* ಬೆಂಗಳೂರಿನ ಐರನ್ ಮೌಂಟೇನ್ ಉದ್ಯಮದ ಸಿ.ಎಸ್.ಆರ್.ನಿಧಿ ಬಳಕೆ
ರಾಮನಗರ (19/10/2025): ಚರ್ಕವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ನಗರದ ಪ್ರಗತಿ ವಿದ್ಯಾ ಸಂಸ್ಥೆಯ ಗೋಡೆಗಳಿಗೆ ಬಣ್ಣ ಬಳಿದು ಶಾಲೆಯನ್ನು ಚೆಂದಗೊಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಸುಮಾರು ೩೦ ರಿಂದ ೪೦ ಮಂದಿಯ ತಂಡ ಅನುದಾನಿತ ಪ್ರಗತಿ ವಿದ್ಯಾಸಂಸ್ಥೆಯ ಗೋಡೆಗಳನ್ನು ಉಜ್ಜಿ, ಸ್ವಚ್ಚಗೊಳಿಸಿ ನಂತರ ಬಣ್ಣ ಬಳಿದರು. ಈ ವೇಳೆ ಮಾತನಾಡಿದ ಚರ್ಕವರ್ತಿ ಸೂಲಿಬೆಲೆ ಪ್ರಗತಿ ವಿದ್ಯಾ ಸಂಸ್ಥೆ, ಚನ್ನಪಟ್ಟಣದ ಪಟೇಲ್‌ದೊಡ್ಡಿಯ ಸರ್ಕಾರಿ ಶಾಲೆ ಸೇರಿದಂತೆ ರಾಜ್ಯದಲ್ಲಿರುವ ಸುಮಾರು 250ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿದು, ಶಾಲೆಯ ಆವರಣವನ್ನು ಸ್ವಚ್ಚಗೊಳಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆ ಪ್ರಗತಿ ಶಾಲೆಯ ಹಂಚಿನ ಛಾವಣಿಗೆ ಟಾರ್ ಶೀಟ್‌ಗಳನ್ನು ಹೊದಿಸಲಾಗಿತ್ತು. ತದನಂತರ ಮಳೆಗಾಳದಲ್ಲಿ ತರಗತಿಗಳಲ್ಲಿ ಮಳೆ ನೀರು ಜಿನುಗುವುದು ನಿಂತಿದೆ. ಪ್ರಗತಿ ಶಾಲೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರ ಶ್ರಮದಾನವಿದೆ ಆದರೆ ಬೆಂಗಳೂರಿನ ಐರನ್ ಮೌಂಟೆನ್ ಎಂಬ ಉದ್ಯಮ ಸಂಸ್ಥೆ ಬಣ್ಣ, ಡೆಸ್ಕ್ ಮುಂತಾದವುಗಳಿಗೆ ವೆಚ್ಚ ಮಾಡಿದೆ ಎಂದರು. ತಮ್ಮ ಸಂಘಟನೆಯದ್ದು ಸ್ವಯಂ ಸೇವಕರ ಆಧಾರಿತ ಸೇವೆ ಎಂದು ತಿಳಿಸಿದರು. ಶಾಲೆಯ ಗೋಡೆಗಳಿಗೆ ಬಳಿಯುತ್ತಿರುವ ಬಣ್ಣ ಸಗಣಿಯಿಂದ ತಯಾರಿಸಿದ್ದಾಗಿದೆ. ಬೀದರ್‌ನ ಕೈಗಾರಿಕೆಯಲ್ಲಿ ಈ ಬಣ್ಣ ಉತ್ಪಾದನೆಯಾಗಿದೆ ಎಂದು ಬಣ್ಣದ ವಿಶೇಷತೆ ಬಗ್ಗೆ ಮಾಹಿತಿ ಕೊಟ್ಟರು.
ಐರನ್ ಮೌಂಟೆನ್‌ನ ಸಿಎಸ್‌ಆರ್ ನಿಧಿ ಬಳಕೆ
ಐರನ್ ಮೌಂಟೇನ್ ಉದ್ಯಮದ ವ್ಯವಸ್ಥಾಪಕಿ ನಮಿತಾ ಮಾತನಾಡಿ ತಮ್ಮ ಸಂಬAಧಿಕರೊಬ್ಬರ ಮಗು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದೆ. ಶಾಲೆಯ ಸಮಾರಂಭವೊAದರಲ್ಲಿ ಪಾಲ್ಗೊಂಡಿದ್ದಾಗ, ಈ ಶಾಲೆಯ ಸ್ಥಿತಿ ಅರ್ಥವಾಯಿತು. ತಮ್ಮ ಉದ್ಯಮದ ಸಿ.ಎಸ್.ಆರ್ ನಿಧಿಯಿಂದ ಶಾಲೆಗೆ ಒಂದು ರೂಪ ಕೊಡಬೇಕು ಎಂದು ಅನಿಸಿತು. ಇದಕ್ಕೆ ಪೂರಕವಾಗಿ ಯುವ ಬ್ರಿಗೇಡ್‌ನ ಚರ್ಕವರ್ತಿ ಸೂಲಿಬೆಲೆಯವರು ಸಹ ಸ್ಪಂದಿಸಿದರು ಎಂದರು.
ಪ್ರಗತಿ ಶಾಲೆಯ ತರಗತಿಗಳಿಗೆ ಅಗತ್ಯವಾಗಿದ್ದ ಸೀಲಿಂಗ್ ಫ್ಯಾನ್‌ಗಳು, ಡೆಸ್ಕ್ಗಳು, ಗ್ರೀನ್ ಬೋರ್ಡುಗಳು, ವಾಟರ್ ಫಿಲ್ಟರ್, ಹಂಚಿನ ಮೇಲೆ ಟಾರ್ ಶೀಟ್‌ಗಳ ಹೊದಿಕೆ, ಅಲ್ಯೂಮೀನಿಯಂ ಕಿಟಕಿಗಳನ್ನು ಪೂರೈಸಲಾಗಿದೆ. ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್, ಸಾಕ್ಸ್, ಸಮವಸ್ತç, ಮಧ್ಯಾಹ್ನದ ಬಿಸಿ ಊಟಕ್ಕೆ ಅನುಕೂಲವಾಗುವಂತೆ ಸ್ಟೀಲ್ ತಟ್ಟೆ, ಲೋಟಗಳನ್ನು ನೀಡಲಾಗಿದೆ. ಇಂದು ಗೋಡೆಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಜೊತೆಗೆ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಡೆಸ್ಕ್ಗಳನ್ನು ಸಹ ಕೊಡುಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಧನ್ಯವಾದ ತಿಳಿಸಿದ ಆಡಳಿತ ಮಂಡಳಿ
ಪ್ರಗತಿ ಶಾಲೆಯ ಅಧ್ಯಕ್ಷ ಟಿ.ಅರ್.ರಾಮಚಂದ್ರ, ಕಾರ್ಯದರ್ಶಿ ಯಾದವೇಂದ್ರ, ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಮಾತನಾಡಿ ಚರ್ಕವರ್ತಿ ಸೂಲಿಬೆಲೆ, ಐರನ್ ಮೌಂಟೆನ್‌ನ ನಮಿತ ಮತ್ತು ಯುವ ಬ್ರಿಗೇಡ್ ಕಾರ್ಯಕರ್ತರ ಶ್ರಮಕ್ಕೆ ಆಭಾರಿಯಾಗಿರುವುದಾಗಿ ತಿಳಿಸಿದರು. ತಮ್ಮದು ಅನುದಾನ ರಹಿತ ಕನ್ನಡ ಶಾಲೆ, ದಾನಿಗಳ ನೆರವಿನಿಂದಲೇ ಅಭಿವೃದ್ದಿಯಾಗಬೇಕಾಗಿದೆ. ತಮ್ಮ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಂದು ನಡೆದ ಶ್ರಮದಾನದಲ್ಲಿ ಯುವ ಬ್ರಗೇಡ್ ಕಾರ್ಯಕರ್ತರೊಂದಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಐರನ್ ಮೌಂಟೆನ್‌ನ ಪ್ರಶಾಂತ್ ಹಿರೇಮಠ್, ಯುವ ಬ್ರಿಗೇಡ್‌ನ ಕೃಷ್ಣ, ರಘುವೀರ್, ಸಿದ್ದರಾಜು, ತೇಜಸ್, ರಾಜು, ಸಮಾಜ ಸೇವಕಿ ಆಶಾ.ವಿ. ಮುಂತಾದವರು ಶ್ರಮದಾನ ನೀಡಿದರು.
