ಕೋವಿಡ್‍ 19 ಸೋಂಕು – ಅಂಕಿ ಅಂಶಗಳಿಂದ ಭಯ ಬೇಡ, ಎಚ್ಚರವಿರಲಿ

* ಇಲ್ಲಿಯವರೆಗೂ 7329 ನೆಗೆಟಿವ್‍ ಫಲಿತಾಂಶ ಬಂದಿದೆ. 44 ಮಂದಿ ಗುಣಮುಖರಾಗಿದ್ದಾರೆ.

ರಾಮನಗರ, ಜೂನ್‍ 28, 2020: ಜಿಲ್ಲೆಯಲ್ಲಿ ಭಾನುವಾರ 2 (ಮಾಗಡಿ ಮತ್ತು ರಾಮನಗರ ತಲಾ 1) ಹೊಸ ಕೋವಿಡ್‍19 ಪಾಸಿಟಿವ್‍ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 8829 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 7329 ಫಲಿತಾಂಶ ನೆಗೆಟಿವ್‍ ಬಂದಿದೆ. ಕೇವಲ 150 ಮಾತ್ರ ಪಾಸಿಟಿವ್‍ ಫಲಿತಾಂಶ ಬಂದಿದೆ. ಪಾಸಿಟಿವ್‍ ಪೈಕಿ 5 ಮಂದಿ ಮೃತ ಪಟ್ಟಿದ್ದು, 44 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. ಸಧ್ಯ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 101 ಇದೆ.
ಸಕ್ರಿಯ ಸೊಂಕಿತರ ಪೈಕಿ ಕೋವಿಡ್‍ 19 ಆಸ್ಪತ್ರೆಯಲ್ಲಿ 55 ಮಂದಿ ಇದ್ದಾರೆ. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ 46 ಮಂದಿ ಇದ್ದಾರೆ.

ಭಾನುವಾರ ದೃಢಪಟ್ಟಿರುವ 2 ಪ್ರಕರಣಗಳ ಪೈಕಿ ಮಾಗಡಿಯ 42 ವಯಸ್ಸಿನ ವ್ಯಕ್ತಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಚನ್ನಪಟ್ಟಣದವರಾಗಿದ್ದು ಅವರನ್ನು ಕೋವಿಡ್‍ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 2380 ಮಂದಿಯನ್ನು ಹೋಂ ಕ್ವಾರಂಟೈನ್‍ನಲ್ಲಿರಲು ಸೂಚಿಸಲಾಗಿದೆ. ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ 403 ಮಂದಿ ಇದ್ದಾರೆ. 2380 ಮಂದಿ 14 ದಿನದ ಕ್ವಾರಂಟೈನ್‍ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನು 1352 ಗಂಟಲು ದ್ರವದ ಮಾದರಿಗಳ ಫಲಿತಾಂಶ ಬರಬೇಕಾಗಿದೆ.

ತಾಲೂಕುವಾರು ವಿವರ:

ವಿವರ          ಚನ್ನಪಟ್ಟಣ ಕನಕಪುರ  ಮಾಗಡಿ    ರಾಮನಗರ

ಪಾಸಿಟಿವ್‍            30        55       39        26

ಗುಣಮುಖ           19        06         10        09

ಸಕ್ರಿಯ ಪ್ರಕರಣ  11        49       25       16

ಸಾವು               0         00         04         01        

ಸಾಮಾಜಿಕ ಅಂತರ ಮರೆಯಬೇಡಿ, ಮಾಸ್ಕ್ ಧರಿಸುವುದನ್ನು ಬಿಡಬೇಡಿ.