ಧಾರ್ಮಿಕ ಸ್ಥಳ: ಸರ್ಕಾರದ ಅನ್‍ಲಾಕ್‍ ನಿಯಮಗಳು

ಕೋವಿಡ್‍ 19 ಸೋಂಕು ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್‍ಡೌನ್‍ ವಿಧಿಸಿದ್ದವು. ದೇವಾಲಯ, ಮಸೀದಿ, ದರ್ಗಾ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವಿತ್ತು. ಇದೀಗ ಹಂತಹಂತವಾಗಿ ಲಾಕ್‍ಡೌನ್‍ ತೆರವುಗೊಳಿಸಲಾಗುತ್ತಿದೆ. ಜೂನ್‍ 8,2020ರ ಸೋಮವಾರದಿಂದ ದೇವಾಲಯ ಮತ್ತು ಎಲ್ಲಾ ಧಾರ್ಮಿಕ ಸ್ಥಳಗಳು ತೆರವಾಗುತ್ತಿದೆ. ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಕೆಲವೊಂದು ನಿಯಮಗಳನ್ನು ಜಾರಿ ಮಾಡಿದ್ದು, ಭಕ್ತರು ಮತ್ತು ಧಾರ್ಮಿಕ ಸ್ಥಳಗಳ ನಿರ್ವಹಣಾ ಮಂಡಳಿ ಇವುಗಳನ್ನು ಪಾಲಿಸಬೇಕಾಗಿದೆ.

ನಿಯಮಗಳೇನು?

* ಯಾವುದೇ ರೋಗ ಲಕ್ಷಣಗಳು ಇಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ

* ಕೈಗಳ ಸ್ವಚ್ಚತೆ ಮತ್ತು ಥರ್ಮಲ್‍ ಸ್ಕ್ರೀನಿಂಗ್‍ ಕಡ್ಡಾಯ

* ಮುಖಗವಸು ಧರಿಸುವುದು ಕಡ್ಡಾಯ

Government Guildelines

* ಕನಿಷ್ಠ ಆರು ಅಡಿಗಳ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

* ತೀರ್ಥ ಕೊಡುವುದು, ತೀರ್ಥ ಪ್ರೋಕ್ಷಣೆ ಮಾಡುವಂತಿಲ್ಲ

* ದೇವಾಲಯಗಳಲ್ಲಿ ದೇವತಾ ಮೂರ್ತಿಗಳು, ಫೋಟೋಗಳನ್ನು ಮುಟ್ಟಿ ನಮಸ್ಕರಿಸುವುದು ನಿಷಿದ್ದ

* ಶೂ, ಚಪ್ಪಲಿಯನ್ನು ಎಲ್ಲೆಂದರಲ್ಲಿ ಬಿಡುವಂತಿಲ್ಲ. ಭಕ್ತರು ತಮ್ಮ ವಾಹನಗಳಲ್ಲೇ ಬಿಡಬೇಕು, ಇಲ್ಲವೇ ದೇವಾಲಯದವರು ನಿಗಧಿ ಪಡಿಸಿದ ಸ್ಥಳಗಳಲ್ಲಿ, ಶೆಲ್ಪ್ ವ್ಯವಸ್ಥೆಯಲ್ಲಿ ಇಡಬೇಕು

* ಧಾರ್ಮಿಕ ಸ್ಥಳಗಳ ಪ್ರವೇಶ ಮತ್ತು ನಿರ್ಗಮನ ಪ್ರತ್ಯೇಕವಾಗಿರಬೇಕು

* ಕಂಡೀಷನ್‍ ವ್ಯವಸ್ಥೆ ಇದ್ದರೆ ಅದರ ನಿಯಮಗಳ ಪಾಲನೆ ಕಡ್ಡಾಯ

* ಗುಂಪು ಸೇರುವುದು, ದೊಡ್ಡ ಮಟ್ಟದಲ್ಲಿ ಜನ ಸೇರುವುದು ನಿಷಿದ್ದ

* ಭಜನಾ ಗುಂಪುಗಳಿಗೆ ನಿಷಿದ್ದ

* ಪ್ರಾರ್ಥನಾ ಸ್ಥಳಗಳಿಗೆ ಭಕ್ತರು ತಾವೇ ಸ್ವತಃ ಚಾಪೆ, ಮ್ಯಾಟ್‍ ಕೊಂಡೊಯ್ಯಬೇಕು.