ದ್ವಿತೀಯ ಪಿಯೂ ಫಲಿತಾಂಶ: ರಾಮನಗರ ಜಿಲ್ಲೆಗೆ ಶೆ 60.22 ಫಲಿತಾಂಶ

ರಾಮನಗರ: 2021-22ನೇ ಸಾಲಿನ ದ್ವಿತೀಯ ಪಿಯೂಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ರಾಮನಗರ ಜಿಲ್ಲೆಗೆ ಶೇ 60.22 ಫಲಿತಾಂಶ ಲಭಿಸಿದೆ. 2020-21ನೇ ಸಾಲಿನಲ್ಲಿ ಜಿಲ್ಲೆಗೆ ಶೇ 60.96 ಫಲಿತಾಂಶ ಲಭಿಸಿತ್ತು.
ಜಿಲ್ಲೆಯಿಂದ ಒಟ್ಟು 8492 ಮಂದಿ ಹೊಸ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 5114 ಮಂದಿ ಉತ್ತೀರ್ಣರಾಗಿದ್ದು, ಶೇ 60.22 ಫಲಿತಾಂಶ ಲಭಿಸಿದೆ.

ಕಲಾ ವಿಭಾಗಕ್ಕೆ ಕಡಿಮೆ ಫಲಿತಾಂಶ!
ಕಲಾ ವಿಭಾಗದಲ್ಲಿ ಜಿಲ್ಲೆುಂದ 2401 ಮಂದಿ ಹೊಸಬರು ಪರೀಕ್ಷೆ ಬರೆದಿದ್ದರು. ಈ ಪೈಕಿ 973 ಮಂದಿ ತೇರ್ಗಡೆಯಾಗಿದ್ದು ಶೇ 40.52 ಫಲಿತಾಂತ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 4189 ಮಂದಿಯ ಪೈಕಿ 2810 ಮಂದಿ ತೇರ್ಗಡೆಯಾಗಿದ್ದು, ಶೇ 67.08 ಫಲಿತಾಂಶ ಗಳಿಕೆಯಾಗಿದೆ. ವಿಜ್ಞಾನ ವಿಭಾಗದಲ್ಲಿ 1902 ಮಂದಿ ಹೊಸಬರು ಪರೀಕ್ಷೆ ಬರೆದಿದ್ದರು. ಈ ಪೈಕಿ 1331 ಮಂದಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದು ಶೇ 69.94 ಫಲಿತಾಂಶ ಲಭಿಸಿದೆ. ವಿಷಯವಾರು ಫಲಿತಾಂಶದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಈ ಬಾರಿ ಒಳ್ಳೆಯ ಫಲಿತಾಂಶ ಪಡೆದಿದ್ದಾರೆ. ಕಲಾ “ಭಾಗಕ್ಕೆ ತೀರಾ ಕಡಿಮೆ ಫಲಿತಾಂಶ ಲಭ್ಯವಾಗಿದೆ.

ನಗರವಾಸಿಗಳ ಮೈಲುಗೈ: ಜಿಲ್ಲೆಯ ನಗರ ವ್ಯಾಪ್ತಿಯ 5996 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 3719 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ 62.02 ಫಲಿತಾಂಶ ಸಿಕ್ಕಿದೆ. ಗ್ರಾಮೀಣ ಭಾಗದಿಂದ 2496 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 1395 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು ಶೇ 55.89 ಫಲಿತಾಂಶ ಲಭಿಸಿದೆ.