ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸೀರಹಳ್ಳದ ಒತ್ತುವರಿ ತೆರವಿಗೆ ಅಬ್ದುಲ್ ಅಜೀಂ ಸಲಹೆ

* ನಕ್ಷೆಯಲ್ಲಿಸೀರಹಳ್ಳದಅಗಲ 100 ಅಡಿ

ರಾಮನಗರ: ನಕ್ಷೆಯ ಪ್ರಕಾರ ನಗರ ವ್ಯಾಪ್ತಿಯ ಸೀರಹಳ್ಳ 100 ಅಡಿ ಅಗಲ ಇರಬೇಕು, ಆದರೆ ಸಾಕಷ್ಟು ಒತ್ತುವಾರಿಯಾಗಿದೆ. ನಗರಸಭೆಯ ಅಧಿಕಾರಿಗಳು ಸರ್ವೆ ಮಾಡಿಸಿ ಹಳ್ಳದ ಸರಹದ್ದು ಗುರುತಿಸಬೇಕು. ಒತ್ತವರಿ ಮಾಡಿಕೊಂಡಿರುವ ಕುಟುಂಬಗಳಿಗೆ ಸರ್ಕಾರ ಪರ್ಯಾಯ ವ್ಯವಸ್ಥೆಯ ಮೂಲಕ ಸೂರು ಕಲ್ಪಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಆಗ್ರಹಿಸಿದರು.

ನಗರ ವ್ಯಾಪ್ತಿಯ ನರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೀರಹಳ್ಳಕ್ಕೆ ಕನಿಷ್ಠ 9 ಅಡಿ ಎತ್ತರಕ್ಕೆ ಹಾಗು ಸುಮಾರು 2 ಕಿ.ಮೀವರೆಗೆ ತಡೆ ಗೋಡೆ ನಿರ್ಮಾಣವಾಗಬೇಕಾಗಿದೆ. ಇದಕ್ಕೆ 44 ಕೋಟಿ ರೂ ಅಗತ್ಯವಿದೆ. ಇದು ಸೇರಿದಂತೆ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ದಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಈ ವಿಚಾರದಲ್ಲಿ ಆಯೋಗದವತಿುಂದ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

600 ಕೋಟಿ ರೂ ನಷ್ಟದ ಅಂದಾಜು

ನೆರೆಹಾವಳಿಯಿಂದ ಸುಮಾರು 600 ಕೋಟಿ ರೂ ನಷ್ಟವಾಗಿದೆ ನಗರಸಭೆ ಮತ್ತು ತಾಲೂಕು ಆಡಳಿತ ಅಂದಾಜಿಸಿದೆ. 50 ಮನೆಗಳು ಸಂಪೂರ್ಣ ನಾಶವಾಗಿದೆ. ಈ ಮನೆಗಳಿಗೆ ಸರ್ಕಾರ 95 ಸಾವಿರದಿಂದ 5 ಲಕ್ಷದವರೆಗೆ ಪರಿಹಾರ ನೀಡಲಿದೆ. 150 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಕುಟುಂಬಗಳಿಗೆ ತಲಾ 50 ಸಾವಿರ ಪರಿಹಾರ ಹಾಗೂ ಪ್ರವಾಹದ ನೀರು ನುಗ್ಗಿರುವ  2 ಸಾವಿರ ಕುಟುಂಬಗಳಿಗೆ ತಲಾ 10 ಸಾವಿರದ ಪರಿಹಾರ ಈಗಾಗಲೆ ವಿತರಣೆಯಾಗಿದೆ ಎಂದರು. ಇದಲ್ಲದೆ 50 ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ರೇಷ್ಮೆ ರೀಲಿಂಗ್, ಟ್ವಿಸ್ಟಿಂಗ್ ಘಟಕಗಳಲ್ಲೂ ನಷ್ಟವಾಗಿದೆ. ಅಲ್ಪಸಂಖ್ಯಾತರ ಅಭಿವೃದ್ದಿ ಇಲಾಖೆ, ರೇಷ್ಮೆ ಇಲಾಖೆಗಳು ಸಹ ಈ ನಷ್ಟಕ್ಕೆ ಪರಿಹಾರ ಒದಗಿಸಬೇಕು ಎಂದರು.

3 ತಿಂಗಳವರೆಗೆ ಸಾಲ ಮರುಪಾವತಿ ಒತ್ತಾಯ ಬೇಡ

ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಕುಟುಂಬಗಳು ಮಾಡಿರುವ ಸಾಲದ ವಿಚಾರದಲ್ಲಿ ಸಂಬಂಧಿಸಿದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕನಿಷ್ಠ ಮೂರು ತಿಂಗಳವರೆಗೆ ಸಾಲದ ಕಂತುಗಳನ್ನು ಕೇಳ ಬಾರದು. ಈ “ಚಾರದಲ್ಲಿ ತಾವು ಲೀಡ್ ಬ್ಯಾಂಕ್ ಗಮನ ಸೆಳೆಯುವುದಾಗಿ ತಿಳಿಸಿದರು.

ಸರ್ಕಾರ ಅರ್ಕಾವತಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ನಂದಿ ಬೆಟ್ಟದಿಂದ ಮೇಕೆದಾಟುವರೆಗೆ ಅರ್ಕಾವತಿ ನದಿ ಪಾತ್ರವನ್ನು ಅಭಿವೃದ್ದಿಗೊಳಿಸಬೇಕು. ಜೊತೆಯಲ್ಲಿ ನದಿ ಪಾತ್ರದ ನಗರಗಳಾದ ದೇವನಹಳ್ಳಿ, ನೆಲಮಂಗಲ, ಮಾಗಡಿ, ರಾಮನಗರ ಮತ್ತು ಕನಕಪುರ ನಗರಗಳನ್ನು ಮಾದರಿ ನಗರಗಳನ್ನಾಗಿ ಪರಿವರ್ತಿಸಬೇಕು. ಬೆಂಗಳೂರು ನಗರದ ಮೇಲೆ ಒತ್ತಡ ಕಡಿಮೆಗೊಳಿಸಲು ಇದು ಅವಶ್ಯಕ ಎಂದರು.

ಶೇ 75 ಕಟ್ಟಡಗಳು ಅನಧಿಕೃತ!

ರಾಮನಗರದಲ್ಲಿ ಶೇ. 75 ರಷ್ಟು ಕಟ್ಟಡಗಳು ಅನಧಿಕೃತವಾಗಿದ್ದು ಇವುಗಳನ್ನು ಸಕ್ರಮಗೊಳಿಸಲು ಸರ್ಕಾರ ಅಕ್ರಮ-ಸಕ್ರಮ ಯೋಜನೆಯಡಿ ಅವಕಾಶ ಕೊಡಬೇಕು. ಈ “ಚಾರದಲ್ಲಿಯೂ ಆಯೋಗ ಪತ್ರಗಳನ್ನು ಬರೆಯಲಿದೆ ಎಂದರು.

ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನು ಅವಳಿ ನಗರಗಳನ್ನಾಗಿ ಮಾಡಿ ನಗರಪಾಲಿಕೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತ್ಯೇಕ ಪೊಲೀಸ್ ಕ”ುಷನರೇಟ್ ಸ್ಥಾಪಿಸಬೇಕು ಎಂದು ಸರ್ಕಾರಕ್ಕ ಸಲಹೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ , ಆಯುಕ್ತ ನಂದಕುಮಾರ್, ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಸಲ್ಮಾ ಫರ್ದೋಸ್, ನಗರ ಬಿಜೆಪಿ ಘಟಕದ ಅಧ್ಯಕ್ಷ ಪಿ.ಶಿವಾನಂದ, ನಗರಸಭೆ ಮಾಜಿ ಸದಸ್ಯ ಪರ್ವೇಜ್ ಪಾಷ, ನಗರಸಭೆಯ ಹಾಲಿ ಸದಸ್ಯರುಗಳು ಹಾಜರಿದ್ದರು.

…………..