ಜಿಲ್ಲೆಯಲ್ಲಿ 148ಕ್ಕೇರಿದ ಕೋವಿಡ್‍ 19 ಸೋಂಕಿತರ ಸಂಖ್ಯೆ

* ಬುಧವಾರ  ಒಂದೇ ದಿನ 36 ಹೊಸ ಪ್ರಕರಣಗಳು

* ಮಾಗಡಿಯಲ್ಲಿ ವ್ಯಕ್ತಿಯೊಬ್ಬರ ಸಾವು, 4ಕ್ಕೆ ಏರಿದ ಸಾವಿನ ಸಂಖ್ಯೆ

ರಾಮನಗರ, ಜೂನ್‍ 24,2020: ಜಿಲ್ಲೆಯಲ್ಲಿ ಬುಧವಾರ ಕೋವಿಡ್ 19 ವೈರಸ್‌ನ 36 ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 148ಕ್ಕೆ ಏರಿದೆ.

ಮಾಗಡಿಯಲ್ಲಿ 60 ವರ್ಷ ವ್ಯಕ್ತಿಯೊಬ್ಬರು ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ. ಇಲ್ಲಿನ ಕೋವಿಡ್‍ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಬುಧವಾರ ಮಾಗಡಿ ತಾಲೂಕಿನಲ್ಲಿ 11, ರಾಮನಗರದಲ್ಲಿ 5, ಕನಕಪುರದಲ್ಲಿ 17 ಮತ್ತು ಚನ್ನಪಟ್ಟಣದಲ್ಲಿ 3 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಬುಧವಾರ ಪ್ರಕಟವಾದ ಪರೀಕ್ಷಾ ಫಲಿತಾಂಶಗಳ ಪೈಕಿ 36 ಪಾಸಿಟಿವ್‍ ಪತ್ತೆಯಾಗಿದೆಯಾದರೂ 131 ಫಲಿತಾಂಶಗಳು ನೆಗಟಿವ್ ಆಗಿವೆ. ಇನ್ನು 973 ಫಲಿತಾಂಶಗಳು ಪ್ರಕಟವಾಗಬೇಕಾಗಿದೆ.  

ಇದೀಗ ಒಟ್ಟಾರೆ ಮಾಗಡಿಯಲ್ಲಿ 39, ರಾಮನಗರದಲ್ಲಿ 27, ಕನಕಪುರದಲ್ಲಿ 55 ಮತ್ತು ಚನ್ನಪಟ್ಟಣದಲ್ಲಿ 27 ಪ್ರಕರಣಗಳು ದಾಖಲಾಗಿವೆ. ಸೋಂಕು ಗುಣಮುಖವಾಗಿ ಚನ್ನಪಟ್ಟಣ, ಮಾಗಡಿ ಮತ್ತು ರಾಮನಗರ ತಾಲೂಕುಗಳಲ್ಲಿ ತಲಾ ಇಬ್ಬರು ಬಿಡುಗಡೆಯಾಗಿದ್ದಾರೆ. ಮಾಗಡಿಯಲ್ಲಿ 3 ಮತ್ತು ರಾಮನಗರದಲ್ಲಿ 1 ಮೃತಪಟ್ಟ ಪ್ರಕರಣಗಳು ದಾಖಲಾಗಿವೆ.