ಯುಎಇಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಪ್ರತ್ಯೇಕವಾಗಿ ಫಾಲ್ಕನ್ ಫಾರೆಕ್ಸ್ ಕಾರ್ಡ್ ಅನ್ನು ಅನಾವರಣಗೊಳಿಸಿದ ಕೋಟಕ್

• ಕೋಟಕ್ ಫಾಲ್ಕನ್ ಕಾರ್ಡ್ ಬಳಸುವ ಪ್ರಯಾಣಿಕರು 100ಕ್ಕೂ ಹೆಚ್ಚು ಪ್ರವಾಸಿ ಸ್ಥಳಗಳು, ಅಡ್ವೆಂಚರ್ ಸ್ಪೋರ್ಟ್ಸ್, ಶಾಪಿಂಗ್, ಊಟ ಮತ್ತು ವಿಶಿಷ್ಟ ಸೌಲಭ್ಯಗಳ ಪ್ರಯೋಜನಗಳನ್ನು ಪಡೆಯುತ್ತಾರೆ
• ಮೊದಲ ಬಾರಿಯ ಪ್ರಯಾಣಿಕರು ಸೇರಿದಂತೆ ಯುಎಇಗೆ ಪ್ರಯಾಣಿಸುವ ಮಹತ್ವಾಕಾಂಕ್ಷಿ ಭಾರತೀಯರಿಗೆ ಕಾರ್ಡ್ ರೂ.20,000 ವರೆಗೆ ಉಳಿತಾಯ ಮಾಡುವ ಸೌಕರ್ಯ ಒದಗಿಸುತ್ತದೆ.

ಬೆಂಗಳೂರು, 20/9/24: ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ (“ಕೆಎಂಬಿಎಲ್/ ಕೋಟಕ್”) ಕಂಪನಿಯು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಭಾರತೀಯರಿಗೆ ಸಿಂಗಲ್ ಕರೆನ್ಸಿ ಪ್ರಿಪೇಯ್ಡ್ ಫಾರೆಕ್ಸ್ ಕಾರ್ಡ್ ಆಗಿರುವ ಕೋಟಕ್ ಫಾಲ್ಕನ್ ಕಾರ್ಡ್ ಅನ್ನು ಅನಾವರಣಗೊಳಿಸಿದೆ. .

ಯುಎಇಯಲ್ಲಿ ಪಾವತಿ ಮಾಡುವ ಸಲುವಾಗಿ ಕೋಟಕ್ ಫಾಲ್ಕನ್ ಕಾರ್ಡ್ ಬಳಸುವ ಪ್ರಯಾಣಿಕರು 100ಕ್ಕೂ ಹೆಚ್ಚು ಪ್ರವಾಸಿ ಸ್ಥಳಗಳು, ಅಡ್ವೆಂಚರ್ ಸ್ಪೋರ್ಟ್ಸ್, ಶಾಪಿಂಗ್, ಊಟ ಮತ್ತು ವಿಶಿಷ್ಟ ಸೌಲಭ್ಯಗಳ ಮೇಲೆ ಪ್ರಯೋಜನ ಪಡೆಯುತ್ತಾರೆ. ತ್ವರಿತ ರಿಯಾಯಿತಿಗಳನ್ನು ಗಳಿಸುತ್ತಾರೆ.

ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ ನಲ್ಲಿ ಕೋಟಕ್ ಫಾಲ್ಕನ್ ಕಾರ್ಡ್ ಅನ್ನು ಕೋಟಕ್ ಮಹೀಂದ್ರಾ ಬ್ಯಾಂಕ್ ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಮತ್ತು ಬಿಸಿನೆಸ್ ಬ್ಯಾಕಿಂಗ್, ಎನ್ ಆರ್ ಐ, ಹೆಡ್ ಅಫ್ಲುಯೆಂಟ್- ಪ್ರೆಸಿಡೆಂಟ್ ರೋಹಿತ್ ಭಾಸಿನ್ ಅವರು ಮತ್ತು ಮರ್ಕ್ಯುರಿ ಪೇಮೆಂಟ್ ಸರ್ವೀಸ್ ನ ಸಿಇಓ ಮುಜಾಫರ್ ಹಮೀದ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಎನ್ ಪಿ ಸಿ ಐ ಅಧಿಕಾರಿಗಳು ಪಸ್ಥಿತರಿದ್ದರು.

ಯುಎಇ ಆಧುನಿಕತೆ ಮತ್ತು ಐಷಾರಾಮಿ ಸೌಲಭ್ಯಗಳ ಮಿಶ್ರಣವಾಗಿರುವ ಪ್ರದೇಶವಾಗಿದ್ದು, ಇದು ಸಮಗ್ರ ಹಣಕಾಸು ಮತ್ತು ಡಿಜಿಟಲ್ ಪಾವತಿ
ವ್ಯವಸ್ಥೆ ವಿಭಾಗದಲ್ಲಿನ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ.

ಈ ಕುರಿತು ಮಾತನಾಡುವ ರೋಹಿತ್ ಭಾಸಿನ್ ಅವರು , “ವಿದೇಶ ಪ್ರಯಾಣದ ಆಕಾಂಕ್ಷೆಯುಳ್ಳ ಭಾರತೀಯರ ಆದ್ಯತೆಯ ಬ್ಯಾಂಕ್ ಆಗಲು ನಾವು ಗಮನ ಹರಿಸಿದ್ದೇವೆ. ಇದರ ಪರಿಣಾಮವಾಗಿ ಯುಎಇಗೆ ಪ್ರವಾಸ ಮಾಡುವ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ವಿಶೇಷ ಪ್ರಯೋಜನಗಳನ್ನು ಒದಗಿಸುವ ಕೋಟಕ್‌ ಫಾಲ್ಕನ್ ಕಾರ್ಡ್ ಅನ್ನು ಬಿಡುಗಡೆಗೊಳಿಸಲು ನಾವು ಸಂತೋಷಪಡುತ್ತೇವೆ. ಆಕರ್ಷಕ ಚಟುವಟಿಕೆಗಳಲ್ಲಿ ತ್ವರಿತ ರಿಯಾಯಿತಿಯನ್ನೂ ಈ ಕಾರ್ಡ್ ಮೂಲಕ ಪಡೆಯಬಹುದಾಗಿದೆ” ಎಂದು ಹೇಳಿದರು.

ಮುಜಾಫರ್ ಹಮೀದ್ ಮಾತನಾಡಿ, “ಕೋಟಕ್ ಫಾಲ್ಕನ್ ಕಾರ್ಡ್ ಅನ್ನು ಒದಗಿಸುವ ಮೂಲಕ ಮರ್ಕ್ಯುರಿಯು ಪೇಮೆಂಟ್ ವಿಭಾಗದಲ್ಲಿ ಮಹತ್ತರ ಮೈಲಿಗಲ್ಲು ಸಾಧಿಸಿದೆ. ಯುಎಇಯಲ್ಲಿ ರುಪೇ ಉಪಸ್ಥಿತಿಯನ್ನು ವಿಸ್ತರಿಸಲು ನಾವು ಎನ್‌ಪಿಸಿಐ ಇಂಟರ್‌ನ್ಯಾಷನಲ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ ಜೊತೆಗೆ ಪಾಲುದಾರಿಕೆ ಹೊಂದಿದ್ದೇವೆ ಎಂದು ಹೇಳಿದರು.

ಕೋಟಕ್ ಫಾಲ್ಕನ್ ಕಾರ್ಡ್ ಮುಂದಿನ ಎರಡು ತಿಂಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಕ್ರಮ ಸಂಖ್ಯೆ. ವ್ಯಾಪಾರ ಸಂಸ್ಥೆ ವಿಭಾಗ ಆಫರ್
1 ಸ್ಕೀ ದುಬೈ ಮನರಂಜನೆ ಮತ್ತು ವಿಶೇಷ ಅನುಭವ 30% ರಿಯಾಯಿತಿಯನ್ನು ಆನಂದಿಸಿ
2 ದುಬೈ ಫ್ರೇಮ್ ಮನರಂಜನೆ ಮತ್ತು ವಿಶೇಷ ಅನುಭವ 10% ರಿಯಾಯಿತಿಯನ್ನು ಆನಂದಿಸಿ
3 ಹಾಟ್ ಏರ್ ಬಲೂನ್ ರೈಡ್ ಮನರಂಜನೆ ಮತ್ತು ವಿಶೇಷ ಅನುಭವ ಹಾಟ್ ಏರ್ ಬಲೂನ್ ರೈಡ್‌ನಲ್ಲಿ 40% ರಿಯಾಯಿತಿಯನ್ನು ಆನಂದಿಸಿ
4 ಬುರ್ಜ್ ಖಲೀಫಾ ಟಾಪ್ ಮನರಂಜನೆ ಮತ್ತು ವಿಶೇಷ ಅನುಭವ 15% ರಿಯಾಯಿತಿಯನ್ನು ಆನಂದಿಸಿ
5 ಯಾಸ್ ವಾಟರ್ ವರ್ಲ್ಡ್ ಮನರಂಜನೆ ಮತ್ತು ವಿಶೇಷ ಅನುಭವ 30% ರಿಯಾಯಿತಿಯನ್ನು ಆನಂದಿಸಿ
6 ಫೆರಾರಿ ವರ್ಲ್ಡ್ ಥೀಮ್ ಪಾರ್ಕ್ ಮನರಂಜನೆ ಮತ್ತು ವಿಶೇಷ ಅನುಭವ 25% ರಿಯಾಯಿತಿಯನ್ನು ಆನಂದಿಸಿ
7 ದುಬೈ ಗಾರ್ಡನ್ ಗ್ಲೋ ಮನರಂಜನೆ ಮತ್ತು ವಿಶೇಷ ಅನುಭವ 25% ರಿಯಾಯಿತಿಯನ್ನು ಆನಂದಿಸಿ
8 ದುಬೈ ಅಕ್ವೇರಿಯಂ ಮತ್ತು ನೀರೊಳಗಿನ ಮೃಗಾಲಯ ಮನರಂಜನೆ ಮತ್ತು ವಿಶೇಷ ಅನುಭವ 20% ರಿಯಾಯಿತಿಯನ್ನು ಆನಂದಿಸಿ
9 ಮ್ಯೂಸಿಯಂ ಆಫ್ ದಿ ಫ್ಯೂಚರ್ ಮನರಂಜನೆ ಮತ್ತು ವಿಶೇಷ ಅನುಭವ 10% ರಿಯಾಯಿತಿಯನ್ನು ಆನಂದಿಸಿ
10 ವಿಂದಮ್ ಜೆಬಿಆರ್ ಅವರಿಂದ ರಮಾಡಾ ಹೋಟೆಲ್ ಮತ್ತು ಸೂಟ್ಸ್ ಭೋಜನ ಸೌಲಭ್ಯ ಲಂಚ್/ಡಿನ್ನರ್/ ಅಂತರರಾಷ್ಟ್ರೀಯ ಬಫೆಯಲ್ಲಿ ಬೈ ಒನ್ ಗೆಟ್ ಒನ್ ಆಫರ್
11 ಸ್ಪ್ಲಾಶ್ ಫ್ಯಾಶನ್ಸ್ ಫ್ಯಾಷನ್ ಎಇಡಿ 200ರ ಮೇಲೆ ಫ್ಲಾಟ್ 15%