ಮೂತ್ರ ಪರೀಕ್ಷೆ ಏನು ಹೇಳುತ್ತೆ?

ಅನಾರೋಗ್ಯದ ಸಂದರ್ಭದಲ್ಲಿ ನಾವೆಲ್ಲ ವೈದ್ಯರ ಬಳಿ ಹೋಗುತ್ತೇವೆ. ರೋಗ ಪತ್ತೆ ಹಚ್ಚಲು ವೈದ್ಯರು ವಿವಿಧ ಬಗೆಯ ಪರೀಕ್ಷೆ ಮಾಡಿಸಿ ಎಂದು ಸಲಹೆ ನೀಡುವುದುಂಟು. ರಕ್ತಪರೀಕ್ಷೆ, ಮೂತ್ರ ಪರೀಕ್ಷೆ, ಎಕ್ಸರೇ, ಸ್ಕ್ಯಾನಿಂಗ್ ಹೀಗೆ ನಮ್ಮ ದೇಹದ ಅನಾರೋಗ್ಯ ಸ್ಥಿತಿಗೆ ತಕ್ಕಂತೆ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಈ ಪರೀಕ್ಷೆಗಳಿಂದ ಬರುವ ಫಲಿತಾಂಶಗಳಿಂದ ವೈದ್ಯರಿಗೆ ಸುಲಭವಾಗಿ ನಮ್ಮ ದೇಹದೊಳಗಿನ ಸಮಸ್ಯೆಯ ಪರಿಚಯವಾಗುತ್ತದೆ. ಮೂತ್ರ ಪರೀಕ್ಷೆಯ ಪ್ರಮುಖ ಅಂಶಗಳ ಬಗ್ಗೆ ಇಲ್ಲಿ ಒಂದಿಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.

ಮೂತ್ರ ಪರೀಕ್ಷೆ (Urine Analysis) ಏಕೆ?

ಮೂತ್ರ ಪರೀಕ್ಷೆ ವಿಶೇಷವಾಗಿ ಮೂತ್ರ ಪಿಂಡಗಳು (Kidney’s), ಯಕೃತ್ತು (Liver) ಅಂಗಗಳ ಆರೋಗ್ಯ ಸ್ಥಿತಿ ಮತ್ತು ಮಧುಮೇಹದ (diabetes) ಬಗ್ಗೆ ಮಾಹಿತಿ ನೀಡುತ್ತದೆ. ಪ್ರಯೋಗ ಶಾಲಾ ಪರೀಕ್ಷೆಗಳು ವೈದ್ಯರಿಗೆ ಉಪಯುಕ್ತ ಮಾಹಿತಿ ನೀಡುತ್ತವೆ, ಚಿಕಿತ್ಸೆಗೆ ಇವು ಪೂರಕ.

Urinary Tract

ಶರೀರದಲ್ಲಿ ಸಹಜವಾಗಿ ಅನೇಕ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಈ ಪ್ರಕ್ರಿಯೆ ವೇಳೆ  ದೇಹದ ಅಂಗಾಂಗಳು ಅನೇಕ ವಿಷಕಾರಿ ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸುತ್ತವೆ. ಈ ತ್ಯಾಜ್ಯ ವಸ್ತು ರಕ್ತವನ್ನು ಸೇರುತ್ತದೆ. ಈ ತ್ಯಾಜ್ಯವಸ್ತು ದೇಹದ ಹೊರ ಹೋಗದ ಹೊರತು ದೇಹಕ್ಕೆ ಅಪಾಯ ತಪ್ಪಿದ್ದಲ್ಲ. ಮೂತ್ರ ಪಿಂಡಗಳು (Kidney’s) ದೇಹದ ಶುದ್ದೀಕರಣ ಘಟಕವಿದ್ದಂತೆ (filter treatment plant) . ಯಕೃತ್ತು (Liver) ದೇಹದ ಪ್ರಯೋಗ ಶಾಲೆ! ರಕ್ತದಲ್ಲಿ ದೇಹಕ್ಕೆ ಬೇಡದ ವಸ್ತು ಅಂದರೆ ವಿಷಕಾರಿ ತ್ಯಾಜ್ಯವನ್ನು ಪತ್ತೆ ಹಚ್ಚಿ ಅದು ಉತ್ಪಾದಿಸುವ ಬೈಲ್ ಜ್ಯೂಸ್ ಮೂಲಕ ದೇಹದ ಹೊರಗೆ ಕಳುಹಿಸಲು ಶ್ರಮಿಸುತ್ತದೆ.

ಮೂತ್ರ ಪಿಂಡಗಳ ಮೂಲಕ ರಕ್ತ ಹಾದು ಹೋಗುವಾಗ, ರಕ್ತದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಶೋಧಿಸಿ, ಪ್ರತ್ಯೇಕಿಸುತ್ತದೆ. ನಂತರ ಮೂತ್ರದ ಮೂಲಕ ತ್ಯಾಜ್ಯವಸ್ತುಗಳು ದೇಹದಿಂದ ಹೊರ ಹೋಗುತ್ತದೆ. ಹಾಗಾಗಿ ವೈದ್ಯರು ಮೂತ್ರ ಪರೀಕ್ಷೆಗಳ ಮೂಲಕ ದೇಹದ ಸ್ಥಿತಿಯನ್ನು ಅರಿಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಮೂತ್ರಪಿಂಡಗಳು ಮತ್ತು ಯಕೃತ್ತಿನ ಆರೋಗ್ಯ ತಿಳಿಯಲು ಸಹಕಾರಿಯಾಗಿದೆ. ಮಹಿಳೆಯರಲ್ಲಿ ಮೂತ್ರ ಪರೀಕ್ಷೆಯ ಮೂಲಕ ಆ ಮಹಿಳೆ ಗಭ೵ ಧರಿಸಿರುವ ಬಗ್ಗೆಯೂ ಮಾಹಿತಿ ನೀಡುತ್ತದೆ.

ಮೂತ್ರ ಪರೀಕ್ಷೆಯಲ್ಲಿ 3 ವಿಧ

ಮೂತ್ರ ಪರೀಕ್ಷೆಯಲ್ಲಿ ಮೂರು ವಿಧ. 1) ಭೌತಿಕ ವಿಶ್ಲೇಷಣೆ (physical analysis) 2) ರಾಸಾಯನಿಕ ವಿಶ್ಲೇಷಣೆ (chemical analysis) 3) ಸೂಕ್ಷ್ಮದಶ೵ಕದಡಿಯಲ್ಲಿ (microscopic analysis) ಅಧ್ಯಯನ ಮತ್ತು ವಿಶ್ಲೇಷಣೆ.

ಯಾವ ಅಂಶ ಏನು ಸ್ಥಿತಿ ತಿಳಿಸುತ್ತೆ?

ಪಿ.ಎಚ್: ಇದುಒಂದು ದ್ರವದ ಆಮ್ಲೀಯತೆ ಅಳತೆ ಮಾಡಲು ಉಪಯೋಗಿಸುವ ಮಾಪಕ. ಇದನ್ನು ಹೆಚ್ಚಾಗಿ ರಸಾಯನಶಾಸ್ತ್ರದಲ್ಲಿ ಬಳಸಲಾಗುತ್ತದೆ. ಮೂತ್ರವು ಆಮ್ಲೀಯವಾಗಿರಬೇಕು. ಅಂದರೆ ಪಿಎಚ್ ಅಳತೆ 7ಕ್ಕಿಂತ ಕಡಿಮೆ ಇರಬೇಕು. ಆಮ್ಲೀಯವಾಗಿ ಇರದಿದ್ದಲ್ಲಿ ಅದು ಮೂತ್ರ ಪಿಂಡಗಳಲ್ಲಿ ಕಲ್ಲುಗಳು ಬೆಳೆಯುತ್ತಿರುವುದನ್ನು ಸೂಚಿಸುತ್ತದೆ. ಮೂತ್ರ ವಿಸಜ೵ನ ವ್ಯವಸ್ಥೆಯಲ್ಲಿ ಸೋಂಕು ಇರುವುದನ್ನು ಸೂಚಿಸುತ್ತದೆ.

ಪ್ರೋಟಿನ್: ಪ್ರೋಟಿನ್ (ಆಲ್ಬುಮಿನ್) ದೇಹಕ್ಕೆ ಅಗತ್ಯವಿರುವ ವಸ್ತು. ಆದರೆ ಇದು ಮೂತ್ರದಲ್ಲಿ ಪತ್ತೆಯಾಗಬಾರದು. ಹಾಗೊಮ್ಮೆ ಮೂತ್ರದಲ್ಲಿ ಪ್ರೋಟಿನ್ ಗಳು ಪತ್ತೆಯಾದಲ್ಲಿ ಅದು ಮೂತ್ರ ಪಿಂಡಗಳ ಕಾಯ೵ಕ್ಷಮತೆಯ ಕುಗ್ಗುವಿಕೆಯನ್ನು ಸೂಚಿಸುತ್ತದೆ.

ಬಿಳಿಯ ರಕ್ತ ಕಣಗಳು (WBC): ಮೂತ್ರ ಪರೀಕ್ಷೆಯಲ್ಲಿ ಬಿಳಿಯ ರಕ್ತ ಕಣಗಳು ಪತ್ತೆಯಾದಲ್ಲಿ ದೇಹದಲ್ಲಿ ಸೋಂಕು ಇದೆ ಎಂಬುದನ್ನು ಸೂಚಿಸುತ್ತದೆ. ಇಲ್ಲವೆ ಮೂತ್ರ ವಿಸರ್ಜಿಸುವಾಗ ಉರಿಯುವಿಕೆಯನ್ನು ತಿಳಿಸುತ್ತದೆ.

ಗ್ಲೂಕೋಸ್: ದೇಹಕ್ಕೆ ಶಕ್ತಿ ನೀಡುವ ಪದಾರ್ಥ ಗ್ಲೂಕೋಸ್, ರಕ್ತದಲ್ಲಿನ ಗ್ಲೂಕೋಸ್ ಅನ್ನು ಮೂತ್ರಪಿಂಡಗಳು ಮತ್ತೆ ರಕ್ತಕ್ಕೆ ಹಿಂದಿರುಗಿಸಬೇಕು. ಮೂತ್ರದ ಮೂಲಕ ಗ್ಲೂಕೋಸ್ ಸೋರಿಕೆಯಾದರೆ ದೇಹ ಮಧುಮೇಹ (diabetes) ಪೀಡಿತ  ಎಂಬುದರ ಸೂಚಕ.

ನೈಟ್ರೇಟ್ಸ್: ಮೂತ್ರದಲ್ಲಿ ನೈಟ್ರೇಟ್ಸ್ ಕಂಡು ಬಂದರೆ ಮೂತ್ರ ವಿಸಜ೵ನಾ ವ್ಯವಸ್ಥೆಯಲ್ಲಿ ಸೋಂಕು ಇರುವಿಕೆಯನ್ನು ಸೂಚಿಸುತ್ತದೆ.

ಬಿಲಿರುಬಿನ್: ಮೂತ್ರದಲ್ಲಿ ಬಿಲುರುಬಿನ್ ಪತ್ತೆಯಾದರೆ ಅದು ಯಕೃತ್ತಿನ ಕಾಯ೵ಕ್ಷಮತೆಯ ಕುಗ್ಗುವಿಕೆಯ ಎಚ್ಚರಿಕೆಯ ಗಂಟೆ

ರಕ್ತ: ಮೂತ್ರದಲ್ಲಿ ರಕ್ತ ಪತ್ತೆಯಾದರೆ ದೇಹದ ಗಂಭೀರ ಸ್ಥಿತಿಯಲ್ಲಿದೆ ಎಂಬುದರ ಸೂಚಕ. ಕ್ಯಾನ್ಸರ್, ಮೂತ್ರ ಪಿಂಡಗಳು ಅಥವಾ ಬ್ಲಾಡರ್ (ಮೂತ್ರ ಸಂಗ್ರಹಿಸುವ ಚೀಲ) ಅಥವಾ ಮೂತ್ರ ವಿಸಜ೵ನಾ ವ್ಯವಸ್ಥೆಯಲ್ಲಿ ಸೋಂಕು ಪೀಡಿತವಾಗಿರುವುದನ್ನು ಸೂಚಿಸುತ್ತದೆ.

ಕೀಟೋನ್: ದೇಹಕ್ಕೆ ಶಕ್ತಿ ನೀಡುವುದು ರಕ್ತದಲ್ಲಿನ ಕಾಬೋ೵ಹೈಡ್ರೇಟ್ಸ್. ಕಾಬೋ೵ಹೈಡ್ರೇಟ್ಸ್ ನಲ್ಲಿ ಸಕ್ಕರೆ, ಕೊಬ್ಬು ಮುಂತಾದ ಪದಾಥ೵ಗಳಿರುತ್ತವೆ. ನಮ್ಮ ದೇಹದಲ್ಲಿರುವ ಪ್ಯಾನ್ಕ್ರಿಯಾಸ್ ಇನ್ಸುಲಿನ್ ಉತ್ಪಾದಿಸುತ್ತದೆ. ಇದು ಕಾಬೋ೵ಹೈಡ್ರೇಟ್ಸ್ ಅನ್ನು ಶಕ್ತಿಯನ್ನಾಗಿ ಪರಿವತಿ೵ಸುತ್ತದೆ. ಇನ್ಸುಲಿನ್ ಕೊರತೆಯಾದಾಗ, ಕಾಬೋ೵ಹೈಡ್ರೇಟ್ಸ್ ಗಳನ್ನು ನಮ್ಮ ಯಕೃತ್ತು ಕೀಟೋನ್ ಗಳನ್ನಾಗಿ ಪರಿವತಿ೵ಸುತ್ತದೆ. ಹೀಗಾಗಿ ಮೂತ್ರದಲ್ಲಿ ಕೀಟೋನ್ ಗಳು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಪತ್ತೆಯಾದರೆ ಮಧುಮೇಹ ನಿಯಂತ್ರಣ ತಪ್ಪುತ್ತಿದೆ ಎಂಬುದರ ಸೂಚಕ.

ಆತ್ಮೀಯರೆ,

ಈ ಲೇಖನದ ಉದ್ದೇಶ ವೈದ್ಯಕೀಯ ಪರೀಕ್ಷೆಗಳ ಬಗ್ಗೆ ಒಂದಿಷ್ಟು ಅರಿವು ಮೂಡಿಸುವುದಾಗಿದೆ. ನಾನು ವೈದ್ಯನಲ್ಲ. ಮೂತ್ರ ಪರೀಕ್ಷೆ ನಮ್ಮ ದೇಹದ ಸ್ಥಿತಿ ತಿಳಿಸುತ್ತವೆ ಎಂಬ ಭ್ರಮೆ ಬೇಡ. ಇನ್ನು ಅನೇಕ ಪರೀಕ್ಷೆಗಳ ನಂತರವಷ್ಟೇ ದೇಹದಲ್ಲಿ ಇಂತಹದ್ದೇ ಸಮಸ್ಯೆ ಇದೆ ಎಂಬುದನ್ನು ತಿಳಿಯಲು ಸಾಧ್ಯ. ನಿಮ್ಮ ಕುಟುಂಬ ವೈದ್ಯರ ಬಳಿ ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ. ಆರೋಗ್ಯ ಕಾಪಾಡಿ ಕೊಳ್ಳಿ.