ರಾಮನಗರ, ಮೇ ೨೫: ಒಂದೇ ಒಂದು ಕೋವಿಡ್ ೧೯ ಪಾಸಿಟಿವ್ ಪ್ರಕರಣ ಇಲ್ಲದ ರಾಮನಗರ ಜಿಲ್ಲೆಯಲ್ಲೂ ಒಂದು ಪ್ರಕರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಚೆನ್ನೈನಿಂದ ಮಾಗಡಿಗೆ ಆಗಮಿಸಿರುವ ಮಗುವೊಂದರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಸಧ್ಯ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆಗೆ ದಾಖಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾಧಿಕಾರಿಗಳು ಈ ವಿಚಾರವನ್ನು ದೃಢೀಕರಿಸಿಲ್ಲ.
