* ಸೋಂಕಿತರಲ್ಲಿ ಆತ್ಮ ಸ್ಥೈರ್ಯ ತುಂಬಿದ ಸಂಸದ

ರಾಮನಗರ: ನಗರದ ಕಂದಾಯ ಭವನದಲ್ಲಿ ಸ್ಥಾಪನೆಯಾಗಿರುವ ಕೋವಿಡ್ 19 ರೆಫರಲ್ ಆಸ್ಪತ್ರೆಗೆ ಸಂಸದ ಡಿ.ಕೆ.ಸುರೇಶ್ ಭೇಟಿ ಕೊಟ್ಟು ಸೋಂಕಿತರೊಂದಿಗೆ ಮಾತನಾಡಿ ಅವರೆಲ್ಲ ಬೇಗ ಗುಣಮುಖರಾಗುವಂತೆ ಶುಭ ಹಾರೈಸಿದರು.
ಸೋಮವಾರ ಸಂಜೆ ಡೀಸಿ ಕಚೇರಿಗೆ ಭೇಟಿ ನೀಡಿದ್ದ ಸಂಸದರು ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ನಂತರ ಪಿಪಿಇ ಕಿಟ್ ಧರಿಸಿದ ಸಂಸದ ಡಿ.ಕೆ.ಸುರೇಶ್, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮತ್ತು ಸಂಸದರ ಸಹಾಯಕರು ಕೋವಿಡ್ 19 ಆಸ್ಪತ್ರೆಯಲ್ಲಿ ಸೋಂಕಿತರ ವಾರ್ಡುಗಳಿಗೆ ಭೇಟಿ ಕೊಟ್ಟು ಅವರಲ್ಲಿ ಆತ್ಮ ಸ್ಥೈರ್ಯ ತುಂಬಿದ್ದಾರೆ.
ಔಷಧ, ವೈದ್ಯೋಪಚಾರ, ಉಪಹಾರ, ಊಟದ ಬಗ್ಗೆ ವಿಚಾರಿಸಿದ್ದಾರೆ. ಸೋಂಕಿತರು ವೈದ್ಯೋಪಚಾರದ ಬಗ್ಗೆ ಸಕರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಶೌಚಾಲಯಗಳ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ಗೊತ್ತಾಗಿದೆ.
