ರಾಮನಗರ:27/4/2023: ನಗರದ ಎಂ.ಜಿ.ರಸ್ತೆಯಲ್ಲಿ ಭಕ್ತ ಸಂರಕ್ಷಣಾರ್ಥ ನೆಲೆಸಿರುವ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ 2023ನೇ ಸಾಲಿನ ವಾಸವಿ ಜಯಂತಿ ಸಂಭ್ರಮ ಗುರುವಾರ ಆರಂಭವಾಗಿದೆ.

ಮೊದಲ ದಿನ ಬೆಳಿಗ್ಗೆ ಸುಪ್ರಭಾತ ಸೇವೆ, ಗೋ ಪೂಜೆ ನಂತರ ಶ್ರೀ ಮಾತೆಯ ಉತ್ಸವ ಮೂರ್ತಿಗೆ 108 ಎಳೆನೀರು ಅಭಿಷೇಕ ನಡೆಯಿತು. ಭಕ್ತರೇ ಸ್ವಯಂ ಅಭಿಷೇಕ ನೆರೆವೇರಿಸುವ ವ್ಯವಸ್ಥೆ ಇತ್ತು. ವಾಸವಿ ವನಿತಾ ಸಂಘದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ದಿನ 108 ಲೀಟರ್ ಹಾಲಿನ ಅಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಏಪ್ರಿಲ್ 30ರ ಭಾನುವಾರ ವಾಸವಿ ಜಯಂತಿ ಆಚರಣೆ ಸಂಪನ್ನವಾಗಲಿದೆ.
