ಮೊಬೈಲ್ ಫೋನುಗಳಿಗೆ ಗುಡ್ ಬೈ! ಕ್ರಾಂತಿಗೆ ಕಾರಣವಾಗಲಿದೆಯೆ ಹ್ಯುಮೇನ್ ಎಐ ಪಿನ್ ಸಾಧನ

ಬರವಣಿಗೆ: ಬಿ.ವಿ.ಸೂರ್ಯ ಪ್ರಕಾಶ್

(ಅಂತರ್ಜಾಲದಲ್ಲಿ ಲಭ್ಯವಾದ ಮಾಹಿತಿಯನ್ನು ಆಧರಿಸಿ ಬರೆದಿದೆ)

ಸ್ಥಿರ ದೂರವಾಣಿ (ಲ್ಯಾಂಡ್ ಲೈನ್) ಬಳಸುತ್ತಿದ್ದ ಎಲ್ಲರಿಗೂ ಕೀ ಪ್ಯಾಡ್ ಮೊಬೈಲ್ ಫೋನುಗಳು ಪರಿಚಯವಾದಾಗ ಹುಬ್ಬೇರಿಸಿದ್ದುಂಟು (ನಾನು ಸೇರಿದಂತೆ). ಸ್ಮಾರ್ಟ್ ಫೋನುಗಳು ಮಾರಾಟಕ್ಕೆ ಬಂದಾಗ ಭವಿಷ್ಯದಲ್ಲಿ ಇನ್ನೇನು ಕಾದಿದೆಯೋ ಎಂದು ಉದ್ಗರಿಸುದ್ದುಂಟು.

ಇತ್ತಿಚಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಇಡೀ ವಿಶ್ವದಲ್ಲೇ ಕ್ರಾಂತಿ ಎಬ್ಬಿಸಿದೆ. ಕೇರಳದ ಶಾಲೆಯೊಂದರಲ್ಲಿ ರೋಬೋ ಶಿಕ್ಷಕಿಯನ್ನು ಪರಿಚಯಿಸಲಾಗಿದೆ. ಕೃತಕ ಬುದ್ದಿಮತ್ತೆಯನ್ನು ತುಂಬಿಸಿದ ಈ ರೋಬೋ ತರಗತಿಗಳನ್ನು ನಡೆಸಿಕೊಡುತ್ತದೆ.

ಈಗ ಹ್ಯುಮೇನ್ ಎಐ ಪಿ ಎಂಬ ಹೊಸ ಸಾಧನ ಪರಿಚಯವಾಗಿದೆಬೆಂಕಿಪೊಟ್ಟಣದ ಸೈಜಿನ ಸಾಧನ ಸಧ್ಯದಲ್ಲೇ ಮೊಬೈಲ್ ಫೋನುಗಳಿಗೆ ಮುಕ್ತಿ ನೀಡಲಿದೆ ಎನ್ನಲಾಗಿದೆ!

ಬಹುನಿರೀಕ್ಷಿತ ಹ್ಯುಮನ್ ಐ ಪಿನ್ ಅತಿ ಶೀಘ್ರದಲ್ಲೇ ಮಾರಾಟಕ್ಕೆ ಲಭ್ಯವಾಗಲಿದೆಯಂತೆ. ಕ್ರಾಂತಿಕಾರಿ ಎಂದು ಬಣ್ಣಿಸಲ್ಪಡುವ ಈ ಸಾಧನ ಧರಿಸಬಹುದಾದ ಕಂಪ್ಯೂಟರ್! (ಇದರ ವೀಡಿಯೋ ಯೂಟ್ಯೂಬ್ನಲ್ಲಿ ಲಭ್ಯವಿದೆ.)

ಹ್ಯುಮೇನ್ ಐ ಪಿನ್ ಒಂದು ಸಣ್ಣ ಸಾಧನವಾಗಿದ್ದು ಅದನ್ನು ಬಟ್ಟೆ ಅಥವಾ ಪರಿಕರಗಳ ಮೇಲೆ ಕ್ಲಿಪ್ ಮಾಡಬಹುದು. ಕೃತಕ ಬುದ್ದಿಮತ್ತೆ (ಎಐ) ಚಾಲಿತ ಸಾಧನವು ಧ್ವನಿ, ಸನ್ನೆ (gesture) ಮತ್ತು ಸ್ಪರ್ಶದ ಮೂಲಕ ನಮಗೆ ಅಗತ್ಯವಾದ ಸೇವೆಯನ್ನು ಪಡೆಯಬಹುದು. ಸಾಧನದ ಪ್ರಮುಖ ವೈಶಿಷ್ಟ್ಯಗಳಲ್ಲಿ ಅಂತರ್ಜಾಲ ಹುಡುಕಾಟ, ಅನುವಾದ, ದೂರವಾಣಿ ಕರೆಗಳು, ಹಾಡು ಕೇಳುವುದು, ಪಠ್ಯ ಸಂದೇಶಗಳನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದು ಹೀಗೆ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸಾಧನದ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅದರ ಪ್ರೊಜೆಕ್ಷನ್ (projection) ವ್ಯವಸ್ಥೆ! ಇದು ಬಳಕೆದಾರರ ಅಂಗೈ ಮೇಲೆ ಮಾಹಿತಿಯನ್ನು ಪ್ರದರ್ಶಿಸುತ್ತದೆ, ಪರದೆಯ ಅಗತ್ಯವನ್ನು ನಿವಾರಿಸುತ್ತದೆ.

ಹ್ಯುಮೇನ್ ಎಐ ಪಿನ್ ಧರಿಸಬಹುದಾದ ಮತ್ತು ಬಳಸಲು ಸುಲಭವಾದ ಮೊದಲ ಮಲ್ಟಿಮೋಡಲ್ ಸಾಧನವಾಗಿದೆ. ಮೊಬೈಲ್ ಫೋನಿನಲ್ಲಿ ಬಳಸುವ ಅಪ್ಲಿಕೇಷನ್ (app)ಗಳನ್ನು ಜಾಲತಾಣಗಳ ಮೂಲಕವೇ ನೀಡುತ್ತದೆ.  ಅಂದರೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡದೆಯೇ ಅಥವಾ ನಿರ್ವಹಿಸದೆಯೇ ಈಗ ನಾವು ಬಳಸುತ್ತಿರುವ ಅಪ್ಲಿಕೇಷನ್ಗಳನ್ನು ಬಳಸಲು ಸಾಧ್ಯವಿದೆ.

ಹ್ಯುಮೇನ್ ಎಐ ಪಿನ್ ಏನೇನು ಮಾಡುತ್ತೆ?

ಅಂಗೈನಲ್ಲೇ ಮಾಹಿತಿಃ ಡೈನಾಮಿಕ್ ಯುಐಯೊಂದಿಗೆ, ಎಐ ಪಿನ್ ಪ್ರಸ್ತುತಪಡಿಸಲಾಗುವ ಮಾಹಿತಿಯ ಪ್ರಕಾರಕ್ಕೆ ಹೊಂದುವಂತೆ ವಿನ್ಯಾಸ ಬಳಕೆದಾರ ಇಂಟರ್ಫೇಸ್ಗಳನ್ನು ಕ್ರಿಯಾತ್ಮಕವಾಗಿ ಉತ್ಪಾದಿಸುತ್ತದೆ. (e.g. stock prices, sports scores, flight status).

ಕರೆ ಮತ್ತು ಸಂದೇಶ ಕಳುಹಿಸುವಿಕೆಃ  ಈ ಸಾಧನವು ಹ್ಯಾಂಡ್ಸ್-ಫ್ರೀ ಕರೆಗಳನ್ನು ತೆಗೆದುಕೊಳ್ಳಲು ಮತ್ತು ಪಠ್ಯಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ಕೇವಲ ಸಂದೇಶಗಳನ್ನು ಅಥವಾ ಧ್ವನಿ ಆಜ್ಞೆಗಳನ್ನು ಕಳುಹಿಸಲು ಮತ್ತು ಕರೆಗಳನ್ನು ಮಾಡಲು ನಿರ್ದೇಶಿಸಬೇಕಾಗುತ್ತದೆ.

ಕ್ಯಾಮೆರಾ ಮತ್ತು ಮಾಧ್ಯಮ ಪ್ಲೇಬ್ಯಾಕ್ಃ ಬಳಕೆದಾರರು ಎಐ ಪಿನ್ಗೆ ನೀಡುವ ಧ್ವನಿ ಆಜ್ಞೆಗಳನ್ನು ಬಳಸಿಕೊಂಡು ಫೋಟೋಗಳನ್ನು ತೆಗೆದುಕೊಳ್ಳಬಹುದು, ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು ಮತ್ತು ಸಂಗೀತ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಬಹುದು. ಕೈ  ಬೆರಳಿನ ಟ್ಯಾಪ್ಗಳ ಮೂಲಕ ಚಿತ್ರಗಳು ಮತ್ತು ವೀಡಿಯೊಗಳನ್ನು ಕ್ಲಿಕ್ ಮಾಡುವುದು ಸಾಧ್ಯವಾಗಿದೆ. ಸಂಗೀತವನ್ನು ನಿಯಂತ್ರಿಸಬಹುದಾಗಿದೆ.

ಟಿಪ್ಪಣಿತೆಗೆದುಕೊಳ್ಳುವಿಕೆ ಮತ್ತು ಜ್ಞಾಪನೆಗಳುಃ ವೇಳಾಪಟ್ಟಿಗಳು, ವಿವಿಧ ರೀತಿಯ ಲಿಸ್ಟ್ ಗಳು, ಟಿಪ್ಪಣಿಗಳು ಮತ್ತು ಆದ್ಯತೆಗಳಂತಹ ವಿಷಯಗಳನ್ನು ನೆನಪಿಸಿಕೊಳ್ಳಲು ಐ ಪಿನ್ ಉಪಯುಕ್ತವಾಗಿದೆ. ಈ ಸಾಧನವು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ವೈಯಕ್ತಿಕ ಶಿಫಾರಸುಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

ವೆಬ್ ಹುಡುಕಾಟಃ  ದಿನನಿತ್ಯ ನಾವು ಯಾವುದಾದರು ಮಾಹಿತಿ ಪಡೆಯಲು ಬ್ರೌಸರ್ ಗಳ ಮೂಲಕ ಜಾಲತಾಣದಲ್ಲಿ ಹುಡುಕಾಟ ನಡೆಸುತ್ತೇವೆ. ಹ್ಯೂಮೇನ್ ಎಐ ಸಾಧನ ಕೂಡ ವೆಬ್ ಹುಡುಕಾಟ ಮತ್ತು ಮಾಹಿತಿಗಾಗಿ ಹುಡುಕುವ ಅನುಕೂಲಕರವಾಗಿದೆ.

ಭಾಷಾನುವಾಧ:  ಐ ಪಿನ್ ಸುಮಾರು 50 ಭಾಷೆಗಳನ್ನು ಬೆಂಬಲಿಸುತ್ತದೆ, ಇದು ಬಳಕೆದಾರರಿಗೆ ಸಂಭಾಷಣೆಯ ಸಮಯದಲ್ಲಿ ನೈಜ-ಸಮಯದ ಅನುವಾದವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಬೆಲೆ ಎಷ್ಟಿರಬಹುದು? ಹ್ಯುಮೇನ್ ಎಐ ಪಿನ್ ನ ಸಧ್ಯದ ಬೆಲೆ ಸುಮಾರು 60 ಸಾವಿರ ಇದೆ ಎನ್ನಲಾಗಿದೆ.