ರಾಜ್ಯದಲ್ಲಿಇಂದು ಮತ್ತೆ 378 ಕೋವಿಡ್‍ 19 ಸೋಂಕಿತರು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಮತ್ತೆ 378 ಮಂದಿ ನೂತನ ಕೋವಿಡ್ 19 ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 333 ಅಂತರರಾಜ್ಯ ಪ್ರಯಾಣಿಕರು ಮತ್ತು 8 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರಿದ್ದಾರೆ.

ರಾಜ್ಯದಲ್ಲಿ ಇಂದಿಗೆ ಸೋಂಕಿತರ ಸಂಖ್ಯೆ 5213ಕ್ಕೆ ಏರಿದೆ. ಒಟ್ಟು ಸೋಂಕಿತರ ಪೈಕಿ 1968 ಮಂದಿ ಬಿಡುಗಡೆ ಹೊಂದಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 3184ರಷ್ಟಿದೆ. ಸೋಂಕಿಗೆ ಶನಿವಾರ ಇಬ್ಬರು ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 59.

ಇಂದು ಪತ್ತೆಯಾದ ಸೋಂಕಿತರು ಅತಿ ಹೆಚ್ಚು ಪತ್ತೆಯಾಗಿರುವುದು ಉಡುಪಿ ಜಿಲ್ಲೆಯಲ್ಲಿ. ಅಲ್ಲಿ 121 ಮಂದಿಗೆ ಸೋಂಕು ತಗುಲಿದೆ. ಯಾದಗಿರಿಯಲ್ಲಿ 103, ಕಲಬುರಗಿಯಲ್ಲಿ 69, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 24, ಬೆಂಗಳೂರು ನಗರದಲ್ಲಿ 18 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ.

ರಾಮನಗರ ಜಿಲ್ಲೆಯಲ್ಲಿ ಶನಿವಾರ ಹೊಸ ಪ್ರಕರಣಗಳು ವರದಿಯಾಗಿಲ್ಲ. ಒಟ್ಟು ನಾಲ್ವರು ಸೋಂಕಿತರ ಪೈಕಿ ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ಮೂವರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

…………..