ಇಂದು ಕನಕಪುರ ಮತ್ತು ಮಾಗಡಿಯಲ್ಲಿ ತಲಾ ಒಂದು ಸೋಂಕು ಪಾಸಿಟಿವ್‍?

ರಾಮನಗರ,ಜೂನ್‍ 9, 2020: ಜಿಲ್ಲೆಯ ಕನಕಪುರ ಮತ್ತು ಕನಕಪುರ ತಾಲೂಕುಗಳಲ್ಲಿ ತಲಾ ಒಂದು ಕೋವಿಡ್ 19 ಪಾಸಿಟಿವ್‍ ಪ್ರಕರಣ ವರದಿಯಾಗಿದೆ.

ಕನಕಪುರ ತಾಲೂಕಿನಲ್ಲಿ ಯುವಕನೊಬ್ಬನಲ್ಲಿ ಕೊರೊನಾ ಸೋಂಕು ತಗುಲಿದೆ. ಈತ ಕನಕಪುರ ನಗರದ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದಾನೆ. ಅಂಗಡಿ ಮಾಲೀಕರ ಮನೆಯ ಮಹಡಿಯಲ್ಲಿ ವಾಸವಿದ್ದ. ಈತ ತಮಿಳುನಾಡಿನ ಗಡಿ ಗ್ರಾಮ ಕಾಡುಶಿವನಹಳ್ಳಿಯ ನಿವಾಸಿ. 15 ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ಮದುವೆಯೊಂದರಲ್ಲಿ ಪಾಲ್ಗೊಂಡಿದ್ದ. ಮದುವೆಗೆ ಕೆಲವರು ತಮಿಳುನಾಡಿನಿಂದಲೂ ಮದುವೆಗೆ ಆಗಮಿಸಿದ್ದರು ಅಲ್ಲಿಂದಲೇ ಈ ಯುವಕನಿಗೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಜ್ವರ, ಕೆಮ್ಮು, ನಗೆಡಿಯಿಂದ ಬಳಲುತ್ತಿದ್ದ. ಹೀಗಾಗಿ ಈತನ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯ ಫಲಿತಾಂಶ ಮಂಗಳವಾರ ಬಂದಿದ್ದು, ಪಾಸಿಟಿವ್‍ ಎಂದು ಗೊತ್ತಾಗಿದೆ.

ಮಾಗಡಿ ತಾಲೂಕು ಗ್ರಾಮವೊಂದರ ಮಹಿಳೆಯೊಬ್ಬರಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಸದರಿ ಮಹಿಳೆ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‍ನಲ್ಲಿದ್ದರು ಎಂದು ಹೇಳಲಾಗಿದೆ.  ಮಂಗಳವಾರದ ಈ ಎರಡು ಪ್ರಕರಣಗಳಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿದಂತಾಗಿದೆ. ಈ ಪೈಕಿ ಒಂದು ಸೋಂಕಿತ ಮಗು ಗುಣಮುಖವಾಗಿ ಬಿಡಿಗಡೆಯಾಗಿದೆ.