ಭಾರತ್ ವಿಕಾಸ್ ಪರಿಷತ್‌ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ

ರಾಮನಗರ: 28-10-2023: ಭಾರತ್ ವಿಕಾಸ್ ಪರಿಷತ್‌ನ ಸ್ಥಳೀಯ ವಾಲ್ಮೀಕಿ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರು ನಗರದ ಶ್ರೀ ಶಂಕರ ಮಠದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಘಟನೆಯ ಅಧ್ಯಕ್ಷ ರಾ.ಶಿ.ಬಸವರಾಜ್ ಮಾತನಾಡಿ, ಸಂಪರ್ಕ ಸಯೋಗ ಸಂಸ್ಕಾರ ಸೇವಾ ಸಮರ್ಪಣೆ ಮುಂತಾದ ಉದಾತ್ತ ಗುಣಗಳನ್ನು ಅಳವಡಿಸಿಕೊಂಡಿರುವ ಭಾರತ್ ವಿಕಾಸ್ ಪರಿಷತ್‌ನ ರಾಮನಗರ ಶಾಖೆ ವಾಲ್ಮೀಕಿ ಶಾಖೆ ಎಂದು ಗುರುತಿಸಿಕೊಂಡಿದೆ. ವಾಲ್ಮೀಕಿ ಅವರ ಜೀವನ ನಾರದ ಮುನಿಗಳ ಮಾರ್ಗದರ್ಶನದಿಂದ ಪರಿವರ್ತನೆಯಾಗಿದೆ. ಪರಿವರ್ತನೆಯ ನಂತರ ಜ್ಞಾನಾರ್ಜನೆ ಮಾಡಿ ಮಹಾಋಷಿ ಎಂದು ಕೀರ್ತಿಗಳಿಸಿದ್ದಾರೆ. ಅವರು ರಚಿಸಿದ ರಾಮಾಯಣ ಇದು ವಿಶ್ವಾದ್ಯಂತ ಅರ್ಪಣೆ ಆಗಿದೆ. ರಾಮಾಯಣದಲ್ಲಿ ಜೀವನ ಮೌಲ್ಯಗಳು ಅಡಗಿವೆ ಎಂದರು.

ಶಂಕರ ಮಠದ ಟ್ರಸ್ಟಿ ಎಚ್.ವಿ.ಶೇಷಾದ್ರಿ ಐಯ್ಯರ್, ವಕೀಲ ಅಂಬರೀಷ್, ಶಿಕ್ಷಕ ಕೆ.ಎನ್.ಮಹೇಶ್, ಆರೋಗ್ಯ ಸಂಚಾಲಕ ಬೋರಲಿಂಗಯ್ಯ, ಮಹರ್ಷಿ ವಾಲ್ಮೀಕಿ ಅವರ ಬಗ್ಗೆ ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ವನರಾಜು ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಸಹಕಾರ್ಯದರ್ಶಿ ವಿ.ವೆಂಕಟೇಶ್ ಸ್ವಾಗತಿಸಿದರು. ಎನ್.ವಿ.ಲೋಕೇಶ್ ವಂದಿಸಿದರು.

ಸಂಘಟನೆಯ ಕಾರ್ಯದಶಿ ಕೆ ಎಚ್ ಚಂದ್ರಶೇಖರಯ್ಯ, ಕೋಶಾಧಿಕಾರಿ ಕೆಂಗಲ್ ಹನುಮಂತಯ್ಯ, ಮಾನವ ಹಕ್ಕುಗಳ ಸಂಘನೆಯ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ಶಾರದಾಂಬ ದೇವಾಲಯದ ಅರ್ಚಕ ಪ್ರಭಾಕರ ಶಾಸ್ತ್ರಿ, ಪ್ರಮುಖರಾದ ವೆಂಕಟಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.