20 ವರ್ಷದ ಯುವತಿ ಈಗ ಯುವಕ!

* ಬೆಂಗಳೂರು ಫೋರ್ಟಿಸ್ ಆಸ್ಪತ್ರೆಯಲ್ಲಿ ಕ್ಲಿಷ್ಟಕರ ಲಿಂಗ ಬದಲಾವಣೆ ಯಶಸ್ವಿ!

* ಡಾ.ಮೋಹನ್ ಕೇಶವಮೂರ್ತಿ ಮತ್ತು ಡಾ.ಬಸವರಾಜ್ ನೀಲ್ಗರ್ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು: ಲೈಂಗಿಕ ಬೆಳವಣಿಗೆಯಲ್ಲಿ ಏರು-ಪೇರು (ಡಿಎಸ್‌ಡಿ) ಹೊಂದಿದ್ದ 20 ವರ್ಷ ಪ್ರಾಯದ ಒಬ್ಬ ರೋಗಿಯ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟೀಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಡಾ. ಮೋಹನ್ ಕೇಶವಮೂರ್ತಿ – ಡೈರೆಕ್ಟರ್, ಡಿಪಾರ್ಟ್‌ಮೆಂಟ್ ಆಫ್‍ ಯೂರೋಲಜಿ, ಯೂರೋ-ಓಂಕೋಲಜಿ, ಅಂಡ್ರೋಲಜಿ – ಟ್ರಾನ್ಸ್‌ಪ್ಲಾಂಟ್ ಆಂಡ್ ರೋಬೋಟಿಕ್ ಸರ್ಜರಿ ಮತ್ತು ಡಾ ಬಸವರಾಜ್ ನೀಲ್ಗರ್ – ಕನ್‌ಸಲ್ಟೆಂಟ್ ಯೂರೋಲಜಿ, ಯೂರೋ-ಓಂಕೋಲಜಿ, ಅಂಡ್ರೋಲಜಿ – ಟ್ರಾನ್ಸ್‌ಪ್ಲಾಂಟ್ ಆಂಡ್ ರೋಬೋಟಿಕ್ ಸರ್ಜರಿ, ಫೋರ್ಟೀಸ್ ಹಾಸ್ಪಿಟಲ್ಸ್, ಬೆಂಗಳೂರು ಮತ್ತು ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಲೈಂಗಿಕ ಬದಲಾವಣೆಗೆ ಅವಶ್ಯಕತೆ ಏನಿತ್ತು?

20 ವರ್ಷದ ಯುವತಿಯಲ್ಲಿ ಲೈಂಗಿಕ ವಿಕಸನ ತೊಂದರೆ (ಡಿ.ಎಸ್.ಡಿ) ಇತ್ತು. ಇದು ಕ್ರೋಮೋಸೋಮ್‌ಗಳಲ್ಲಿ ಹೊಂದಾಣಿಕೆ ಕೊರತೆ, ಲೈಂಗಿಕ ಸ್ವರೂಪದಲ್ಲಿ ಹೊಂದಾಣಿಕೆ ಕೊರತೆ ಹೊಂದಿರುವ ದೇಹದ ಅಪರೂಪದ ಸ್ಥಿತಿ. ಯಾರೇ ವ್ಯಕ್ತಿ ತನ್ನ ಬಾಲ್ಯದಲ್ಲಿ ಅಥವಾ ಅಪ್ರಾಪ್ತ ವಯಸ್ಸಿನ ಅವಧಿಯಲ್ಲಿ ಇಂತಹ ಏರು-ಪೇರುಗಳು ಉಂಟಾಗಬಹುದು. ಸದರಿ ಯುವತಿಗೆ ತನ್ನ 10ನೇ ವಯಸ್ಸಿನಿಂದಲೇ ಶರೀರದಲ್ಲಿ ಲೈಂಗಿಕ ಏರು-ಪೇರುಗಳನ್ನು  ಬೆಳೆಯುತ್ತಲೇ ಬಂದಿದೆ. ಆದರೆ ಈಕೆಗೆ ಈಗ 20 ವರ್ಷ. ಇತ್ತೀಚೆಗಷ್ಟೆ ಈ ಯುವತಿ ತಮ್ಮ ಸ್ಥಿತಿಯನ್ನು ಸರಿಪಡಿಸುವಂತೆ ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟೀಸ್ ಆಸ್ಪತ್ರೆಯ ಮೊರೆ ಹೋಗಿದ್ದರು. 

ಈಕೆಯನ್ನು ಪರಿಶೀಲಿಸಿದ ತಜ್ಞ ವೈದ್ಯರು ಆಕೆಯಲ್ಲಿ ಮೇಲ್ ಸ್ಯೂಡೋಹೆರ್ಮಾ್ರೆಡಿಟಿಸಿಮ್ (MALE PSEUDOHERMAPHRODITISM) ಎಂಬ ವೈದ್ಯಕೀಯ ಸ್ಥಿತಿ ಇದೆಯೆಂದು ಪತ್ತೆಹೆಚ್ಚಿದರು. ಪುರುಷನಾಗಿದ್ದರೂ ಹೊರಗಿನ ಲೈಂಗಿಕ ಸ್ವರೂಪ ಮಹಿಳೆಯಂತೆ ಕಂಡು ಬರುವ ಒಂದು ಸ್ಥಿತಿ ಆಕೆಯಲ್ಲಿತ್ತು.  ರೋಗಿಯನ್ನು ಮತ್ತಷ್ಟು ವಿಶ್ಲೇಷಿಸಿ ನೋಡಿದಾಗ, ಶರೀರದಲ್ಲಿ ಪುರುಷ ಸ್ವರೂಪವಾದ ಲೈಂಗಿಕ ಬೆಳವಣಿಗೆಗಳು ಕಂಡು ಬಂದಿತ್ತಾದರೂ, ಪುರುಷರ ಗುಪ್ತಾಂಗ ಬೆಳೆದಿರಲಿಲ್ಲ.

ಕ್ಲಿಷ್ಟ ಸಮಸ್ಯೆ ಏಕೆ?

ತಜ್ಞ ವೈದ್ಯ ಡಾ. ಮೋಹನ್ ಕೇಶವಮೂರ್ತಿ ಅವರ ಪ್ರಕಾರ ಪುರುಷರನ್ನು ಮಹಿಳೆಯಾಗಿ ಲಿಂಗ ಬದಲಾಯಿಸುವುದು ತುಂಬಾ ಸುಲಭ, ಆದರೆ, ಮಹಿಳೆಯನ್ನು ಪುರುಷರನ್ನಾಗಿ ಮಾಡುವ ಪ್ರಕ್ರಿಯೆ ತುಂಬಾ ಕ್ಲಿಷ್ಟವಾಗಿದೆ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ರೋಗಿ 46, ಎಕ್ಸ್‌ವೈ ಕ್ಯಾರೋಟೈಪ್ (ಹೆಣ್ಣಿನ ಲಕ್ಷಣದ ವೈದ್ಯಕೀಯ ಸ್ಥಿತಿ) ಪ್ರಕಾರ ಹೊಂದಿದ್ದರು ಸಹ ಆಕೆಯ ಲೈಂಗಿಕ ಸ್ವರೂಪ ಆಂತರಿಕವಾಗಿ ಪುರುಷರಿಗಿದ್ದಂತೆ ಇತ್ತು. ಆದರೆ ಪರಿಪೂರ್ಣ ಬೆಳವಣಿಗೆ ಆಗಿರಿಲಿಲ್ಲ. ಗರ್ಭಾಶಯ ವಿಕಸನ ಸಂದರ್ಭದಲ್ಲಿ  ಈ ಪರಿಸ್ಥಿತಿ ಉದ್ಬವಿಸಿತ್ತು. ಇದರ ಆಧಾರದ ಮೇರೆಗೆ ತಾವು ಲಿಂಗ ಬದಲಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ.

ಬಕ್ಸಲ್ ಮ್ಯೂಕೋಸಾ ತಾಂತ್ರಿಕತೆ ಉಪಯೋಗಿಸುತ್ತಾ 10 ಸೆಮೀ ಹೆಚ್ಚುವರಿ ನಳಿಕೆ ನಿರ್ಮಿಸುತ್ತಾ ಆಕೆಯ ಶರೀರದಲ್ಲಿ ರಿಪೇರಿ ಕಾರ್ಯವನ್ನುಪ್ರಾರಂಭಿಸಿ  ಶರೀರವನ್ನು ಪುರುಷನನ್ನಾಗಿ ಮಾಡಲು ತಯಾರು ಆರಂಭಿಸಿದ್ದಾಗಿ ತಜ್ಞ ವೈದ್ಯರು ತಿಳಿಸಿದ್ದಾರೆ. ಈ ಪ್ರಕ್ರಿಯೆಯನ್ನು ಬಕ್ಸಲ್ ಮ್ಯೂಕೋಸಲ್ ಯುರೆಥ್ರೋಪ್ಲಾಸ್ಟಿ ಎಂದು ಕರೆಯುತ್ತಾರೆ.

ಇದಲ್ಲದೆ ಹೆಚ್ಚುವರಿಯಾಗಿ ರೂಡಿಮೆಂಟರಿ ಕೋರ್ಪೋರಾ ಟಿಶ್ಯೂವಿನಲ್ಲಿ ಮಾಲ್ಲಿಯೇಬಲ್ ಪೆನೈಲ್ ಪ್ರೋಸ್ಥೆಸಿಸ್ ಅನ್ನು ಸೇರಿಸಿದ್ದಾರೆ. ಇದು ಪುರುಷರಲ್ಲಿರುವಂತೆ ಗುಪ್ತಾಂಗ ಉದ್ರೇಕಗೊಳಿಸುವುದಕ್ಕಾಗಿ ವೈದ್ಯಕೀಯ ಕ್ಷೇತ್ರ ಅರಿತು ಕೊಂಡಿರುವ ತಂತ್ರ. ಇದರಿಂದಾಗಿ ವ್ಯಕ್ತಿಯು ಪುರುಷನಂತೆ ತನ್ನ ಲೈಂಗಿಕ ಕಾರ್ಯವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಬಹುದಾಗಿದೆ. (ಪುರುಷರಲ್ಲಿ ಗುಪ್ತಾಂಗ ನಿಮಿರುವ ಸಮಸ್ಯೆ ಹೋಗಲಾಡಿಸುವುದಕ್ಕಾಗಿ ಮಾಲ್ಲಿಯೇಬಲ್ ಪೆನೈಲ್ ಇಂಪ್ಲಾಂಟ್ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನ).

ಕಾನೂನು ಬದ್ದ ಮಾನ್ಯತೆಗೆ ಈ ಪ್ರಕ್ರಿಯೆ ಅವಶ್ಯಕ – ಡಾ. ಬಸವರಾಜ್‍ ನೀಲ್ಗರ್‍

ಡಾ ಬಸವರಾಜ್ ನೀಲ್ಗರ್ ಅವರ ಪ್ರಕಾರ ಮುಖ್ಯವಾಗಿ  ತೃತಿಯ ಲಿಂಗದವರಿಗಾಗಿ ಸಾಮಾಜಿಕ ಮತ್ತು ಕಾನೂನು ಬದ್ಧ ಮಾನ್ಯತೆ ಪಡೆಯುವುದಕ್ಕಾಗಿ ಭಾರತದಲ್ಲಿ ಇತ್ತೀಚೆಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ (ಜಿ.ಆರ್.ಎಸ್) ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಉತ್ತಮ ಜೀವನ ನಡೆಸುವುದಕ್ಕಾಗಿ ಯಾರೇ ವ್ಯಕ್ತಿ ಸೂಕ್ತವಾದ ಶಾರೀರಿಕ ವ್ಯವಸ್ಥೆ ಹೊಂದುವುದು ಹಾಗೂ ಇದಕ್ಕಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರಾಗುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಾಮುಖ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬಕ್ಸಲ್ ಮ್ಯೂಕೋಸಾ ರೀಕನ್‌ಸ್ಟ್ರಕ್ಟೀವ್  ಎಂಬ ವಿಧಾನ  ಯೂರೋಲಜಿಯಲ್ಲಿ ಅತ್ಯಂತ ಯಶಸ್ವೀ ತಂತ್ರ ಎಂದು ಅವರು ಬಣ್ಣಿಸಿದ್ದಾರೆ.

ವೈದ್ಯಕೀಯವಾಗಿ ಲಿಂಗ ಪರಿವರ್ತನೆಯಾದ ರೋಗಿಯನ್ನು ಒಂದು ವಾರ ನಿಗಾದಲ್ಲಿರಿಸಿ ತದ ನಂತರ ಮನೆಗೆ ಕಳುಹಿಸುವುದಾಗಿ ವೈದ್ಯರು ತಿಳಿಸಿದ್ದಾರೆ.

…………….