ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ರಾಮನಗರದಲ್ಲಿ ಪ್ರತಿಭಟನೆ.

ರಾಮನಗರ: ರಾಜಸ್ಥಾನದ ಉದಯ್ ಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕನ್ಹಯ್ಯ ಲಾಲ್ ಹತ್ಯೆಗೈದವರರಿಗೆ ಬಹಿರಂಗ ಶಿಕ್ಷೆ ವಿಧಿಸಿ ಎಂದು ಒತ್ತಾಯಿಸಿದರು.
ಈ ವೇಳೆ ಹಿಂಜಾವೇ ಪ್ರಮುಖ ಅನಿಲ್ ಮಾತನಾಡಿ, ಅಲ್ಲಾ ಹೇಳಿದ್ದಕ್ಕಿಂತ ಮುಲ್ಲಾ ಹೇಳಿದ್ದು ಮುಖ್ಯವಾಗಿದೆ. ಗ್ರಾಹಕರ ಸೋಗಿನಲ್ಲಿ ಬಂದು ಟೈಲರ್ ಕನ್ಹಯ್ಯನನ್ನು ಕೊಲೆ ಮಾಡಿದ್ದಾರೆ. ಕಲ್ಲಂಗಡಿ ಹಣ್ಣನ್ನು ಒಡೆದು ಹಾಕಿದ್ದಕ್ಕೆ ಬೊಬ್ಬೆ ಹೊಡೆದ ಬುದ್ದಿ ಜೀವಿಗಳು ಪ್ರಾಣ ಹರಣವಾದಾಗ ಮೌನವಹಿಸಿರುವುದೇಕೆ ಎಂದು ಪ್ರಶ್ನಿಸಿದರು.

ಕೊಲೆಗೆ ಮುನ್ನ ಮತ್ತು ಕೊಲೆ ನಂತರ ವೀಡಿಯೋ ಮಾಡಿದ್ದಾರೆ. ಹಂತಕರ ಮನಸ್ಥಿತಿ ಎಂತಹದ್ದು ಎಂಬುದು ಅರ್ಥ ಆಗುತ್ತೆ . ಮುಂದಿನ ದಿನಗಳ್ಳಲಿ ವ್ಯಾಪಾರಿಗಳ ಸೋಗಿನಲ್ಲಿ ನಮ್ಮ ಮೇಲೂ ಹಲ್ಲೆ ನಡೆಯುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಏನು ಎಂದು ಪ್ರಶ್ನಿಸಿದರು.
ಪ್ರವಾದಿ ನಿಂದನೆಗೆ ಕೊಲೆಯೇ ಶಿಕ್ಷೆ ಎಂದು ಹೇಳಿದ್ದ ನಾಯಕರ ವಿರುದ್ದವೂ ಕ್ರಮ ಕೈಗೊಳ್ಳಬೇಕು. ಕನ್ಹಯ್ಯ ಲಾಲ್ ಹಂತಕರಿಗೆ ಬಹಿರಂಗ ಶಿಕ್ಷೆ ಕೊಡ ಬೇಕು ಎಂದು ಒತ್ತಾಯಿಸಿದರು. ಮದರಸಾಗಳನ್ನು ನಿಲ್ಲಿಸಿ ಎಂದು ಸರ್ಕಾರಗಳನ್ನು ಅವರು ಆಗ್ರಹಿಸಿದರು.
ರಾಮನಗರ ಜಿಲ್ಲಾ ಸಂಯೋಜಕ್ ಎಸ್.ಸತೀಷ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸಹ ಸಂಯೋಜಕ ಪ್ರಶಾಂತ್, ಜಿಲ್ಲಾ ಸಂಪರ್ಕ ಮುಖ್ಯಸ್ಥ ಯೋಗೇಶ್ ಕುಮರ್.ಎಂ.ಡಿ, ಜಿಲ್ಲಾ ಯುವ ವಾಹಿನಿಯ ಕಿರಣ್, ಚನ್ನಪಟ್ಟಣ ತಾಲೂಕು ಸಂಯೋಜಕ ಮನೋಹರ್.ಟಿ.ಎಸ್. ಚನ್ನಪಟ್ಟಣ ತಾಲೂಕು ನಿಧಿ ಪ್ರಮುಖರ್ ಸುರೇಶ್ ಬಾಬು ಕನಕಪುರ ತಾಲೂಕು ಸಂಯೋಜಕ ರಾಜು, ಕನಕಪುರ ತಾಲೂಕು ನಿಧಿ ಪ್ರಮುಖ್ ನಟೇಶ್ಮುಖಂಡರುಗಳಾದ ಸಿ.ಪಿ.ರಾಜೇಶ್, ಹುಲುವಾಡಿ ದೆರವರಾಜ್, ರುದ್ರದೇವರು, ಚಂದ್ರಶೇಖರ ರೆಡ್ಡಿ, ರಾಮಣ್ಣ, ವಿನೋದ್ ಭಗತ್, ಪುಪ್ಪಲತಾ, ರಾಮಣ್ಣ, ಪಿ.ವಿ.ಬದರಿನಾಥ್, ರೈತ ಮುಖಂಡ ಮಲ್ಲಯ್ಯ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜುಲೈ 2 ರಿಂದ ಉಪಲೋಕಾಯುಕ್ತರಿಂದ ಕುಂದುಕೊರತೆ ಆಲಿಸುವ ಸಭೆ

ರಾಮನಗರ:  ನಗರದಲ್ಲಿರುವ ಜಿಲ್ಲಾ ಪಂಚಾಯತ್ ಭವನದ ಸಭಾಂಗಣ ಇದೇ ಜುಲೈ 2 ರಿಂದ ಜುಲೈ 4ರವೆರೆಗೆ ಉಪಲೋಕಾಯುಕ್ತ, ನ್ಯಾಯಮೂರ್ತಿ ಕೆ.ಎನ್ ಫಣೀಂದ್ರ  ಹಾಜರಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವರು ಎಂದು ಪ್ರಕಟಣೆ ತಿಳಿಸಿದೆ.  ಜುಲೈ 2ರಿಂದ 4ರವರೆಗೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವರು.  ಸಾರ್ವಜನಿಕರು ನಿಗಧಿತ ಅವಧಿಯಲ್ಲಿ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.