ನೀರು ನಮ್ಮ ದೇಹಕ್ಕೆ ಅತ್ಯಗತ್ಯವಾದ ಪಾನಿಯ. ದೇಹದ ಅಂಗಾಗಳು ಸರಳವಾಗಿ ಕಾರ್ಯನಿರ್ವಹಿಸಲು ನೀರು ಅಗತ್ಯವಿದೆ. ಜಠರದ ಚಟುವಟಿಕೆ, ಪಚನ ಕ್ರಿಯೆ, ದೇಹದ ಉಷ್ಞಾಂಷ ಕಾಪಾಡುವುದು, ಕೀಲುಗಳನ್ನು ನಯಗೊಳಿಸುವುದು, ಜೀವಕೋಶಗಳ ಚುಟವಟಿಕೆ ಹೀಗೆ ದೇಹದ ಅನೇಕ ಕ್ರಿಯೆಗಳಿಗೆ ನೀರು ಅತ್ಯಗತ್ಯವಾಗಿದೆ. ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ನೀರು ಸಿಗದಿದ್ದರೆ ನಿರ್ಜಲೀಕರಣಕ್ಕೆ ಕಾರಣವಾಗಿ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಸಾವನ್ನು ಆಹ್ವಾನಿಸಬಹುದು. ಹೀಗಾಗಿ ನೀರು ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿದೆ.

ಆದರೆ ಆಯುರ್ವೇದ ಶಾಸ್ತ್ರ ನೀರನ್ನು ಕುಡಿಯುವ ವಿಚಾರದಲ್ಲಿ ತನ್ನದೇ ಆದ ಸಿದ್ದಾಂತಗಳನ್ನು ಹೊಂದಿದೆ, ಈ ವಿಚಾರದಲ್ಲಿ ಅನೇಕ ಸಲಹೆಗಳನ್ನು ನೀಡುತ್ತದೆ.
ನಿಂತಿರುವಾಗ ನೀರು ಕುಡಿಯಬೇಡಿ!
ಆಯುರ್ವೇದದ ಪ್ರಕಾರ ಮಾನವರು ನಿಂತಿರುವ ಭಂಗಿಯಲ್ಲಿ ನೀರು ಕುಡಿಯುವುದು ಒಳ‍್ಳೆಯದಲ್ಲ! ಕಾರಣ ನಿಂತಿರುವಾಗ ಕುಡಿದರೆ, ನೀರು ವೇಗವಾಗಿ ಹೊಟ್ಟೆಯನ್ನು ಸೇರುತ್ತದೆ. ಆಗ ಹೊಟ್ಟೆಯಲ್ಲಿರುವ ದ್ರವಗಳ ಅಸಮತೋಲನ ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ. ಅಲ್ಲದೆ ವಿಷಕಾರಿ ಅಂಶಗಳ ಶೇಖರಣೆಗೆ ಕಾರಣವಾಗಿ ಹೊಟ್ಟೆಯಲ್ಲಿ ನೋವಿಗೂ ಕಾರಣವಾಗುತ್ತದೆ ಎನ್ನುತ್ತದೆ ಆಯುರ್ವೇದ ಶಾಸ್ತ್ರ.
ಕುಳಿತು ನೀರು ಕುಡಿಯಿರಿ
ಕುಳಿತಿರುವ ಭಂಗಿಯಲ್ಲಿ ನೀರು ಕುಡಿಯುವುದು ಒಳಿತು ಎಂದು ಆಯುರ್ವೇದ ಹೇಳುತ್ತದೆ. ಕುಳಿತು ನೀರು ಕುಡಿದರೆ ಪಚನಕ್ರಿಯೆಯೂ ಉತ್ತಮವಾಗಿರುತ್ತದೆ, ನಮ್ಮ ಮಾಂಸಖಂಡಗಳಿಗೂ ನೀರಿನಂಶದ ಉಪಯೋಗ ದೊರೆಯುತ್ತದೆ ಮತ್ತು ಕಿಡ್ನಿಗಳ ಮೇಲು ಹೆಚ್ಚು ಹೊರೆಯಾಗುವುದಿಲ್ಲ.
ಗಟಗಟನೆ ಕುಡಿಯಬೇಡಿ
ನೀರನ್ನು ಗಟಗಟನೆ ಕುಡಿಯುವುದು ತಪ್ಪು ಎಂದು ಬಹುತೇಕ ಎಲ್ಲ ವೈದ್ಯಕೀಯ ಶಾಸ್ತ್ರಗಳು ಎಚ್ಚರಿಸುತ್ತವೆ. ಕಾರಣ ಒಂದೇ ಸಮನೆ ನೀರು ಕುಡಿದರೆ ಆಕಸ್ಮಿಕವಾಗಿ ನೀರು ನಮ್ಮ ಉಸಿರಾಟದ ಕೊಳವೆ ಹೊಕ್ಕರೆ ಸಮಸ್ಯೆಯಾಗುತ್ತದೆ. ಹೀಗಾಗಿ ಸಣ್ಣ, ಸಣ್ಣ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ತೀರಾ ತಣ್ಣಗಿನ ನೀರು ಬೇಡವೇ ಬೇಡ!
ಬೇಸಿಲಿನ ಬೇಗೆಗೆ ತಣ್ಣಗಿನ ನೀರು (ಐಸ್ ವಾಟರ್) ಕುಡಿಯುವುದು ಬೇಡ ಎಂಬ ಸಲಹೆಗಳಿವೆ. ತೀರಾ ತಣ್ಣಗಿನ ನೀರು ಕುಡಿದರೆ ದೇಹದ ರಕ್ತಚಲನೆಗೆ ತೊಂದರೆಯುಂಟಾಗುತ್ತದೆ, ಪಚನಕ್ರಿಯೆ ನಿಧಾನವಾಗುತ್ತದೆ. ಮಲಬದ್ದತೆಗೆ ಕಾರಣವಾಗುತ್ತದೆ. ಹೀಗಾಗಿ ತೀರಾ ತಣ್ಣಗಿನ ನೀರು ಬೇಡವೇ ಬೇಡ. ಬಾಯಾರಿದಾಗ, ದಣಿವಾದಾಗ ಮಾತ್ರ ನೀರು ಕುಡಿಯುವುದು ಒಳಿತು. ತಾಮ್ರ ಅಥವಾ ಬೆಳ್ಳಿಯ ಪಾತ್ರೆಗಳಲ್ಲಿ ಶೇಖರಿಸಿಟ್ಟ ನೀರು ದೇಹಾರೋಗ್ಯಕ್ಕೆ ಉತ್ತಮ.
