪ್ಪಿಸಲು ಎಲ್ಲರು ಕಡ್ಡಾಯವಾಗಿ ಮಾಸ್ಕ ಧರಿಸುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬರುವುದು ಅಪರಾಧ. ನಗರಸಭೆಯ ಅಧಿಕಾರಿಗಳು ತಲಾ 100 ದಂಡ ವಿಧಿಸುತ್ತಿದ್ದಾರೆ. ಅಲ್ಲದೆ ನಾಗರೀಕರು ತಮ್ಮ ನಡುವ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ. ನಾಗರೀಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಈ ಸೂಚನೆಗಳನ್ನು ಪಾಲಿಸುವುದು ಅನಿವಾರ್ಯ.