ರಾಮನಗರ: ಇದೇ ಅ.28ರ ಮಂಗಳವಾರ ಸಂಜೆ 4 ಗಂಟೆಗೆ ಇಲ್ಲಿಗೆ ಸಮೀಪದ ಜಾನಪದ ಲೋಕದಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ಪೌರ ಸೇವಾ ನೌಕರರು ಶ್ರೀ ಕೃಷ್ಣ ಸಂಧಾನ ಎಂಬ ನಾಟಕವನ್ನು ಪ್ರದರ್ಶನ ಮತ್ತು ಸಾಮೂಹಿಕ ನೃತ್ಯ ಮತ್ತು ಗಾಯನ ನಡೆಸಿಕೊಡಲಿದ್ದಾರೆ.
ಈ ಸಂಬಂಧ ಇಲ್ಲಿನ ನಗರಸಭೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿದರು. ಕಾರಣಾಂತರಗಳಿಂದ ಸೆಪ್ಟಂಬರ್‌ನಲ್ಲಿ ನಡೆಯಬೇಕಿದ್ದ ಪೌರ ಕಾರ್ಮಿಕರ ದಿನಾಚರಣೆಯನ್ನು ಅ.೨೮ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ವಿಶೇಷತೆ ಪೌರ ಕಾರ್ಮಿಕರೇ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಜೊತೆಗೆ ಅವರೇ ಸಂಯೋಜಿಸಿಕೊAಡಿರು ಕರ್ನಾಟಕ ವೈಭವ ಎಂಬ ನಾಮಕರಣದಲ್ಲಿ ಸಾಮೂಹಿಕ ನೃತ್ಯ ಮತ್ತು ಗಾಯನವನ್ನು ನಡೆಸಿಕೊಡಲಿದ್ದಾರೆ ಎಂದರು.

ದಿನನಿತ್ಯ ಬೆಳ್ಳಂಬೆಳಿಗ್ಗೆ ರಸ್ತೆಗಿಳಿಯುವ ಪೌರ ಕಾರ್ಮಿಕರು ನಗರವನ್ನು ಸ್ವಚ್ಚವಾಗಿ ಇಡುತ್ತಿದ್ದಾರೆ. ಹೀಗಾಗಿಯೇ ನಗರದ ನಾಗರೀಕರು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಪೌರ ಕಾರ್ಮಿಕರ ಸೇವೆಯನ್ನು ಸ್ಮರಿಸುವ ಪೌರ ಕಾರ್ಮಿಕರ ದಿನಾಚರಣೆಯನ್ನು ವಿಶೇಷವನ್ನಾಗಿಸುವ ನಿಟ್ಟಿನಲ್ಲಿ ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ನಿರ್ಧರಿಸಿ, ಪೌರ ಕಾರ್ಮಿಕರಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡಲಾಗಿದೆ ಎಂದರು.
ಪೌರ ಕಾರ್ಮಿಕರು ಮಂಗಳವಾರ ಸಾಂಸ್ಕೃತಿಕವಾಗಿ ತಡೊಗಿಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಮೆರೆಯಲಿದ್ದಾರೆ ಎಂದರು.
ತಂದೆ-ತಾಯಿಯವರ ಜೀವನ ಸಂಧ್ಯಾ ಕಾಲದಲ್ಲಿ ವೃದ್ದಾಶ್ರಮಗಳಿಗೆ ಕಳುಹಿಸಬೇಡಿ ಎಂಬ ಸಾಮಾಜಿಕ ಕಳಕಳಿ ಹೊತ್ತು ಭರತನಾಟ್ಯ ಕಲಾವಿದೆ. 24 ವರ್ಷದ ಚಿತ್ರಾರಾವ್ ಒಬ್ಬಂಟಿಯಾಗಿ ದ್ವಿಚಕ್ರವಾಹನದಲ್ಲಿ ಕನ್ಯಾಕುಮಾರಿಯಿಂದ ಲೇಹ್-ಲಡಾಕ್‌ವರೆಗೆ ಪ್ರಯಾಣ ಮಾಡಿ ನಗರ, ಪಟ್ಟಣ, ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದ್ದರು. ಇವರನ್ನು ರಾಮನಗರ ನಗರಸಭೆಯ ಸ್ವಚ್ಚತಾ ರಾಯಭಾರಿಯನ್ನಾಗಿ ಮಂಗಳವಾರ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಮಾಹಿತಿ ಕೊಟ್ಟರು.
ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್, ಜ್ಞಾನ ವಿಕಾಸ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಆದ ಸಿ.ಎಂ.ಲಿAಗಪ್ಪ, ಕರ್ನಾಟಕ ರಾಜ್ಯ ಆದಿಜಾಂಬವ ಅಭಿವೃಧ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಎಸ್.ಗಂಗಾಧರ್, ಜಾನಪದ ಕಲಾವಿದ ಹಾಗೂ ರಂಗಭೂಮಿ ಗಾಯಕ ಜರ್ನಾಧನ (ಜೆನ್ನಿ), ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು ಗಾಣಕಲ್, ರಾಮನಗರ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಚೇತನ್‌ಕುಮಾರ್.ಎ.ಬಿ, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಸುರೇಶ್, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ವೈ.ಹೆಚ್.ಮಂಜು, ನಿವೃತ್ತ ಔಷಧ ನಿಯಂತ್ರಕ ಹೆಚ್ ಶ್ರೀನಿವಾಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸುವರು ಎಂದು ಅವರು ತಿಳಿಸಿದರು.
ಇದೇ ವೇಳೆ ಅವರು 100ಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಇ-ಖಾತಾ ಪತ್ರಗಳನ್ನು ವಿತರಿಸಿದರು. ಇ-ಖಾತೆ ಅಭಿಯಾನದ 24ನೇ ಕಂತು ಇದಾಗಿದೆ. ಸಾಲು ಸಾಲು ರಜೆಗಳು, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಅಧಿಕಾರಿ ವರ್ಗ ತೊಡಗಿಸಿಕೊಂಡಿದ್ದು ಹಾಗೂ ಸರ್ವರ್ ಸಮಸ್ಯೆ ಕಾರಣ ಈ ಬಾರಿಯೂ ಇ-ಖಾತ ವಿತರಣೆಗೆ ವಿಳಂಬವಾಯಿತು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆಯ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಆಯುಕ್ತ ಡಾ.ಜಯಣ್ಣ, ನಗರಸಭಾ ಸದಸ್ಯ ಅಜ್ಮತ್ ಉಪಸ್ಥಿತರಿದ್ದರು.
