ವಾಸವಿ ಮಾತೆಗೆ ನೂತನ ರಥ

ರಾಮನಗರ: ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರಿಗೆ ನೂತನ ಮಿನಿ ರಥ ಸಮರ್ಪಣೆಯಾಗಿದೆ.

ಮಿನಿ ತೇರು ಒಟ್ಟು 9 ಅಡಿ ಎತ್ತರವಿದೆ. ಆಗಮ ಪದ್ದತಿ ಪ್ರಕಾರ ತೇರು ರಚನೆಯಾಗಿದೆ. ದೇವಾಲಯದ ಒಳಾಂಗಣದಲ್ಲಿ ಉಪಯೋಗಕ್ಕಾಗಿ ರಥ ನಿರ್ಮಿಸಲಾಗಿದೆ. ಆರ್ಯವೈಶ್ಯ ಯುವಕರ ಸಂಘಟನೆ ಶ್ರೀ ವಾಸವಿ ಯೂತ್ಸ್ ಫೋರಂ ಸದಸ್ಯರು ತೇರಿನ ವೆಚ್ಚ ಭರಿಸಿದ್ದಾರೆ.

ಶ್ರೀ ಮಾತೆಯ ಉತ್ಸವ ಮೂರ್ತಿಯನ್ನು ಹೊತ್ತ ನೂತನ ರಥವನ್ನು ಎಳೆಯುವುದರ ಮೂಲಕ ರಾಮನಗರ ಉಪವಿಭಾಗದ ಡಿ.ವೈ.ಎಸ್ಪಿ ಪುರುಷೋತ್ತಮ ಮತ್ತು ರಾಮನಗರ ನಗರ ಸಿ.ಪಿ.ಐ ನರಸಿಂಹಮೂರ್ತಿ ರಥವನ್ನು ಭಕ್ತವೃಂದದ ಪರವಾಗಿ ಸಮರ್ಪಿಸಿದರು.

ಮುಂದಿನ ದಿನಗಳಲ್ಲಿ ತೇರಿಗೆ ಬೆಳ್ಳಿ ಕವಚ ಅಳವಡಿಸುವ ಯೋಜನೆ ಇದೆ ಎಂದು ಆರ್ಯ ವೈಶ್ಯ ಸಭಾದ ಪದಾಧಿಕಾರಿಗಳು ತಿಳಿಸಿದ್ದಾರೆ. ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 2021ರ ಫೆಬ್ರವರಿ ತಿಂಗಳಲ್ಲಿ ಪುನರ್ ಪ್ರತಿಷ್ಟಾಪನೆ ಮತ್ತು ಕುಂಬಾಭಿಷೇಕ ಕಾರ್ಯಕ್ರಮಗಳು ನಡೆಯಲಿದೆ.