ರೈತರಿಗೆ ಸಸಿಗಳನ್ನು ವಿತರಿಸುವುದರ ಮೂಲಕ ವಿಶ್ವ ಪರಿಸರ ದಿನ ಆಚರಣೆ

ರಾಮನಗರ, 6ನೇ ಜೂನ್‍: ರೈತರಿಗೆ ತೆಂಗು, ಬದಾಮಿ, ಸಿಲ್ವರ್, ಬೇವಿನ ಸಸಿಗಳನ್ನು ವಿತರಿಸುವುದರ ಮೂಲಕ ಕುಮಾರಣ್ಣ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ವಿಶ್ವ ಪರಿಸರ ದಿನವನ್ನು ಆಚರಿಸಿದರು.

ನಗರದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ರೈತರಿಗೆ ಸಸಿಗಳನ್ನು ವಿತರಿಸಿದ ನಂತರ ಬಳಗದ ಪದಾಧಿಕಾರಿಗಳು ಐಜೂರಿನ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ತೆಂಗಿನ ಸಸಿ ನೆಟ್ಟು ನಾಗರೀಕರಿಗೆ ಪರಿಸರ ಸಂರಕ್ಷಣೆಯ ಸಂದೇಶ ರವಾನಿಸಿದರು.

ಈ ವೇಳೆ ಜೆ.ಡಿ.ಎಸ್ ಕಾನೂನು ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ರಾಜಶೇಖರ್ ಮಾತನಾಡಿ,  ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಸಸಿ ನೆಡುವ ಮೂಲಕ ಪರಿಸರ ಕಾಪಾಡುವ ಕೆಲಸ ಮಾಡಬೇಕೆಂದರು. 

ರೈತ ಸಂಘದ ಅಧ್ಯಕ್ಷರಾದ ತುಂಬೇನಹಹಳ್ಳಿ ಶಿವಕುಮಾರ್ ಮಾತನಾಡಿ, ರೈತರು ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ಜಮೀನಿನ ಬದುಗಳಲ್ಲಿ ಉತ್ತಮ ಆದಾಯ ಉಳ್ಳ ಸಸಿಗಳನ್ನು ಬೆಳಸಿ ಪರಿಸರವನ್ನು ಕಾಪಾಡುವ ಜೊತೆಗೆ ಲಾಭಗಳಿಸಬಹುದು ಎಂದರು. 

ಈ ಸಂದರ್ಭದಲ್ಲಿ ಜೆ.ಡಿ.ಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಜಯಕುಮಾರ್, ಆರ್.ಟಿ.ಐ ವೇದಿಕೆಯ ಅಸ್ಲಂ ಪಾಷ, ಪಿ.ಸುರೇಶ್, ರೈತ ಸಂಘದ ಶಿವಕುಮಾರ್, ನಾರಾಯಣಪ್ಪ, ಎಸ್.ಎನ್.ದೇವರಾಜು, ವಿಜೇಂದ್ರ, ಈರೇಗೌಡ, ಈಶ್ವರಯ್ಯ  ಮುಂತಾದವರಿದ್ದರು.