ಪ್ರಶಸ್ತಿಗಳು ಜನಪ್ರಿಯತೆ ಬೆಳೆಸುವುದಿಲ್ಲ, ಜನಸಾಮಾನ್ಯರು ಗುರುತಿಸಿದಾಗಲೇ ಜನಪ್ರಿಯತೆ – ರುಕ್ಮಾಂಗದ

ರಾಮನಗರ: ಸಂಘ-ಸಂಸ್ಥೆಗಳು ನೀಡುವ ಪ್ರಶಸ್ತಿಗಳಿಂದ ವ್ಯಕ್ತಿಯ ಜನಪ್ರಿಯತೆ ಬೆಳೆಯುವುದಿಲ್ಲ ಆದರೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡವರನ್ನು ಜನ ಗುರುತಿಸುತ್ತಾರೆ. ಇಂತಹವರೇ ಜನರಿಂದ ಪ್ರಶಸ್ತಿಗಳಿಸಿದ ವ್ಯಕ್ತಿಗಳಾಗುತ್ತಾರೆ ಎಂದು ವಲಯ ರೋಟರಿ ಜಿಲ್ಲೆ 3190ರ ಪಲ್ಸ್ ಪೋಲಿಯೋ ಅಭಿಯಾನದ ಮುಖ್ಯಸ್ಥ ರಕ್ಮಾಂಗದ ಅಭಿಪ್ರಾಯಪಟ್ಟರು.

ತಾಲೂಕಿನ ಪಾದರಹಳ್ಳಿ ಗ್ರಾಮದ ಸಮೀಪ ಇರುವ ಶಿಲ್ಹಾಂದ್ರ ರೆಸಾರ್ಟ್‌ನಲ್ಲಿ ರೋಟರಿ ರಾಮನಗರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರೋಟರಿ ರಾಮನಗರದ ನಿಕಟಪೂರ್ವ ಅಧ್ಯಕ್ಷ ಪಟೇಲ್ ಸಿ ರಾಜು ಮಾತನಾಡಿ ಪ್ರತಿ ವರ್ಷ ರೋಟರಿ ಸಂಸ್ಥೆಗಳ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಸನ್ಮಾನಿಸುವುದು ವಾಡಿಕೆ. ರೋಟರಿ ರಾಮನಗರದ ಅಧ್ಯಕ್ಷ ಪುಟ್ಟಸ್ವಾಮಿ ಡಿ.ಕೆ. ಸಹ ಈ ಪರಂಪರೆಯನ್ನು ಮುಂದುವರೆಸಿದ್ದಾರೆ ರೋಟರಿ ರಾಮನಗರದ ಸದಸ್ಯರು ಸಮಾಜ ಮುಖಿ ಕೆಲಸಗಳಲ್ಲಿ ಇಡೀ ವರ್ಷ ಗೊಡಗಿಸಿಕೊಂಡಿದ್ದರು. ಇವರನ್ನು ಗುರುತಿಸಿ ಅಭಿನಂದಿಸಲಾಗಿದೆ ಎಂದರು.

ರೋಟರಿ ರಾಮನಗರದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಡಿ.ಕೆ ಮಾತನಾಡುತ್ತಾ ತಮ್ಮ ಅಧ್ಯಕ್ಷ ಅವಧಿಯಲ್ಲಿ ಸಾಮಾಜಿಕ ಕಳಕಳಿವುಳ್ಳ ಅನೇಕ ಕಾರ್ಯಕ್ರಮಗಳನ್ನು ಮಾಡಿದೆ. ವೃದ್ಧಾಶ್ರಮಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ವಸತಿ ರಹಿತರಿಗೆ ಸಹಾಯ, ರಕ್ತದಾನ ಶಿಬಿರ, ಯುವಜನತೆಗೆ ನಾಯಕತ್ವ ತರಬೇತಿ ಶಿಬಿರ ಆಯೋಜನೆ, ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಸಿದ್ದು, ಈ ಕಾರ್ಯಕ್ರಮಗಳಲಿಲ ಸದಸ್ಯರೆಲ್ಲರೂ ತೊಡಗಿಸಿಕೊಂಡಿದ್ದು ತಮಗೆ ತೃಪ್ತಿ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಶಿವಣ್ಣ, ಮಾಜಿ ಅಧ್ಯಕ್ಷರುಗಳಾದ ಎಂ.ಕೆ ಮರಿಸ್ವಾಮಿ, ಸಿದ್ದಪ್ಪಾಜಿ, ಕೆ.ಎಸ್.ಕೃಷ್ಣ, ಮಹೇಂದ್ರ. ಜಿ, ಗೋಪಾಲ್ .ಕೆ ಮತ್ತು ರೋಟರಿ ಕುಟುಂಬ ವರ್ಗ ಭಾಗವಹಿಸಿದ್ದರು.