ಏ.9ರ ಶುಕ್ರವಾರ ಜಿಲ್ಲೆಯಲ್ಲಿ 62 ಕೋವಿಡ್‍ ಪ್ರಕರಣ

* ಕೋವಿಡ್‍ ನಿಯಮಗಳು ಪಾಲಿಸಿ

* ಗಾಬರಿ ಬೇಡ, ಎಚ್ಚರವಹಿಸಿ

ರಾಮನಗರ, 09/04/2021:; ಜಿಲ್ಲೆಯಲ್ಲಿ ಕೋವಿಡ್ ಸೊಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಏಪ್ರಿಲ್‍ 9ರ ಶುಕ್ರವಾರ ಜಿಲ್ಲೆಯಲ್ಲಿ 62 ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಏಪ್ರಿಲ್‍ 9ರಂದು ಚನ್ನಪಟ್ಟಣದಲ್ಲಿ 8, ಕನಕಪುರದಲ್ಲಿ 11, ಮಾಗಡಿಯಲ್ಲಿ 9 ಮತ್ತು ರಾಮನಗರದಲ್ಲಿ 34 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶ ನೀಡಿದೆ.

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ಸಂಖ್ಯೆ 161ಕ್ಕೆ ಜಿಗಿದಿದೆ.  ಏಪ್ರಿಲ್‍ 9, 2021ರಂದು ಅನ್ವಯಿಸುವಂತೆ ಚನ್ನಪಟ್ಟಣ ತಾಲೂಕಿನಲ್ಲಿ 29, ಕನಕಪುರ ತಾಲೂಕಿನಲ್ಲಿ 42, ಮಾಗಡಿಯಲ್ಲಿ 41 ಮತ್ತು ರಾಮನಗರ ತಾಲೂಕಿನಲ್ಲಿ 49 ಸಕ್ರಿಯ ಪ್ರಕರಣಗಳಿವೆ. ಕಳೆದ ವರ್ಷ ಆರಂಭವಾದ ಸೋಂಕು ಇಲ್ಲಿಯವರೆಗೂ ಜಿಲ್ಲೆಯಲ್ಲಿ 8008 ಮಂದಿಯಲ್ಲಿ ಪತ್ತೆಯಾಗಿದೆ. ಇಲ್ಲಿಯವರೆಗೆ 7770 ಮಂದಿ ಗುಣಮುಖರಾಗಿದ್ದಾರೆ. 77 ಮಂದಿ ಮೃತಪಟ್ಟಿದ್ದಾರೆ.

161 ಸಕ್ರಿಯ ಪ್ರಕರಗಳ ಪೈಕಿ ರಾಮನಗರದ ಕೋವಿಡ್ ಆಸ್ಪತ್ರೆಯಲ್ಲಿ 150 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಕೋವಿಡ್‍ ಲಸಿಕೆ

ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ನಾಗರೀಕರಿಗೆ ಕೋವಿಡ್‍ ಲಸಿಕೆ ನೀಡುವ ಕಾರ್ಯದಲ್ಲಿ ಶೇ 62 ಸಾಧನೆಯಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯದಲ್ಲಿ ಶೇ 23 ಸಾಧನೆಯಾಗಿದೆ.

ಮಾಸ್ಕ್ ಧರಿಸವುದು, ದೈಹಿಕ ಅಂತರ ಕಾಪಾಡಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ನಾಗರೀಕರಿಗೆ ಮನವಿ ಮಾಡಿದ್ದಾರೆ. ಕೋವಿಡ್‍ ಲಸಿಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದ್ದು ಅರ್ಹವಯೋಮಾನದವರು ಪಡೆದುಕೊಳ್ಳುವಂತೆಯೂ ಅಧಿಕಾರಿಗಳು ಮನವಿ ಮಾಡಿದ್ದಾರೆ.

…………….