ಮೈಸೂರು: ಹಾಸ್ಮಾಟ್‍ನಿಂದ ಪಾದ ಮತ್ತು ಕಾಲಿನ ಕ್ಲಿನಿಕ್ ಪ್ರಾರಂಭ

ಮೈಸೂರು, ಮೇ 14, 2023: ಹಾಸ್ಮಾಟ್ ಹಾಸ್ಪಿಟಲ್ಸ್ (ಬೆಂಗಳೂರು) ವತಿಯಿಂದ ಮೈಸೂರಿನಲ್ಲಿರುವ ಮೆರಿಟಸ್ ಡಯಾಗ್ನೊಸ್ಟಿಕ್ಸ್ ಕೇಂದ್ರದಲ್ಲಿ ಹೊರರೋಗಿ (ಒಪಿಡಿ) ಕೇಂದ್ರವನ್ನು ಪ್ರಾರಂಭಿಸಿದ್ದು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಬುಧವಾರದಂದು ಪಾದ ಮತ್ತು ಕಾಲಿನ ಕ್ಲಿನಿಕ್ ತೆರೆಯಲಿದೆ. ಸೀನಿಯರ್ ಕನ್ಸಲ್ಟೆಂಟ್ ಆರ್ಥೊಪಿಡಿಕ್ ಸರ್ಜನ್ ಡಾ.ಅನನ್ಯ ಪುಟ್ಟರಾಜು ಈ ಕ್ಲಿನಿಕ್ ನಿರ್ವಹಿಸಲಿದ್ದಾರೆ ಮತ್ತು ಚಿಕಿತ್ಸೆಯ ಮಾರ್ಗದರ್ಶನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮಧುಮೇಹದ ಪಾದ, ಮುರಿತಗಳು/ಕಾಲಿನ ಗಾಯಗಳು, ಕಾಲಿನ ಉದ್ದದ ವ್ಯತ್ಯಾಸ, ಕ್ಲಬ್‍ಫೂಟ್, ಫ್ಲಾಟ್ ಫೂಟ್, ಹೀಲ್ ಪೇಯ್ನ್,ಗೈಟ್(ನಡೆಯುವಿಕೆ/ನಿಲುವು) ಸರಿಪಡಿಸುವಿಕೆ, ವಿರೂಪಗೊಂಡ ಪಾದದ ಚಿಕಿತ್ಸೆಗೆ 9342531493/8884346111 ಸಂಖ್ಯೆಗಳಿಗೆ ಕರೆ ಮಾಡಿ ಅಪಾಯಿಂಟ್‍ಮೆಂಟ್ ಕಾಯ್ದಿರಿಸಬಹುದು.
ಡಾ.ಅನನ್ಯ ಪುಟ್ಟರಾಜು ವಿಶ್ವಮಟ್ಟದ ಪರಿಣಿತಿಯ ವೈದ್ಯರು. ತಮ್ಮ ಸೇವೆ ರಾಜ್ಯದ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು ಎಂಬುದು ಅವರ ಉದ್ದೇಶ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಮಸ್ಯೆಯನ್ನು ಅಧ್ಯಯನ ಮಾಡಿ ಚಿಕಿತ್ಸೆಗೆ ಸಲಹೆ ನೀಡಲಾಗುವುದು.

ಫ್ಲಾಟ್‍ಫೂಟ್ ಎಂದರೆ ಪಾದದ ಒಳಗಡೆಯ ಕಮಾನುಗಳು ಅವುಗಳ ಮೇಲೆ ಒತ್ತಡ ಬಿದ್ದಾಗ ನೇರವಾಗುತ್ತವೆ.

ಸಾಮಾನ್ಯವಾಗಿ ಈ ಪಾದದ ಅಂಶಗಳು ಹೊರಕ್ಕಿರುತ್ತವೆ ಮತ್ತು ಇಡೀ ಪಾದ ನೆಲವನ್ನು ಸ್ಪರ್ಶಿಸುತ್ತದೆ. ಚಪ್ಪಟೆ ಪಾದವನ್ನು ಸಾಮಾನ್ಯವಾಗಿ ಜವಜಾತ ಶಿಶುಗಳಲ್ಲಿ ಕಾಣಲಾಗುತ್ತದೆ ಮತ್ತು ಕಮಾನುಗಳು ಮಗು ಬೆಳೆದಂತೆ ರೂಪುಗೊಳ್ಳುತ್ತವೆ. ಆದರೆ ಕೆಲ ಮಕ್ಕಳಲ್ಲಿ ಕಮಾನುಗಳು ರೂಪುಗೊಳ್ಳುವುದಿಲ್ಲ. ಚಪ್ಪಟೆ ಪಾದವು ಜೀವನದಲ್ಲಿ ನಂತರವೂ ಗಾಯದಿಂದ ಅಥವಾ ವಯಸ್ಸಿನ ಒತ್ತಡದಿಂದ ರೂಪುಗೊಳ್ಳಬಹುದು.

ರೊಬೊಟಿಕ್ ತಂತ್ರಜ್ಞಾನದಿಂದ ಮಂಡಿ ಬದಲಾವಣೆ
ರೋಬೊಟಿಕ್ ತಂತ್ರಜ್ಞಾನದಿಂದ ಮಂಡಿ ಬದಲಾವಣೆ ಸಾಧ್ಯ. ನಿಖರತೆ ಮತ್ತು ಮಂಡಿಯ ಕತ್ತರಿಕೆಯಿಂದ ಸಾಧಿಸುವ ನಿಖರ ವಿಧಾನವಾಗಿದ್ದು ಇದರಿಂದ ಅಳವಡಿಕೆಯು ನಿಮ್ಮ ಕಾಲಿನ ರಚನೆಗೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಇದು ಗರಿಷ್ಠ ನಿಖರತೆ ಮತ್ತು ಖಚಿತತೆ ನೀಡುತ್ತದೆ, ಕಡಿಮೆ ರಕ್ತ ನಷ್ಟ, ಶಸ್ತ್ರಚಿಕಿತ್ಸೆಯ ನಂತರ ಕಡಿಮೆ ನೋಉ, ಆಸ್ಪತ್ರೆಯಿಂದ ಬೇಗ ಬಿಡುಗಡೆ ಮತ್ತು ಬೇಗ ಗುಣವಾಗುವುದು ಒಳಗೊಂಡಿದೆ.

ಹಾಸ್ಮಾಟ್ ಆಸ್ಪತ್ರೆಯು ಭಾರತದಲ್ಲಿ ಆರ್ಥೊಪಿಡಿಕ್ಸ್, ನ್ಯೂರೋಸೈನ್ಸಸ್, ಅಪಘಾತ ಮತ್ತು ಟ್ರೌಮಾ ಕೇರ್, ಪ್ಲಾಸ್ಟಿಕ್ ಮತ್ತು ರೀಕನ್ಸ್‍ಟ್ರಕ್ಟಿವ್ ಸರ್ಜರಿ ಮತ್ತು ಸ್ಪೋಟ್ರ್ಸ್ ಮೆಡಿಸಿನ್‍ನಲ್ಲಿ ಪರಿಣಿತಿ ಪಡೆದಿರುವ ಸಮಗ್ರ ಸೇವೆಯ ಆಸ್ಪತ್ರೆಯಾಗಿದೆ. ಹಾಸ್ಮಾಟ್ ಎಂದರೆ ಹಾಸ್ಪಿಟಲ್ ಫಾರ್ ಆರ್ಥೊಪಿಡಿಕ್, ಸ್ಪೋಟ್ರ್ಸ್, ಮೆಡಿಸಿನ್, ಆರ್ಥೈಟಿಸ್ ಅಂಡ್ ಆ್ಯಕ್ಸಿಡೆಂಟ್ ಟ್ರೌಮಾ ಎನ್ನುವುದರ ಸಂಕ್ಷಿಪ್ತ ರೂಪ.

ಆಸ್ಪತ್ರೆಯು ಕೀಲು ಬದಲಾವಣೆ, ಆಥ್ರ್ರೊಸ್ಕೋಪಿ, ಅಸ್ಥಿರಜ್ಜು ರಿಪೇರಿ ಮತ್ತು ಶಸ್ತ್ರಚಿಕಿತ್ಸೆಗಳು, ಕ್ರೀಡಾ ಮೆಡಿಸಿನ್‍ನಲ್ಲಿ ಪರಿಣಿತಿ ಪಡೆದಿರುವ ಹಾಸ್ಮಾಟ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ಚೀಫ್ ಆರ್ಥೊಪಿಡಿಕ್ ಸರ್ಜನ್ ಡಾ. ಥಾಮಸ್ ಎ. ಚಾಂಡಿ ಅವರ ನೇತೃತ್ವ ಹೊಂದಿದೆ.