ಜಿಲ್ಲೆಯಲ್ಲಿ ಕೋವಿಡ್‍ ಸಕ್ರಿಯ ಪ್ರಕರಣಗಳ ಏರಿಕೆ

* ಕೋವಿಡ್‍ ನಿಯಮಗಳು ಪಾಲಿಸಿ

ರಾಮನಗರ; ಜಿಲ್ಲೆಯಲ್ಲಿ ಕೋವಿಡ್ ಸೊಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಕ್ರಿಯ ಪ್ರಕರಣಗಳು ಸಂಖ್ಯೆ 80ಕ್ಕೆ ಜಿಗಿದಿದೆ.

As on 5th April 2021

ಏಪ್ರಿಲ್‍ 5, 2021ರಂದು ಅನ್ವಯಿಸುವಂತೆ ಚನ್ನಪಟ್ಟಣ ತಾಲೂಕಿನಲ್ಲಿ 14, ಕನಕಪುರ ತಾಲೂಕಿನಲ್ಲಿ 29, ಮಾಗಡಿಯಲ್ಲಿ 21 ಮತ್ತು ರಾಮನಗರ ತಾಲೂಕಿನಲ್ಲಿ 16 ಸಕ್ರಿಯ ಪ್ರಕರಣಗಳಿವೆ. ಕಳೆದ ವರ್ಷ ಆರಂಭವಾದ ಸೋಂಕು ಇಲ್ಲಿಯವರೆಗೂ ಜಿಲ್ಲೆಯಲ್ಲಿ 7898 ಮಂದಿಯಲ್ಲಿ ಪತ್ತೆಯಾಗಿದೆ. ಇಲ್ಲಿಯವರೆಗೆ 7741 ಮಂದಿ ಗುಣಮುಖರಾಗಿದ್ದಾರೆ. 77 ಮಂದಿ ಮೃತಪಟ್ಟಿದ್ದಾರೆ.

80 ಸಕ್ರಿಯ ಪ್ರಕರಗಳ ಪೈಕಿ ರಾಮನಗರದ ಕೋವಿಡ್ ಆಸ್ಪತ್ರೆಯಲ್ಲಿ 69 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕನಕಪುರದ ಬಳಿ ಇರುವ ದಯಾನಂದ ಸಾಗರ ಆಸ್ಪತ್ರೆಯಲ್ಲಿ  ಒಬ್ಬರು ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 2,6484 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈ ಪೈಕಿ 198153 ಮಂದಿಗೆ ನೆಗಟಿವ್ ವರದಿ ಬಂದಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.

ಮಾಸ್ಕ್ ಧರಿಸವುದು, ದೈಹಿಕ ಅಂತರ ಕಾಪಾಡಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ನಾಗರೀಕರಿಗೆ ಮನವಿ ಮಾಡಿದ್ದಾರೆ.