ರಾಮನಗರ: ವಿವಿಧ ಶಾಲೆಗಳಲ್ಲಿ ಯೋಗ ದಿನ ಆಚರಣೆ

ರಾಮನಗರ: ವಿಶ್ವ ಯೋಗ ದಿನದ ಅಂಗವಾಗಿ ನಗರದ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ನಡೆಸಿ ವಿವಿಧ ಆಸನಗಳ ಮಾಹಿತಿ ಪಡೆದುಕೊಂಡರು.

ನಗರದ ವಾಸವಿ ವಿದ್ಯಾನಿಕೇತನದಲ್ಲಿ ಯೋಗ ಗುರು ಶ್ರೀಶೈಲ ಹೂಗಾರ್ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ತರಬೇತಿ ನೀಡಿದರು. ಶಾಲೆಯಲ್ಲಿ ಪ್ರತಿ ವಾರ ಯೋಗಾ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯನ್ನು ವಿದ್ಯಾರ್ಥಿಗಳು ಪ್ರತಿ ದಿನ ತಮ್ಮ ಮನೆಯಲ್ಲಿ ಅಭ್ಯಸಿಸಬೇಕು ಎಂದು ಕರೆ ನೀಡಿದರು. ವಿವಿಧ ಆಸನಗಳಿಂದ ನಮ್ಮ ದೇಹಕ್ಕೆ ಆಗುವ ಉಪಯೋಗದ ಬಗ್ಗೆ ವಿವರಿಸಿದರು. ಈ ವೇಳೆ ಶಾಲೆಯ ಕಾರ್ಯದರ್ಶಿ ಪಿ.ವಿ.ಬದರಿನಾಥ್, ಮುಖ್ಯ ಶಿಕ್ಷಕಿ ವಿಜಯಪ್ರಭ ಹಾಜರಿದ್ದರು.

ಹೋಲಿ ಕ್ರಸೆಂಟ್ ಶಾಲೆಯಲ್ಲಿ

Holy Crescent School

ನಗರದ ಹೋಲಿ ಕ್ರೆಸೆಂಟ್ ಶಾಲೆಯಲ್ಲಿಯೂ ವಿಶ್ವ ಯೋಗ ದಿನದ ಅಂಗವಾಗಿ ವಿದ್ಯಾರ್ಥಿಗಳು ಯೋಗಾಭ್ಯಾಸ ನಡೆಸಿದರು. ಮಾನವೀಯತೆಗಾಗಿ ಯೋಗ ಎಂಬ ಶೀರ್ಷೀಕೆಯಡಿಯಲ್ಲಿ ಈ ವರ್ಷ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಯೋಗ ನಮ್ಮ ಮನಸ್ಸು ಮತ್ತು ದೇಹಕ್ಕೆ ಒಳಿತು ಮಾಡುತ್ತದೆ. ಮಾನವೀಯತೆಯ ಗುಣಗಳನ್ನು ರೂಢಿಸಿಕೊಂಡರೆ ಇಡೀ ಸಮಾಜಕ್ಕೆ ಒಳಿತಾಗುತ್ತದೆ ಎಂದು ಶಿಕ್ಷಕರು ಮಕ್ಕಳಿಗೆ ಮನದಟ್ಟು ಮಾಡಿಕೊಟ್ಟರು. ಈ ವೇಳೆ ಶಾಲೆಯ ಕಾರ್ಯದರ್ಶಿ ಅಲ್ತಾಫ್ ಅಹಮದ್, ಪ್ರಾಂಶುಪಾಲರಾದ ಶಾಜಿಯಾ ಮುಂತಾದವರು ಹಾಜರಿದ್ದರು.

…………….