ರಾಮನಗರದಲ್ಲಿ ಏ.14ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯ

ರಾಮನಗರ: ಇದೆ ಏಪ್ರಿಲ್ 9 ರಿಂದ 14ರವರೆಗೆ‌ ರಾಮನಗರದಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ ಎಂದು ಕರ್ನಾಟಕ ನೀರು ಸರಬರಾಜು ಮಂಡಳಿಯ ಪ್ರಕಟಣೆ ತಿಳಿಸಿದೆ.

ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ ತೊರೆಕಾಡನಹಳ್ಳಿಯಿಂದ ಶಿಂಷಾ ನದಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ. ರಾಮನಗರ ನಗರಕ್ಕೆ ನೀರು ಸರಬರಾಜು ಮಾಡುವ 450 ಎಂ.ಎಂ. ವ್ಯಾಸದ ಪಿಎಸ್‌ಸಿ ಏರು ಕೊಳವೆ ಮಾರ್ಗದ ಚನ್ನಪಟ್ಟಣದ ಬಸವೇಶ್ವರನಗರ ಮುಂಬಾಗ ಕಬ್ಬಾಳಮ್ಮ ವೇ ಬ್ರಿಡ್ಜ್ ಬಳಿ ಅಧಿಕವಾಗಿ ನೀರಿನ ಸೋರಿಕೆಯಾಗುತ್ತಿದ್ದು, ಅದನ್ನು ತಡೆಗಟ್ಟುವ ಸಲುವಾಗಿ ದುರಸ್ಥಿ ಮಾಡಲು ತುರ್ತು ಕಾಮಗಾರಿಯನ್ನು ಇಂದಿನಿಂದ (ಏ. 9) ಕೈಗೆತ್ತಿಕೊಳ್ಳಲಾಗಿದೆ.

ಹೀಗಾಗಿ ರಾಮನಗರಕ್ಕೆ ಏ. 14ರ ವರೆಗೆ ಆರು ದಿನಗಳು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ರಾಮನಗರ ನಗರಸಭೆ ಮತ್ತು ಜಲಮಂಡಳಿರವರೊಂದಿಗೆ ನಾಗರೀಕರು ಸಹಕರಿಸ ಬೇಕು ಎಂದು ಮಂಡಳಿಯ ಚನ್ನಪಟ್ಟಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.