ನ.5ರಂದು ರಾಮನಗರದಲ್ಲಿ ಕನ್ನಡ ರಾಜ್ಯೋತ್ಸವ, ರಸಮಂಜರಿ ಕಾರ್ಯಕ್ರಮ

  • ಖ್ಯಾತನಾಮರಿಂದ ಗಾಯನ, ಸಂಗೀತ
  • ಮಿಮಿಕ್ರಿ ಗೋಪಿ, ಪಾವಗಡ ಮಂಜುನಾಥ್‌ರಿಂದ ನಗೆ ಸಂಜೆ

ರಾಮನಗರ, 3.29.2026: ನಗರಸಭೆವತಿಯಿಂದ ಪೂರ್ಣಗೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಇದೇ ನ.5ರ ಗುರುವಾರ ಸಂಜೆ 4 ಗಂಟೆಗೆ  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲೋಕಾರ್ಪಣೆ ಮಾಡಿದ ನಂತರ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 22 ಮಂದಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳು ಪ್ರದಾನ ಮಾಡಲಿದ್ದಾರೆ. ಮಲ್ಲಕಂಬ ಸ್ಪರ್ಧೆಗಳಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ೮ ಮಂದಿ ಕ್ರೀಡಾಪಟುಗಳನ್ನು ಸಹ ಸನ್ಮಾನಿಸಲಾಗುವುದು ಎಂದರು.

ಖ್ಯಾತ ಗಾಯಕರು, ಸಂಗೀತಗಾರರಿಂದ ರಸಮಂಜರಿ
ನಂತರ ೭೧ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಇ ಎಂಟರ್‌ಟೈರ‍್ಸ್ ತಂಡ ಈ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಡುವರು. ಖ್ಯಾತ ಗಾಯಕರಾದ ದಿವ್ಯ ರಾಮಚಂದ್ರ ಮತ್ತು ತಂಡ, ಹಾಸ್ಯಕಲಾವಿದ ಮಿಮಿಕ್ರಿ ಗೋಪಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪಾವಗಡ ಮಂಜು ಸಭಿಕರನ್ನು ರಂಜಿಸಲಿದ್ದಾರೆ. ರಸಮಂಜರಿಯಲ್ಲಿ ಖ್ಯಾತ ಸಂಗೀತಗಾರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಮ್ಮ ಜಿಲ್ಲೆಯವರೇ ಆಗಿದ್ದು, ಅಭಿವೃದ್ದಿ ವಿಚಾರದಲ್ಲಿ ಅವರಿಂದ ಹೆಚ್ಚಿನ ನಿರೀಕ್ಷೆಗಳಿವೆ. ಹೀಗಾಗಿ ನಾಗರೀಕರು ತಮ್ಮ ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅಧ್ಯಕ್ಷ ಕೆ.ಶೇಷಾದ್ರಿ ಮನವಿ ಮಾಡಿದ್ದಾರೆ.